ಜಂಟಿ ಪ್ರವೇಶ ಪರೀಕ್ಷೆ(JEE) ಮೇನ್ಸ್ ಪರೀಕ್ಷೆ ಎರಡನೇ ಅವಧಿಯನ್ನು ಜುಲೈ 21ರ ಬದಲಿಗೆ ಜುಲೈ 25ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ.
ಆದರೆ, ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ.
ಭಾರತ ಸೇರಿದಂತೆ ಒಟ್ಟು 17 ದೇಶಗಳಲ್ಲಿ ಪರೀಕ್ಷೆ ನಡೆಯಲಿದ್ದು ಸುಮಾರು 6.29ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರವೇಶ ಪತ್ರಿಕೆಗಳು ಗುರುವಾರದಿಂದ ಲಭ್ಯವಿರುತ್ತದೆ ಎಂದು NTA ತಿಳಿಸಿದೆ.

ಈ ಮೊದಲು ಎರಡನೇ ಅವಧಿಯ ಪರೀಕ್ಷೆಯನ್ನು ಜುಲೈ 21ರಿಂದ 30ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಮೊದಲ ಅವಧಿಯ ಪರೀಕ್ಷೆಯನ್ನು NTA ಜೂನ್ 23ರಿಂದ 29ರವರೆಗೆ ನಡೆಸಲಾಗಿತ್ತು .
ಮೊದಲ ಅವಧಿಯ ಫಲಿತಾಂಶವನ್ನು ಜುಲೈ 12ರಂದು ಪ್ರಕಟಿಸಲಾಗಿತ್ತು.