ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ಲಭಿಸಿದೆ. ದುನಿಯಾ ಸೂರಿ ಚಿತ್ರದಲ್ಲಿ ಮೊದಲ ಬಾರಿ ದರ್ಶನ್ ಅಭಿನಯಿಸಲಿದ್ದು, ಚಿತ್ರದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಆಕ್ಷನ್ ಮತ್ತು ಕ್ರೈಂ ಆಧಾರಿತ ಚಿತ್ರಗಳಿಗೆ ಹೆಸರಾದ ದುನಿಯಾ ಸೂರಿ ಮತ್ತು ಮತ್ತು ದರ್ಶನ್ ಕಾಂಬಿನೇಷನ್ ನಲ್ಲಿ ಮೊದಲ ಬಾರಿ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರದ ನಿರ್ಮಾಪಕರು ಸೇರಿದಂತೆ ಉಳಿದ ವಿಷಯಗಳು ಇನ್ನಷ್ಟೇ ಅಪ್ ಡೇಟ್ ಆಗಬೇಕಿದೆ.
ದುನಿಯಾ ಸೂರಿ ಟ್ವಿಟರ್ ನಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದು, ಈಗಾಗಲೇ ಅಂಬರೀಶ್ ಪುತ್ರ ಅಭಿಗಾಗಿ ಚಿತ್ರ ನಿರ್ಮಿಸಿರುವ ದುನಿಯಾ ಸೂರಿ ಮುಂದಿನ ಚಿತ್ರದಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಪ್ರಸ್ತುತ ಹರಿಕೃಷ್ಣ ನಿರ್ದೇಶನದ ಕ್ರಾಂತಿ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದು, ಈ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ನಂತರ ದರ್ಶನ್ , ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.