ಸರ್ಕಾರಿ ಮಹಿಳಾ ಉದ್ಯೋಗಿಯು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ, ಮರುಮದುವೆಯಾಗಿ ಮೂರನೇ ಬಾರಿ ಗರ್ಭಧರಿಸಿದರೆ ಹೆರಿಗೆ ರಜೆಗೆ ಅರ್ಹಳಾಗಿರುತ್ತಾಳೆ ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.
ಮಧ್ಯಪ್ರದೇಶದ ರಾಜ್ಯದ ಜಬಲ್ಪುರ ಜಿಲ್ಲೆಯ ಪೌರಿ ಕಲಾನ್ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರಿಯಾಂಕಾ ತಿವಾರಿ ಎಂಬುವವರು ವಿಚ್ಛೇದನದ ನಂತರ ಮರುಮದುವೆಯಾಗಿ ಗರ್ಭಿಣಿಯಾದರು. ನಾಗರಿಕ ಸೇವಾ ನಿಯಮಗಳ ಪ್ರಕಾರ, ಮಹಿಳಾ ಉದ್ಯೋಗಿ ಎರಡು ಬಾರಿ ಮಾತ್ರ ಹೆರಿಗೆ ರಜೆಗೆ ಅರ್ಹರಾಗಿರುವುದರಿಂದ, ಅವರು ಮೂರನೇ ಬಾರಿಗೆ ನನಗೆ ಹೆರಿಗೆ ರಜೆ ಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
“ನನ್ನ ಮೊದಲ ಮದುವೆ 2002 ರಲ್ಲಿ ಮತ್ತು 2018 ರಲ್ಲಿ ವಿಚ್ಛೇದನ ಪಡೆದಿದ್ದೇನೆ. ನಾನು 2021 ರಲ್ಲಿ ಮರುಮದುವೆಯಾಗಿ ಈಗ ಗರ್ಭಿಣಿಯಾಗಿದ್ದೇನೆ. ಆದರೆ ನಿಯಮಗಳು 3ನೇ ಬಾರಿಗೆ ಹೆರಿಗೆ ರಜೆ ತೆಗೆದುಕೊಳ್ಳುವುದನ್ನು ತಡೆಯುತ್ತದೆ. ವಿಚ್ಛೇದನದ ನಂತರ ಮಹಿಳಾ ಉದ್ಯೋಗಿ ಮರುಮದುವೆಯಾದರೆ, ಆಕೆ ಎರಡಕ್ಕಿಂತ ಹೆಚ್ಚು ಹೆರಿಗೆ ರಜೆ ಪಡೆಯ ಅನುವು ನೀಡಬೇಕು ಎಂದು ಪ್ರಿಯಾಂಕಾ ತಿವಾರಿ ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಪರಿಸ್ಥಿತಿಯ ತುರ್ತು ದೃಷ್ಟಿಯಿಂದ, ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಪ್ರಿಯಾಂಕಾ ತಿವಾರಿಗೆ 3ನೇ ಬಾರಿಗೆ ಹೆರಿಗೆ ರಜೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯನ್ನು ಆದೇಶಿಸಿದೆ.