ತೆಲುಗಿನ ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಚಿತ್ರ ‘ಆರ್‌ಆರ್‌ಆರ್’ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಚಿತ್ರದ ಯಶಸ್ಸಿನ ನಡುವೆ, ಎರಡು ಪ್ರಮುಖ ಪಾತ್ರಗಳ ನಡುವಿನ ಕೆಮಿಸ್ಟ್ರಿಯಿಂದಾಗಿ ಈಗ ‘RRR’ ಮತ್ತೆ ಚರ್ಚೆಗೆ ಬಂದಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಸಾಹಸಮಯ ಚಿತ್ರವು ಬ್ರಿಟಿಷರ ವಿರುದ್ಧ ಧ್ವನಿ ಎತ್ತುವಇ ಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು (ರಾಮ್ ಚರಣ್) ಮತ್ತು ಕೊಮ್ರಂ ಭೀಮ್ (ಜೂನಿಯರ್ ಎನ್ ಟಿಆರ್) ಅವರ ಸುತ್ತ ಹೆಣೆಯಲಾಗಿದೆ. ಇಬ್ಬರು ನಟರ ನಡುವಿನ ಆಳವಾದ ಸ್ನೇಹವನ್ನು ಚಿತ್ರದಲ್ಲಿ ತೋರಿಸಲಾಗಿದೆ, ಇದರಿಂದಾಗಿ ವಿದೇಶಿ ಪ್ರೇಕ್ಷಕರು ಚಿತ್ರದಲ್ಲಿನ ಇಬ್ಬರೂ ನಟರ ಪಾತ್ರವನ್ನು ಬೇರೆಯೇ ಎಂದು ಅರ್ಥಮಾಡಿಕೊಂಡಿದ್ದಾರೆ.
ವಾಸ್ತವವಾಗಿ, ವಿದೇಶಿ ವೀಕ್ಷಕರು, ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ಜನರು, ‘RRR’ ಅನ್ನು ಸಲಿಂಗಕಾಮಿ ಪ್ರಣಯ ಎಂದು ಭಾವಿಸಿ ಟ್ವೀಟ್ ಮಾಡುತ್ತಿದ್ದಾರೆ., “(ಆರ್ ಆರ್ ಆರ್) ಅದ್ಭುತ ಆಕ್ಷನ್, ಸಾಹಸ, ಸೇಡಿನ ಚಿತ್ರ ಸರಿ, ಆದರೆ ಆರ್‌ಆರ್‌ಆರ್ ಸಲಿಂಗಕಾಮಿ ಚಿತ್ರ ಎಂದು ನಿಮ್ಮಲ್ಲಿ ಯಾರೂ ನನಗೆ ಏಕೆ ಹೇಳಲಿಲ್ಲ.” ಎಂದು ಪಾಶ್ಚಿಮಾತ್ಯ ವೀಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
ವಿದೇಶೀಯರು ಆರ್ ಆರ್ ಆರ್ ಅನ್ನು ಮೆಚುತ್ತಿರುವ ಬಗ್ಗೆ ಈ ಚಿತ್ರದ ಅಭಿಮಾನಿಗಳು ಹೆಮ್ಮೆ ಪಡುತ್ತಿರುವ ನಡುವೆ ಈ ಎಲ್ಲಾ ಟ್ವಿಟ್ಟರ್ ಪ್ರತಿಕ್ರಿಯೆಗಳನ್ನು ನೋಡಿ ಸಾಕಷ್ಟು ನಿರಾಶೆಗೊಂಡಿದ್ದಾರೆ. ಹಲವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಎರಡು ಪುರುಷರ ನಡುವೆ ಆಳವಾದ ಗೆಳೆತನ ಇರಬಹುದು, ನಿಮ್ಮ ವಾತಾವರಣ ಹಾಗೂ ಗ್ರಹಿಕೆಯಿಂದಾಗಿ ನಿಮಗೆ ಹಾಗೆ ಅನಿಸುತ್ತಿದೆ. ಆದರೆ ಆರ್‌ಆರ್‌ಆರ್ ಸಲಿಂಗ ಪ್ರೇಮದ ಚಿತ್ರ ಅಲ್ಲ ಎಂದು ಬರೆಯುತ್ತಿದ್ದಾರೆ.
ಪಾಶ್ಚಾತ್ಯ ವೀಕ್ಷಕರಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ ವರ್ಮಾ ಕೂಡಾ ಆರ್‌ಆರ್‌ಆರ್ ಸಲಿಂಗ ಪ್ರೇಮದ ಚಿತ್ರ ಎಂಬರ್ಥದಲ್ಲಿ ಟ್ವೀಟ್ ಮಾಡಿರುವುದು ಸಾಕಷ್ಟು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.