ಜುಲೈ 2017 ರಲ್ಲಿ ಮೆಹ್ಸಾನಾ ಪಟ್ಟಣದಿಂದ ಪೊಲೀಸ್ ಅನುಮತಿಯಿಲ್ಲದೆ ರ್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ಗುಜರಾತ್ನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಮಂದಿಯನ್ನು ಗುಜರಾತ್ನ ಮೆಹ್ಸಾನಾದ ಮ್ಯಾಜಿಸ್ಟ್ರಿಯಲ್ ನ್ಯಾಯಾಲಯವು ಗುರುವಾರ ದೋಷಿ ಎಂದು ತೀರ್ಪು ನೀಡಿದೆ. ಎಲ್ಲಾ ಅಪರಾಧಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ದಂಡ ವಿಧಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜೆ ಎ ಪರ್ಮಾರ್ ಅವರ ನ್ಯಾಯಾಲಯವು ತೀರ್ಪು ನೀಡಿದ್ದು, “ರ್ಯಾಲಿ ನಡೆಸುವುದು ಅಪರಾಧವಲ್ಲ ಆದರೆ ಅನುಮತಿಯಿಲ್ಲದೆ ರ್ಯಾಲಿ ನಡೆಸುವುದು ಅಪರಾಧ”. “ಅವಿಧೇಯತೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನಾಯಕಿ ರೇಷ್ಮಾ ಪಟೇಲ್ ಕೂಡ ಶಿಕ್ಷೆಗೊಳಗಾದವರಲ್ಲಿ ಒಬ್ಬರಾಗಿದ್ದಾರೆ.
ಉನಾದಲ್ಲಿ ಕೆಲವು ದಲಿತರ ಮೇಲೆ ನಡೆದ ಹಲ್ಲೆಯ ಖಂಡಿಸಿ ಜುಲೈ 12, 2017 ರಂದು ದೊಡ್ಡ ಪ್ರಮಾಣದ ಆಂದೋಲನ ಮಾಡಿದ್ದರು. ಮೇವಾನಿ ಮತ್ತು ಅವರ ಸಹಚರರು ಮೆಹ್ಸಾನಾದಿಂದ ನೆರೆಯ ಬನಸ್ಕಾಂತದ ಧನೇರಾಗೆ ‘ಆಜಾದಿ ಕೂಚ್’ ಅನ್ನು ನಡೆಸಿದರು.
ಮೇವಾನಿ ಅವರ ಸಹಚರರಲ್ಲಿ ಒಬ್ಬರಾದ ಕೌಶಿಕ್ ಪರ್ಮಾರ್ ಅವರು ಸ್ಥಾಪಿಸಿದ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ಎಂಬ ಸಂಘಟನೆಯ ಬ್ಯಾನರ್ ಅಡಿಯಲ್ಲಿ ರ್ಯಾಲಿಗೆ ಮೆಹ್ಸಾನಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ನಲ್ಲಿ ಅನುಮತಿ ಕೋರಿದ್ದರು. ಆರಂಭದಲ್ಲಿ ನೀಡಲಾಗಿದ್ದರೂ ಬಳಿಕ ಅದನ್ನು ಅಧಿಕಾರಿಗಳು ಹಿಂಪಡೆದಿದ್ದರು ಆದರೂ ಆಯೋಜಕರು ರ್ಯಾಲಿ ನಡೆಸಿದರು.
10 ಆರೋಪಿಗಳಿಗ ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿ ನ್ಯಾಯಾಲಯ, ಅವರು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶವನ್ನು ಸೂಕ್ತ ಉನ್ನತ ಅಧಿಕಾರಿಗಳ ಮುಂದೆ ಪ್ರಶ್ನಿಸಬಹುದಿತ್ತು ನಂತರ ಸರಿಯಾದ ಅನುಮತಿ ಪಡೆದ ರ್ಯಾಲಿ ಮಾಡಬಹುದಿತ್ತು ಎಂದು ಗಮನಿಸಿದೆ.
ರ್ಯಾಲಿಯ ನಂತರ, ಮೆಹ್ಸಾನಾ ಪೊಲೀಸರು ಮೇವಾನಿ ಮತ್ತು ಇತರರ ವಿರುದ್ಧ ಮೆರವಣಿಗೆ ನಡೆಸಲು ಅನುಮತಿ ಇಲ್ಲದಿದ್ದರೂ ರ್ಯಾಲಿ ಮಾಡಿದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 143 ರ ಅಡಿಯಲ್ಲಿ ಕೇಸ್ ದಾಖಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ರ್ಯಾಲಿಯಲ್ಲಿ ಈಗ ಕಾಂಗ್ರೆಸ್ನ ಭಾಗವಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್ಯುಎಸ್ಯು) ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಕೂಡ ಭಾಗವಹಿಸಿದ್ದರು. ಪ್ರಕರಣದ ಆರೋಪಿಗಳಲ್ಲಿ ಈತ ಕೂಡ ಒಬ್ಬರಾಗಿದ್ದಾರೆ.
ಆದರೆ ಕಳೆದ ವರ್ಷ ಏಪ್ರಿಲ್ನಲ್ಲಿ ಆರೋಪಿಯ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸುವ ಸಮಯದಲ್ಲಿ ಕನ್ಹಯ್ಯಾ ಕುಮಾರ್ ಗೈರುಹಾಜರಾಗಿದ್ದರಿಂದ, ಅವರ ವಿರುದ್ಧ ಪ್ರತ್ಯೇಕ ವಿಚಾರಣೆಯನ್ನು ನಡೆಸುವಂತೆ ಆದೇಶ ನೀಡಿತ್ತು.
ಮೃತರಾದ ವ್ಯಕ್ತಿ ಮತ್ತು ಕನ್ನಯ್ಯ ಕುಮಾರ್ ಹೊರತುಪಡಿಡಸಿ.ಕಳೆದ ವರ್ಷ ಏಪ್ರಿಲ್ನಲ್ಲಿ ಮೇವಾನಿ ಸೇರಿದಂತೆ 10 ಮಂದಿಯ ವಿರುದ್ಧ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು.
ಕಳೆದ ತಿಂಗಳು ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ವಿವಿಧ ಆರೋಪಗಳ ಮೇಲೆ ಎರಡು ಬಾರಿ ಬಂಧಿಸಿದ್ದರು. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ನೀಡಿದ ದೂರಿನ ಮೇರೆಗೆ ಅವರನ್ನು ಏಪ್ರಿಲ್ 20 ರಂದು ಗುಜರಾತ್ನ ಬನಸ್ಕಾಂತ ಜಿಲ್ಲೆಯಿಂದ ಬಂಧಿಸಲಾಯಿತು ಮತ್ತು ಮರುದಿನ ಬೆಳಿಗ್ಗೆ ಗುವಾಹಟಿಗೆ ಹಾರಿಸಲಾಯಿತು.
ಏಪ್ರಿಲ್ 25 ರಂದು, ಕೊಕ್ರಜಾರ್ ನ್ಯಾಯಾಲಯದಿಂದ ಮೇವಾನಿ ಅವರಿಗೆ ಜಾಮೀನು ನೀಡಲಾಯಿತು, ಆದರೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇಲೆ ಮತ್ತೆ-ಅರೆಸ್ಟ್ ಮಾಡಲಾಯಿತು. ಎರಡನೇ ಪ್ರಕರಣದಲ್ಲಿ ಕಳೆದ ಶುಕ್ರವಾರ ಜಾಮೀನು ಪಡೆದು ಶನಿವಾರ ಜೈಲಿನಿಂದ ಹೊರಬಂದು ಈ ವಾರ ಗುಜರಾತ್ಗೆ ಮರಳಿದ್ದರು.