ಕೇಬಲ್ ಕಾರ್ ಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಜಾರ್ಖಂಡ್ ನ ದಿಯೋಘರ್ ನ ತ್ರಿಕೂಟ ಬೆಟ್ಟದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಸುಮಾರು ೫೦ ಅಡಿ ಎತ್ತರದಲ್ಲಿ ಸುಮಾರು 48 ಪ್ರವಾಸಿಗರು 16 ಗಂಟೆಗಳಿಂದ ಸಿಲುಕಿದ್ದಾರೆ.

372 ಮೀ. ಉದ್ದದ ದೇಶದ ಅತೀ ಉದ್ದದ ರೂಪ್ ವೇ ಎಂದು ಖ್ಯಾತಿ ಪಡೆದಿರುವ ತ್ರಿಕೂಟ ಬೆಟ್ಟದ ರೂಪ್ ವೇನಲ್ಲಿ ಸಿಲುಕಿರುವ ಪ್ರವಾಸಿಗರ ರಕ್ಷಣೆಗೆ ಹೆಲಿಕಾಫ್ಟರ್ ಬಳಸಲಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.






