ಪ್ರಸಿದ್ದ ಧಾರ್ಮಿಕ ಸ್ಥಳ ವಾರಣಾಸಿ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಯನ್ನು ಬಾಬ್ರಿ ಮಸೀದಿಯಂತೆ ಕೆಡವಲಾಗುವುದು ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂಗೀತ್ ಸೋಮ್ ಹೇಳಿಕೆ ನೀಡಿದ್ದು ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ.
ಬಾಬ್ರಿ ಮಸೀದಿಯನ್ನು 1992ರಲ್ಲಿ ಕೆಡವಲಾಗಿತ್ತು ಈಗ 2022ರಲ್ಲಿ ಜ್ಞಾನವಾಪಿ ಮಸೀದಿಯನ್ನು ನಾವು ಕೆಡವಿಯೇ ತೀರುತ್ತೇವೆ ಎಂದು ಮೀರತ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಬಹಳ ವರ್ಷಗಳ ಹಿಂದೆ ಮುಸ್ಲಿಂ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಾರೆ ಅದನ್ನು ಹಿಂಪಡೆಯುವುದಕ್ಕೆ ಕಾಲ ಕೂಡಿ ಬಂದಿದೆ ಎಂದು 2013ರ ಮುಜಾಫರ್ನಗರ ಗಲಭೆಯ ಪ್ರಮುಖ ಆರೋಪಿ ಸೋಮ್ ಹೇಳಿದ್ದಾರೆ.
ಬಾಬ್ರಿ ಮಸೀದಿ ಕೆಡವಿದ ದಿನವೇ ಅವರಿಗೆ ತಿಳಿದಿರಬೇಕಿತ್ತು ದೇಶ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ನಾವು ಯಾವುದೇ ವಿವಾದಾತ್ಮಕ ಮಸೀದಿಗಳನ್ನು ಬಿಡುವುದಿಲ್ಲ ಮತ್ತು ಅವೆಲ್ಲವನ್ನು ಕೆಡವುತ್ತೇವೆ ಎಂದು ಹೇಳಿದ್ದಾರೆ.
ಅನೇಕ ವರ್ಷಗಳಿಂದ ರಾಮಲಲ್ಲಾನ ವಿಗ್ರಹ ಯಾವುದೇ ಪ್ರತಿಷ್ಠಾಪನೆ ಕಾಣದೆ ಹಾಗೆಯೇ ಉಳಿದಿತ್ತು ಆದರೆ, ಇವಾಗ ಅದಕ್ಕಾಗಿ ಒಂದು ಭವ್ಯ ಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟಿಸಲಾಗುತ್ತಿದೆ. ಬಾಬ್ರಿ ಮಸೀದಿಯ ಒಂದೇ ಒಂದು ಇಟ್ಟಿಗೆ ನಿಮ್ಮೆಗ ಕಾಣ ಸಿಗುವುದಿಲ್ಲ ಅದೇ ರೀತಿ ಜ್ಞಾನವಾಪಿ ಮಸೀದಿಗೆ ಆಗುತ್ತದೆ ಎಂದು ಹೇಳಿದ್ದಾರೆ.