ವಿದ್ಯಾರ್ಥಿಗಳು ಒಂದೇ ಅಥವಾ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಭೌತಿಕವಾಗಿ ಎರಡು ಪೂರ್ಣ ಸಮಯದ ಪದವಿಗಳನ್ನು ಪಡೆಯಬಹುದು ಎಂದು UGC ಅಧ್ಯಕ್ಷ ಜಗದೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಆದಷ್ಟು ಬೇಗ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಘೋಷಿಸಿರುವಂತೆ ವಿದ್ಯಾರ್ಥಿಗಳು ಬಹು ಕೌಶಲ್ಯವನ್ನು ಪಡೆಯುವ ಸಲುವಾಗಿ UGC ಅಭ್ಯರ್ಥಿಯು ಏಕಕಾಲದಲ್ಲಿ ಭೌತಿಕ ಕ್ರಮದಲ್ಲಿ ಎರಡು ಪದವಿಗಳನ್ನು ಪಡೆಯಬಹುದು ಇದಕ್ಕಾಗಿ ಸೂಕ್ತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳು ಒಂದೇ ಅಥವಾ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಬಹುದು ಎಂದು ಸುದ್ದಿಘೋಷ್ಠಿಯಲ್ಲಿ ಜಗದೇಶ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಏಕಕಾಲದಲ್ಲಿ ಆನ್ಲೈನ್ ಹಾಗೂ ಭೌತಿಕ ತರಗತಿಗೆ ಹಾಜರಾಗುವ ಮೂಲಕ ತಮ್ಮ ಪದವಿಯನ್ನಿ ಪಡೆಯಬಹುದು ಎಂದು ಹೇಳಿದ್ದಾರೆ.