ರಾಜಾಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನೋಬಾಲ್ ವಿಷಯದಲ್ಲಿ ಮೈದಾನ ಪ್ರವೇಶಿಸಿದ್ದೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಪ್ರವೀಣ್ ಆಮ್ರಗೆ ಒಂದು ಪಂದ್ಯದ ನಿಷೇಧ ವಿಧಿಸಲಾಗಿದ್ದರೆ, ನಾಯಕ ರಿಷಭ್ ಪಂತ್ ಗೆ ಪಂದ್ಯ ಶುಲ್ಕದ ಶೇ.೧೦೦ರಷ್ಟು ದಂಡ ವಿಧಿಸಲಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ಕೊನೆಯ ಓವರ್ ನಲ್ಲಿ ರಾಜಸ್ಥಾನ್ ತಂಡದ ಆಟಗಾರರ ಉದ್ಘಟತನದ ವರ್ತನೆಗೆ ಐಪಿಎಲ್ ಆಡಳಿತ ಮಂಡಳಿ ದಂಡ ವಿಧಿಸಿದೆ.
ಐಪಿಎಲ್ ನೀತಿ ಸಂಹಿತೆಯ ನಿಯಮ 2.7 ಅಡಿಯಲ್ಲಿ 2ನೇ ಹಂತದ ಅಪರಾಧಕ್ಕೆ ಪಂತ್‌ಗೆ ಶೇ.100ರಷ್ಟು ದಂಡಶುಲ್ಕ ವಿಧಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೂ ಪಂದ್ಯದ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಪಂದ್ಯದ ವೇಳೆ ಅಂಗಳಕ್ಕೆ ಇಳಿದು 3ನೇ ಅಂಪೈರ್‌ಗೆ ಮನವಿ ಮಾಡುವಂತೆ ಒತ್ತಾಯಿಸಿದಕ್ಕಾಗಿ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೂ 2.2ರ ನಿಯಮದ ಪ್ರಕಾರ ಶೇ.100 ದಂಡ ವಿಧಿಸುವ ಜೊತೆಗೆ ಮುಂದಿನ ಒಂದು ಪಂದ್ಯದಿಂದ ನಿಷೇಧಿಸಿದೆ.
ಐಪಿಎಲ್ ನಿಯಮದ ಪ್ರಕಾರ ಪಂದ್ಯದ ಅವಧಿ ಮುಗಿಯುವವೆರೆಗೆ ಯಾವುದೇ ನಿರ್ಧಾರಗಳನ್ನು ಕ್ರೀಸ್‌ನಲ್ಲಿರುವವರೇ ಬಗೆಹರಿಸಿಕೊಳ್ಳಬೇಕು. ಅಂಪೈರ್ ತೀರ್ಪು ಪರಿಶೀಲನೆ ಮಾಡುವುದಿದ್ದರೂ ಬ್ಯಾಟರ್‌ಗಳೇ ಮನವಿ ಮಾಡಬೇಕು. ಒಂದು ವೇಳೆ ಪಂದ್ಯ ನಡೆಯುವ ವೇಳೆ ಉಳಿದವರು ಅಪೀಲ್ ಮಾಡುವಂತೆ ಒತ್ತಾಯಿಸುವುದು, ಅವರನ್ನು ಹೊರಬರುವಂತೆ ಸೂಚನೆ ನೀಡುವುದು ಅವರ ಪರವಾಗಿ ಅಪೀಲ್ ಮಾಡಲು ಕ್ರೀಡಾಂಗಣಕ್ಕೆ ಬರುವಂತಿಲ್ಲ.