ಬಾಲಿವುಡ್ ನಟ ಆರ್ಯಾನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣದಲ್ಲಿ ಆರಂಭಿಕ ತನಿಖೆ ನಡೆಸಿದ್ದ ಅಧಿಕಾರಿ ಸಮೀರ್ ವಾಂಖೇಡೆಗೆ ಸಂಕಷ್ಟ ಎದುರಾಗಿದ್ದು, 2 ಪ್ರಕರಣಗಳಲ್ಲಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆ ಇದೆ.
ಉದ್ದೀಪನ ನಿಗ್ರಹ ಘಟಕದ ಅಧಿಕಾರಿಯಾಗಿದ್ದ ಸಮೀರ್ ವಾಂಖೇಡೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವುದು ಹಾಗೂ ಆರ್ಯಾನ್ ಖಾನ್ ಪ್ರಕರಣದಲ್ಲಿ ಕಳಪೆ ತನಿಖೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಇದೀಗ ಈ ಎರಡೂ ಪ್ರಕರಣಗಳಲ್ಲಿ ಅವರ ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಸಮೀರ್ ವಾಂಖೇಡೆ ನಕಲಿ ಜಾತಿ ಪ್ರಮಾಣ ಇಲಾಖೆಗೆ ನೀಡಿದ್ದಾರೆ ಎಂದು ಮಾಜಿ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೇ ಆರ್ಯಾನ್ ಖಾನ್ ಡ್ರಗ್ಸ್ ಪ್ರಕರಣ ದಾಳಿ ವೇಳೆ ಕನಿಷ್ಠ ನಿಯಮಗಳನ್ನೂ ಅನುಸರಿಸದ ಕಾರಣ ಅವರ ವಿರುದ್ಧ ಸಾಕ್ಷ್ಯ ಒದಗಿಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಎನ್ ಸಿಬಿ ಛೀಮಾರಿಗೆ ಒಳಗಾಗಿದ್ದೂ ಅಲ್ಲದೇ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿ ಮುಖಭಂಗ ಎದುರಿಸುವಂತಾಗಿತ್ತು.