ಗುಂಡ್ಲುಪೇಟೆ ತಾಲ್ಲೂಕಿನ ಅಂಚಿನ ಲಕ್ಕಿಪುರ ಗ್ರಾಮದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೈತ ಹಾಗು ಹಸುವನ್ನು ಕೊಂದಿದ್ದು ತಿಂದಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ನೆರವಿನಿಂದ ಸೆರೆ ಹಡಿದಿದ್ದಾರೆ.
ಲಕ್ಕಿಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಶಿವಬಸಪ್ಪ ಎಂಬುವವರ ಬಾಳೆ ತೋಟದಲ್ಲಿ ಅಡಗಿದ್ದ ಹುಲಿ ಸೆರೆ ಹಿಡಿಯಲು ಭಾನುವಾರ ಬೆಳ್ಳಗ್ಗೆ 6 ಘಂಟೆಗೆ ಮಳೆ ನಡುವೆಯೇ ಕಾರ್ಯಾಚರಣೆ ಕೈಗೊಂಡಿದ್ದರು.
ಸಾಕಾನೆಗಳಾದ ಅಭಿಮನ್ಯು ಹಾಗು ಶ್ರೀಕಂಠನ ನೆರವಿನಿಂದ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು ಅರವಳಿಕೆ ಮದ್ದು ನೀಡಿ ಪ್ರಜ್ಷೆ ತಪ್ಪಿಸಿ ಸೆರೆ ಹಿಡಿದಿದ್ದಾರೆ.

ಅಂದಾಜು 10 ವರ್ಷ ವಯಸ್ಸಿನ ಹೆಣ್ಣು ಹುಲಿಯ ಎಡಗಾಲಿನ ಮೇಲೆ ಗಾಯಗಳಾಗಿದ್ದು ಹುಲಿಯನ್ನು ಮೈಸೂರಿನ ಕೂರ್ಗಹಳ್ಳಿಯಲ್ಲಿರುವ ಪುರ್ನವಸತಿ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹುಲಿ ಯೋಜನೆ ಪ್ರಾಧಿಕಾರದ ನಿರ್ದೇಶಕರಾದ ರಮೇಶ್ ಕುಮಾರ್, ಎಸಿಎಫ್ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.