ಮಹಾರಾಷ್ಟ್ರ ವಿಧಾನಸಬೆಯ ನೂತನ ಸಭಾಧ್ಯಕ್ಷರಾಗಿ ಕೊಲಬಾ ಕ್ಷೇತ್ರದ ಶಾಸಕ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಏಕನಾಥ್ ಶಿಂಧೆ ಹಾಗೂ ಫಡ್ನವೀಸ್ ಬಣ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಸ್ಪೀಕರ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾದ ರಾಜನ್ ಸಾಲ್ವಿರನ್ನು ಸೋಲಿಸಿ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಾರ್ವೇಕರ್ಗೆ ಒಟ್ಟು 164 ಮತಗಳು ಲಭಿಸಿದ್ದು ಎದುರಾಳಿ ರಾಜನ್ ಸಾಲ್ವಿಗೆ 107 ಮತಗಳು ಲಭಿಸಿವೆ. ಮೂವರು ಶಾಸಕರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.
ಕಾಕಾತಾಳಿಯ ಎಂಬಂತೆ ನಾರ್ವೇಕರ್ ಸೋದರ ಮಾವ ರಾಮರಾಜೇ ನಾಯ್ಕ್ ನಿಂಬಾಳ್ಕರ್ ಮಹಾರಾಷ್ಟ್ರ ವಿಧಾನಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಾವರ ಅವಧಿಯೂ ಜುಲೈ 8ರಂದು ಕೊನೆಗೊಳಲ್ಲಿದೆ.