ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಸಾಮ್ರಾಟ್ ಪೃಥ್ವಿರಾಜ್ ಚಿತ್ರಕ್ಕೆ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯ್ತುಇ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಲಖನೌನಲ್ಲಿ ಚಿತ್ರತಂಡ ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂದು ಚಿತ್ರ ವೀಕ್ಷಿಸಿದ ನಂತರ ಯೋಗಿ ತೆರಿಗೆ ವಿನಾಯ್ತಿ ನಿರ್ಧಾರವನ್ನ ಪ್ರಕಟಿಸಿದ್ದಾರೆ.
ಇದು ನಮ್ಮ ಇತಿಹಾಸದ ಬಗ್ಗೆ ಮಾಡಿರುವ ಚಿತ್ರ ಸಕುಟುಂಬ ಸಮೇತರಾಗಿ ಎಲ್ಲರು ನೋಡಬಹುದಾದ ಚಿತ್ರ ಎಂದು ಶ್ಲಾಘಿಸಿದ್ದಾರೆ. ಸಾಮ್ರಾಟ್ ಪೃಥ್ವಿರಾಜ್ ಚಿತ್ರವು ಶುಕ್ರವಾರ ದೇಶಾದ್ಯಂತ ತೆರೆಕಾಣಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಾರಿಗೆ ಸಚಿವ ದಯಾ ಶಂಕರ್ ಸಿಂಗ್, ಸಚಿವರಾದ ಜೆಪಿಎಸ್ ರಾತೋಢ್, ಎ.ಕೆ.ಶರ್ಮ, ನಂದ ಗೋಪಾಲ್ ನಂದಿ ಗುಪ್ತಾ ಚಿತ್ರವನ್ನ ವೀಕ್ಷಿಸಿದ್ದರು.