• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತೇಜಸ್ವಿ ಯಾದವ್‌ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ನಿತೀಶ್‌ ಕುಮಾರ್‌ ಭಾಗಿ: ಬಿಜೆಪಿಗೆ ನೀಡಿದ ಪರೋಕ್ಷ ಸಂದೇಶವೇ?

ಫೈಝ್ by ಫೈಝ್
April 23, 2022
in ದೇಶ, ರಾಜಕೀಯ
0
ತೇಜಸ್ವಿ ಯಾದವ್‌ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ನಿತೀಶ್‌ ಕುಮಾರ್‌ ಭಾಗಿ: ಬಿಜೆಪಿಗೆ ನೀಡಿದ ಪರೋಕ್ಷ ಸಂದೇಶವೇ?
Share on WhatsAppShare on FacebookShare on Telegram

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಹಿಂದುತ್ವವಾದಿ ಬಿಜೆಪಿಯೊಂದಿಗೆ ಮೈತ್ರಿಯಾಗಿರುವ ನಿತೀಶ್‌ ಕುಮಾರ್‌ ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬೋಚಹಾನ್ ಉಪಚುನಾವಣೆಯಲ್ಲಿ ಆರ್‌ಜೆಡಿ ಜಯಗಳಿಸಿದ ಕೆಲವು ದಿನಗಳ ನಂತರ, ತೇಜಸ್ವಿ ಯಾದವ್ ಅವರು ಈ ಇಫ್ತಾರ್‌ ಕೂಟವನ್ನು ಶಕ್ತಿ ಪ್ರದರ್ಶನವಾಗಿ ಆಯೋಜಿಸಿದ್ದಾರೆ ಹೇಳಲಾಗಿದೆ.

ADVERTISEMENT

ಇಫ್ತಾರ್ ಕೂಟಕ್ಕಾಗಿ ಆರ್‌ಜೆಡಿ ನಾಯಕನ ಪಾಟ್ನಾ ಮನೆಗೆ ಬಂದ ಇತರರಲ್ಲಿ ಬಿಜೆಪಿ ನಾಯಕರಾದ ಅವಧೇಶ್ ನಾರಾಯಣ ಸಿಂಗ್ ಮತ್ತು ಸೈಯದ್ ಶಾನವಾಜ್ ಹುಸೇನ್, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ತೇಜಸ್ವಿ ಯಾದವ್ ಅವರ ಒಡಹುಟ್ಟಿದ ತೇಜ್ ಪ್ರತಾಪ್ ಯಾದವ್ ಮತ್ತು ಮಿಸಾ ಭಾರತಿ ಮತ್ತು ಅವರ ತಾಯಿ ರಾಬ್ರಿ ದೇವಿ ಕೂಡಾ ಸೇರಿದ್ದಾರೆ.

ಐದು ವರ್ಷಗಳ ನಂತರ ತೇಜಸ್ವಿ ಯಾದವ್ ಅವರ ಮನೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್ ಭಾಗವಹಿಸಿದ್ದರು. ಕೊನೆಯದಾಗಿ 2017 ರಲ್ಲಿ ಬಿಹಾರದ ಮಹಾಮೈತ್ರಿಕೂಟವನ್ನು ತ್ಯಜಿಸಿದ ನಿತೀಶ್‌ ಕುಮಾರ್‌, ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದು. ಆಗ ನಿತೀಶ್ ಕುಮಾರ್ ಮತ್ತು ಲಾಲು ಯಾದವ್ ಕುಟುಂಬದ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿತ್ತು.

“ನಾನು ಮತ್ತು ಸುಶೀಲ್ ಮೋದಿ ಜಿ ಇಫ್ತಾರ್ ಆಯೋಜಿಸಿದ್ದೆವು, ಆಗ ನಿತೀಶ್ ಕುಮಾರ್ ಕೂಡ ಅಲ್ಲಿಗೆ ಬಂದಿದ್ದರು. ಇದೀಗ ಇಲ್ಲಿ ತೇಜಸ್ವಿ ಯಾದವ್ ಇಫ್ತಾರ್‌ ಕೂಟ ಆಯೋಜಿಸಿದ್ದಾರೆ. ನಮಗೆ ಆಹ್ವಾನವಿದೆ, ಆದ್ದರಿಂದ ನಾವು ಬಂದಿದ್ದೇವೆ, ಇದನ್ನು ಯಾವುದೇ ರಾಜಕೀಯ ವಿಷಯ ಮಾಡುವ ಅಗತ್ಯವಿಲ್ಲ” ಎಂದು ಸೈಯದ್ ಶಾನವಾಜ್ ಹುಸೇನ್ ಹೇಳಿದ್ದಾರೆ.  .

ನಿತೀಶ್ ಕುಮಾರ್ ಅವರನ್ನು ದೆಹಲಿಗೆ ಕಳುಹಿಸುವ ಮತ್ತು ಬಿಹಾರಕ್ಕೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ಪಡೆಯುವ ಬಿಜೆಪಿಯ ಉದ್ದೇಶದ ಬಗ್ಗೆ ಇತ್ತೀಚಿಗೆ ಎದ್ದ ವದಂತಿಗಳ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ತಮ್ಮ ಮಾಜಿ ಮಹಾಮೈತ್ರಿಕೂಟದ ಪಾಲುದಾರರ ಆತಿಥ್ಯ ವಹಿಸಿರುವುದು ಗಮನಾರ್ಹವಾಗಿದೆ. ನಿತೀಶ್ ಕುಮಾರ್ ನವೆಂಬರ್ 2020 ರಲ್ಲಿ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾದರು, ಅವರ ಜೆಡಿಯು 43 ಸ್ಥಾನಗಳನ್ನು ಗೆಲ್ಲುವ ಮೂಲಕ ನೀರಸ ಪ್ರದರ್ಶನ ನೀಡಿದ ಹೊರತಾಗಿಯೂ ಬಿಜೆಪಿಯ 74 ಸ್ಥಾನಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು.

ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಬಿಜೆಪಿಯ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕು ಎಂದು ಕೆಲವು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ, ರಾಷ್ಟ್ರಪತಿ ಚುನಾವಣೆಗೆ ಅಥವಾ ರಾಜ್ಯಸಭೆಗೆ ನಿತೀಶ್‌ ಕುಮಾರ್‌ ರನ್ನು ಕಳುಹಿಸುವ ಉತ್ಸಾಹದಲ್ಲಿ ಬಿಜೆಪಿ ಇದೆ ಎಂಬ ಊಹಾಪೋಹಗಳು ಬಿಹಾರ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬಂದಿದೆ.

Tags: BJPBJP Ally Nitish Kumars Message As He Attends Tejashwi Yadavs IftarCongress Partyನರೇಂದ್ರ ಮೋದಿಬಿಜೆಪಿ
Previous Post

ನೋಬಾಲ್‌ ವಿವಾದ: ಡೆಲ್ಲಿ ಕೋಚ್‌ ಪ್ರವೀಣ್‌ ಗೆ ನಿಷೇಧ, ಪಂತ್‌ ಗೆ ಭಾರೀ ದಂಡ!

Next Post

ಐಪಿಎಲ್‌:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮೊದಲ ತಂಡ ಗುಜರಾತ್!

Related Posts

ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!
ರಾಜಕೀಯ

ಒಂದೆಡೆ ಸಿದ್ದರಾಮಯ್ಯ ಬಣ, ಮತ್ತೊಂದೆಡೆ ಡಿಕೆಶಿ ಕಸರತ್ತು; ದೆಹಲಿ ದಂಗಲ್ ಶುರು!

by ಪ್ರತಿಧ್ವನಿ
May 26, 2026
0

ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಭಾರೀ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಯತ್ತ ಪ್ರತ್ಯೇಕವಾಗಿ...

Read moreDetails
ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

ಬೆಂಗಳೂರು ರಾಜಕೀಯಕ್ಕೆ ವಿಜಯ್ ಎಂಟ್ರಿ? ಗ್ರೇಟರ್ ಬೆಂಗಳೂರು ಚುನಾವಣೆಗೆ ಟಿವಿಕೆ ಮಾಸ್ಟರ್ ಪ್ಲಾನ್!

May 26, 2026
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದೆಹಲಿ ಬುಲಾವ್ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ಇಲ್ಲಿದೆ: ಏನಿದೆ ಕಾಂಗ್ರೆಸ್ ಲೆಕ್ಕಾಚಾರ?

May 25, 2026
ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

ದಿಢೀರ್ ದೆಹಲಿ ಬುಲಾವ್! ಸಿದ್ದರಾಮಯ್ಯ ಭೇಟಿ ರಾಜ್ಯ ರಾಜಕಾರಣದಲ್ಲಿ ಸಂಚಲನ

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
Next Post
ಐಪಿಎಲ್‌:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮೊದಲ ತಂಡ ಗುಜರಾತ್!

ಐಪಿಎಲ್‌:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮೊದಲ ತಂಡ ಗುಜರಾತ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada