ಚಲಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಆನೆಯೊಂದು ಕಬ್ಬು ಮೆದ್ದಿರುವ ಘಟನೆ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ತಾಲೂಕಿನ ಪುಣಜನೂರು ಬಳಿ ನಡೆದಿದೆ.
ಕಳೆದ ಕೆಲವು ತಿಂಗಳುಗಳಿಂದ ಅಸನೂರು, ಕಾರೆಪಾಳ, ಪುಣಜನೂರು ಸುತ್ತಮುತ್ತ ಆನೆ ಕಬ್ಬು ಮೇಯುವುದು ನಿಂತಿತ್ತು. ಈಗ ಮತ್ತೇ ಇಂತಹ ಘಟನೆಗಳು ಆರಂಭಗೊಂಡಿದೆ.
ಆನೆಯೊಂದು ರಾಷ್ಟ್ರೀಯ ಹೆದ್ದಾರಿ ಸಮೀಪವೇ ಬೀಡುಬಿಡುತ್ತಿದ್ದು ಗುರುವಾರ ಕಬ್ಬು ತುಂಬಿದ ಲಾರಿ ಅಡ್ಡಗಟ್ಟಿ ಕಬ್ಬು ತಿಂದಿದೆ, ಇದನ್ನು ಎದುರಿನ ಬಸ್ ಚಾಲಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಈ ಆನೆಯ ದಾದಾಗಿರಿಗೆ ಓಂಕಾರ ಹಾಕಿದವರು ಲಾರಿ ಚಾಲಕರೇ ಎಂದು ತಿಳಿದುಬಂದಿದ್ದು ಆನೆ ಕಂಡ ಕೂಡಲೇ ಲಾರಿ ನಿಲ್ಲಿಸಿ ಕಬ್ಬು ತಿನ್ನಲು ಅನವು ಮಾಡಿಕೊಟ್ಟು ಅಭ್ಯಾಸ ಮಾಡಿಸಿದ್ದರಿಂದ ಈಗ ಯಾವುದೇ ಅಳುಕಿಲ್ಲದೇ ಲಾರಿ ಅಡ್ಡಗಟ್ಟಿ ವಸೂಲಿ ಮಾಡಲು ಪ್ರಾರಂಭಿಸಿರುವುದು ಸಂಚರಿಸುವವರಿಗೆ ಮುದವನ್ನೂ ನೀಡುತ್ತಿದೆ.