ರಾಜ್ಯದಲ್ಲಿ ಅಜಾನ್ ವಿರುದ್ಧ ಅಭಿಯಾನ ಶುರುವಾಗಿ ದಿನಗಳು ಹಲವಾಯ್ತು. ಆದರೀಗ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ನಿಯಮ ಮೀರಿ ಶಬ್ಧ ಮಾಡದಂತೆ ನಗರದ ದೇವಾಲಯಗಳಿಗೂ ನೋಟಿಸ್ ಜಾರಿಯಾಗಿವೆ. ಇದರ ಜತೆಜತೆಯಲ್ಲೇ ನಗರದ ಹಲವು ದೇವಾಲಯಗಳಿಗೆ ಮೌಖಿಕವಾಗಿ ಹೆಚ್ಚು ಶಬ್ದ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ನಗರದ ದೇವಾಲಯಗಳಿಗೆ ಶಬ್ಧ ಮಾಡದಂತೆ ನೋಟಿಸ್
ಅಜಾನ್ ವಿರುದ್ಧ ಕ್ಯಾಂಪೇನ್ ನಡೆಯುತ್ತಿದೆ. ಅದರ ಬೆನ್ನಲ್ಲೆ ದೇವಾಲಯಗಳಿಗೂ ಶಬ್ಧ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ನೂರಾರು ಮಸೀದಿ ದೇವಾಲಯಗಳಿಗೂ ನೋಟಿಸ್ ನೀಡಲಾಗಿದ್ದು, ನಿನ್ನೆ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೂ ಧ್ವನಿವರ್ಧಕ ಬಳಸಿ ಶಬ್ಧ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರ ಬೆನ್ನಲ್ಲೇ ನಗರದ ಬಹುತೇಕ ದೇವಾಲಯಗಳಿಗೆ ಇಂದು ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ.

ದೇವಾಲಯಗಳಿಗೆ ಮೌಖಿಕವಾಗಿ ಎಚ್ಚರಿಕೆ ನೀಡಿದ ಪೊಲೀಸರು
ಗಂಗಮ್ಮ ದೇವಾಲಯ, ಸರ್ಕಲ್ ಮಾರಮ್ಮ ಸೇರಿದಂತೆ ಬಹುತೇಕ ದೇವಾಲಯಗಳಿಗೆ ನೋಟಿಸ್ ಜೊತೆಗೆ ಪೊಲೀಸರು ಮೌಖಿಕವಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಲ್ಲೇಶ್ವರದ ಗಂಗಮ್ಮ ದೇವಸ್ಥಾನದ ಅಧ್ಯಕ್ಷ ಸುಧಾಕರ್, ನಮ್ಮ ದೇವಸ್ಥಾನದಲ್ಲಿ ಇಲ್ಲಿಯವರೆಗೆ ಮೈಕ್ ಬಳಸಿಲ್ಲ. ಹಬ್ಬದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆದು ಬಳಸುತ್ತೇವೆ. ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ನೋಟಿಸ್ ಕೊಟ್ಟಿಲ್ಲ ಬದಲಿಗೆ ಮೌಖಿಕವಾಗಿ ಎಚ್ಚರಿಸಿದ್ದಾರೆ ಎಂದೇಳಿದ್ದಾರೆ.
ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಾಗಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಡೆಸಿಬಲ್ ಮೀರಬಾರದು ಎನ್ನುವ ಉದ್ದೇಶದಿಂದ ಪೊಲೀಸರು ಮೌಖಿಕವಾಗಿ ದೇವಾಲಯಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಹಿಂದೂ ಪರ ಸಂಘಟನೆಗಳು ಮನೆ ಮನೆಗೆ ಮೈಕ್ ಕಟ್ಟಿಸಿ ರಾಮಜಪ ಮಾಡಿಸಲು ಮುಂದಾಗಿದ್ದಾರೆ. ಹಿಂದೂ ಪರ ಸಂಘಟನೆಗಳು ಮೇ 9ರ ವರೆಗೆ ಮಸೀದಿ ಮೇಲಿರುವ ಮೈಕ್ ತೆಗಿಸಲು ಸರ್ಕಾರಕ್ಕೆ ಗುಡುವು ಕೊಟ್ಟಿದೆ. ಅದಾಗಿಯೂ ತೆಗೆಸಿದಿದ್ದರೆ, ರಾಜ್ಯದಲ್ಲಿ ಒಂದು ಕೋಟಿ ಮನೆಗಳ ಮೇಲೆ ಧ್ವನಿವರ್ಧಕ ಕಟ್ಟಿಸಿ ಹನುಮಾನ್ ಚಾಲೀಸ, ರಾಮ ನಾಮ, ಇತರೆ ಭಜನೆಗಳನ್ನು ಹೇಳಿಸಲು ಮುಂದಾಗಿದೆ. ಒಟ್ಟಾರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋಮ ಸಂಘರ್ಷ ಹೆಚ್ಚಾಗುತ್ತಿದ್ದು, ಸರ್ಕಾರ ಮೌನ ವಹಿಸುತ್ತಿರುವುದು ನೋಡಿದರೆ, ಹಿಂಬಂದಿಯಿಂದ ಇದಕ್ಕೆಲ್ಲಾ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂಬ ಅನುಮಾನ ಕಾಡತೊಡಗಿದೆ.