ಬ್ಯಾಟಿಂಗ್ ದುರಂತ ಕಂಡ ರಾಯಲ್ ಚಾಲೆಂಜರ್ಸ್ ಹೈದರಾಬಾದ್ ತಂಡ 9 ವಿಕೆಟ್ ಗಳ ಹೀನಾಯ ಸೋಲು ಕಂಡರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 8 ಓವರ್ ಗಳಲ್ಲಿ ಜಯಭೇರಿ ಬಾರಿಸಿದೆ.
ಅಹಮದಾಬಾದ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗಳಿಗೆ ಆಲೌಟಾಯಿತು. ಸನ್ ರೈಸರ್ಸ್ ಹೈದಾಬಾದ್ ತಂಡ 8 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಸುಲಭ ಗುರಿ ಬೆಂಬತ್ತಿದ ಹೈದರಾಬಾದ್ ಪರ ಅಭಿಷೇಕ್ ಶರ್ಮ 28 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 47 ರನ್ ಸಿಡಿಸಿ ಔಟಾದರೆ, ನಾಯಕ ಕೇನ್ ವಿಲಿಯಮ್ಸನ್ 20 ರನ್ ಗಳಿಸಿ ಔಟಾಗದೇ ಉಳಿದರು.