ರಾಜಧಾನಿ ಬೆಂಗಳೂರಿಗೆ ಪ್ರಧಾನಿ ಬಂದು ಹೋದಾಗಿನಿಂದ ಒಂದಿಲ್ಲೊಂದು ಕಾಂಟ್ರವರ್ಸಿ ಬೆಳಕಿಗೆ ಬರ್ತಾನೆ ಇದೆ. ಸಿಟಿ ಜನ ಮೂರು ವರ್ಷ ಅತ್ತು ಗೋರೆದ್ರೂ ಹಾಕದ ಡಾಂಬರ್ ರಸ್ತೆ, ಮೋದಿಗಾಗಿ ರಾತ್ರೋ ರಾತ್ರಿ ಹಾಕಲಾಗಿರೋ ಬಗ್ಗೆಗಳ ಟೀಕೆಗಳು ವ್ಯಕ್ತವಾದ್ರೆ, ಹಾಕಿದ್ದ ರಸ್ತೆ ಮೂರೇ ದಿನಕ್ಕೆ ಕಿತ್ತು ಬಂದಿರೋದು ಬಿಬಿಎಂಪಿಯ ಮಾನ ಮರ್ಯಾದೇ ಹಜಾರು ಹಾಕಿದೆ. ಹೀಗೆ ರಸ್ತೆ ವಿಚಾರದಲ್ಲಿ ಸಾಲು ಸಾಲು ಅವಮಾನಗಳಿಗೆ ತುತ್ತಾಗಿರುವ ಬಿಬಿಎಂಪಿ ಸದ್ಯ ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದಲೂ ಛೀಮಾರಿ ಹಾಕಿಸಿಕೊಂಡಿದೆ.
ಸಿಲಿಕಾನ್ ಸಿಟಿ ಜನ ಸದ್ಯ ಬಿಬಿಎಂಪಿಯ ಕಳಪೆ ಕಾಮಗಾರಿಗಳ ಕುರಿತು ಛೀ ಥೂ ಅಂತಿದ್ದಾರೆ. ಪ್ರಧಾನಿಗಳ ಆಗಮನದ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿದ್ದ ಟಾರ್ ರಸ್ತೆಯ ಬಂಡಾವಳ ಮೂರೇ ದಿನಕ್ಕೆ ಬಯಲಾಗಿದೆ. ಹೀಗೆ ರಸ್ತೆ ವಿಚಾರದಲ್ಲಿ ಸಾಕಷ್ಟು ಅವಮಾನಗಳುಗೆ ತುತ್ತಾಗಿರುವ ಬಿಬಿಎಂಪಿ, ಸದ್ಯ ಮಹಾ ಎಡವಟ್ಟೊಂದನ್ನು ಮಾಡಿ, ಬೆಂಗಳೂರು ವಿವಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ತುತ್ತಾಗಿದೆ. ಬೆಂಗಳೂರು ವಿವಿ ಆವರಣದಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳ ಚಾಲನೆ ಪ್ರಧಾನಿಗಳು ಬರ್ತಾರೆ ಅನ್ನೊ ಕಾರಣ ವಿವಿಯೊಳಗಿನ ರೋಡ್ ಹಂಪ್ಗಳನ್ನೇ ಕಿತ್ತು ಹಾಕಲಾಗಿದೆ. ನಾಗರಬಾವಿ ಸರ್ಕಲ್‌ನಿಂದ ಮರಿಯಪ್ಪನಪಾಳ್ಯದ ವಿವಿ ಕುಲಪತಿಗಳ ಕ್ವಾರ್ಟಸ್ ವರೆಗಿನ 7 ಕಿಲೋಮೀಟರ್ ರೋಡಿನ ಎಲ್ಲಾ ಹಂಪ್ಗಳನ್ನು ತೆಗೆದುಹಾಕಲಾಗಿದೆ.

ನ್ಯಾಷನಲ್ ಲಾ ಕಾಲೇಜಿನಿಂದ ಮರಿಯಪ್ಪನಪಾಳ್ಯದ ರಸ್ತೆ, ಜ್ಞಾನ ಭಾರತಿ ಯೂನಿರ್ವಸಿಟಿ ಮೆಟ್ರೋ ಸ್ಟೇಷನ್ನಿಂದ ವಿವಿ ಕ್ವಾಟ್ರರ್ಸ್ ರಸ್ತೆಯಲ್ಲಿದ್ದ 22 ಹಂಪ್ಗಳನ್ನು ಏಕಾಏಕಿ ತೆಗೆದು ಹಾಕಲಾಗಿದೆ. ರೋಡ್ ಹಂಪ್ಗಳಿಲ್ಲದ ಕಾರಣ ವಿವಿ ಆವರಣದಲ್ಲಿ ಪ್ರತಿನಿತ್ಯ 5 ರಿಂದ 6 ಅಪಘಾತಗಳು ನಡೆಯುತ್ತಿದೆ. ರಸ್ತೆ ಕ್ರಾಸ್ ಮಾಡಲು ವಿದ್ಯಾರ್ಥಿಗಳು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಿಬಿಎಂಪಿ ಮಾಡಿರುವ ಕೆಲಸದ ವಿರುದ್ಧ ಬೆಂಗಳೂರು ವಿವಿ ಇಂಜಿನಿಯರ್ ವಿಭಾಗ ಪತ್ರ ಬರೆದು, ರೋಡ್ ಹಂಪ್ಸ್ ಹಾಕುವಂತೆ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಬಿಎಂಪಿ ಮುಖ್ಯ ಆಯುಕ್ತರು, ಆದಷ್ಟು ಬೇಗ ವಿವಿಯೊಳಗೆ ವೈಜ್ಞಾನಿಕವಾಗಿ ಹಂಪ್ಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.
ಒಂದು ಕಡೆ ರೋಡ್ ಹಂಪ್ಸ್ ತೆಗೆದಿರುವ ಬಿಬಿಎಂಪಿ, ವಿದ್ಯಾರ್ಥಿಗಳ ಆಟದ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಅದ್ವಾನ ಮಾಡಿದೆ. ಒಂದಲ್ಲ ಅಂತ ಮೂರು ಮೂರು ಹೆಲಿಪ್ಯಾಡ್ ನಿರ್ಮಿಸಿ ಮೈದಾನವನ್ನು ಹಾಳು ಮಾಡಿದೆ. ಐದಾರು ಗಂಟೆಗಳ ಪ್ರಧಾನಿಗಳ ಕಾರ್ಯಕ್ರಮಕ್ಕೆ ಈಡಿ ವಿವಿ ಅಂದವನ್ನೇ ಹಾಳು ಕೆಡವಿರೋ ಬಿಬಿಎಂಪಿ ವಿರುದ್ಧ ಜನಾಕ್ರೋಶ ಕೇಳಿ ಬಂದಿದೆ.