ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ Turbanoter ಎಂದೇ ಖ್ಯಾತಿ ಪಡೆದಿರುವ ಹರ್ಭಜನ್ ಸಿಂಗ್ರನ್ನು ಆಮ್ ಆದ್ಮಿ ಪಕ್ಷವು ಪಂಜಾಬ್ನಿಂದ ಮೇಲ್ಮನೆಗೆ ( RajyaSabha) ಗೆ ನಾಮ ನಿರ್ದೇಶನ ಮಾಡುವುದಾಗಿ ತಿಳಿದು ಬಂದಿದೆ.
ಇನ್ನು ಈ ಕುರಿತು ಮಾತನಾಡಿದ AAP ಎಎಪಿಯಿಂದ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಪಂಜಾಬ್ನ ನೂತನ ಮುಖ್ಯಮಂತ್ರಿ ಭಗವಂತ ಮಾನ್ ಭಗತ್ ಸಿಂಗ್ ಪೂರ್ವಜರ ಊರಾದ ಖಟ್ಕನ್ ಕಲಂಕ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮದ್ಯೆ ಪಂಜಾಬ್ನಿಂದ ರಾಜ್ಯಸಭೆಗೆ ಹರ್ಭಜನ್ ಸಿಂಗ್ ಹೆಸರನ್ನು ನಾಮನಿರ್ದೇಶನ ಮಾಡಲು ಎಎಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈಧಿರುವ ಹರ್ಭಜನ್ ಸಿಂಗ್ ರನ್ನು ರಾಜ್ಯದ ಕ್ರೀಡಾ ಕ್ಷೇತ್ರವನ್ನು ಉನ್ನತನಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಿಎಂ ಭಗವಂತ ಮಾನ್ ಭಗತ್ ಭಜ್ಜಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದೆ.