• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

UP Election : ಬಿಜೆಪಿಯ ಯೋಗಿ ಪ್ರತಿಸ್ಪರ್ಧಿ ನಾಯಕ ಕೇಶವ್ ಪ್ರಸಾದ್ ಮೌರ್ಯ ಸೋಲಿಗೆ ಕಾರಣವೇನು?

Shivakumar by Shivakumar
March 12, 2022
in Top Story, ಕರ್ನಾಟಕ
0
UP Election : ಬಿಜೆಪಿಯ ಯೋಗಿ ಪ್ರತಿಸ್ಪರ್ಧಿ ನಾಯಕ ಕೇಶವ್ ಪ್ರಸಾದ್ ಮೌರ್ಯ ಸೋಲಿಗೆ ಕಾರಣವೇನು?
Share on WhatsAppShare on FacebookShare on Telegram
ADVERTISEMENT

ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಆಡಳಿತ ವಿರೋಧಿ ಅಲೆಯ ಲೆಕ್ಕಾಚಾರಗಳ ಹೊರತಾಗಿಯೂ ಬಿಜೆಪಿ ಪಡೆದ ಭಾರೀ ಜನಾದೇಶ, ನಿರೀಕ್ಷೆಗಳನ್ನು ಹುಸಿಗೊಳಿಸಿದ ಕಾಂಗ್ರೆಸ್ ಮತ್ತು ಬಿಎಸ್ ಪಿ ಹೀನಾಯ ಸೋಲು, ಬಿಜೆಪಿಯ ಓಟಕ್ಕೆ ಲಗಾಮು ಹಾಕುವಲ್ಲಿ ಯಶಸ್ವಿಯಾದರೂ ಅದರ ಭಾರೀ ಬಹುಮತಕ್ಕೆ ತಡೆಯೊಡ್ಡುವಲ್ಲಿ ಸೋತ ಎಸ್ಪಿಯ ವೈಫಲ್ಯ,.. ಹೀಗೆ ಹಲವು ಸಂಗತಿಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಹಲವು ಆಯಾಮದ ಚರ್ಚೆಗಳಿಗೆ ಇಂಬು ನೀಡಿರುವ ದೇಶದ ಅತಿದೊಡ್ಡ ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಮುಖ್ಯವಾಗಿ ಬಿಜೆಪಿಯ ಉಪ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಕೇಶವ್ ಪ್ರಸಾದ್ ಮೌರ್ಯ ಸೋಲು ಮತ್ತು ಆ ಸೋಲಿನ ಹಿಂದಿನ ತಂತ್ರಗಾರಿಕೆಗಳು ಮಾತ್ರ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೊಳಗಾಗಿಲ್ಲ ಎಂಬುದು ಗಮನಾರ್ಹ.

ಭಾರತೀಯ ಜನತಾ ಪಾರ್ಟಿಯ ಭಾರೀ ದಿಗ್ವಿಜಯದ ಬೆನ್ನಲ್ಲೇ ಆ ಪಕ್ಷದ ಪ್ರಭಾವಿ ನಾಯಕ ಹಾಗೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಮೌರ್ಯ ಅವರು ಸಿರತು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮಿತ್ರಪಕ್ಷ ಅಪ್ನಾ ದಳ(ಕಾಮೆರವಾಡಿ) ಉಪಾಧ್ಯಕ್ಷೆ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳ ಅಂತರದ ಸೋಲು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಮುಖ್ಯವಾಗಿ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಪಲ್ಲವಿ ಪಟೇಲ್ ಅವರು ಅಪ್ನಾ ದಳದ ನಾಯಕಿಯಾದರೂ, ಚುನಾವಣೆಯಲ್ಲಿ ಸಮಾಜವಾದಿ ಪಕ್ಷ(ಎಸ್ ಪಿ)ದ ಚಿಹ್ನೆಯ ಮೇಲೆಯೇ ಸ್ಪರ್ಧಿಸಿದ್ದರು. ಬಿಜೆಪಿಯ ಮಿತ್ರಪಕ್ಷ ಅಪ್ನಾದಳ (ಎಸ್) ನಾಯಕಿ ಅನುಪ್ರಿಯಾ ಪಟೇಲ್ ಅವರ ಸಹೋದರಿಯಾಗಿರುವ ಪಲ್ಲವಿ ಪರವಾಗಿ ಎಸ್ಪಿ ನಾಯಕ ಅಖಿಲೇಶ್ ಯಾದವ್, ಜಯಾ ಬಚ್ಚನ್, ಡಿಂಪಲ್ ಯಾದವ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.

ಅಲ್ಲದೆ, ಕಳೆದ 2017ರ ಚುನಾವಣೆಯಲ್ಲಿ ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ(ಎಸ್) ಸಿರತು ಕ್ಷೇತ್ರದಲ್ಲಿ ಗೆಲುವು ಪಡೆದಿತ್ತು. ಈ ಬಾರಿ ಅನುಪ್ರಿಯಾ ಬಿಜೆಪಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕನ ವಿರುದ್ಧದ ಈ ಹಣಾಹಣಿಯಲ್ಲಿ ಪಲ್ಲವಿ ಗೆಲುವು ಪಡೆಯುತ್ತಾರೆ ಎಂಬ ಬಗ್ಗೆ ಬಹುತೇಕ ರಾಜಕೀಯ ಪಂಡಿತರಿಗೆ ನಂಬಿಕೆ ಇರಲಿಲ್ಲ. ಆ ಅರ್ಥದಲ್ಲಿ ಅವರ ಈ ಭಾರೀ ಜಯ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಿದೆ.

ಚುನಾವಣಾ ಕಣದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಮಾರಾಮಾರಿಗಳ ಕಾರಣಕ್ಕೂ ಕ್ಷೇತ್ರ ಗಮನ ಸೆಳೆದಿತ್ತು. ಹಲವು ಹಳ್ಳಿಗಳಲ್ಲಿ ಕಾರ್ಯಕರ್ತರ ಸಂಘರ್ಷಗಳು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದವು. ಆದರೆ, ಪಲ್ಲವಿ ಪಟೇಲ್ ಸಿರತು ಕ್ಷೇತ್ರದ ಸೊಸೆ ತಾನು ಎಂಬುದನ್ನೇ ಪ್ರಚಾರದಲ್ಲಿ ಮುನ್ನೆಲೆಗೆ ತಂದಿದ್ದರು. ಆ ಮೂಲಕ ಕ್ಷೇತ್ರದ ಜನತೆಯ ಜೊತೆ ಭಾವನಾತ್ಮಕವಾಗಿ ಬೆಸೆಯುವ ತಂತ್ರಗಾರಿಕೆಗೆ ಶರಣಾಗಿದ್ದರು. ಮಹಿಳಾ ಮತದಾರರನ್ನು ಪ್ರಮುಖವಾಗಿ ಸೆಳೆದಿದ್ದ ಅವರು, ನಿರುದ್ಯೋಗ ಮತ್ತು ಬೀಡಾಡಿ ಜಾನುವಾರುಗಳ ಸಮಸ್ಯೆಯ ಬಗ್ಗೆ ಪ್ರಚಾರದಲ್ಲಿ ಪ್ರಮುಖವಾಗಿ ಒತ್ತು ನೀಡಿದ್ದರು.

ಆದಾಗ್ಯೂ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿಗಳು ಪ್ರಚಾರ ನಡೆಸಿದ ಕೇಶವ ಪ್ರಸಾದ್ ಮೌರ್ಯ ವಿರುದ್ಧ ಗೆಲುವು ಪಡೆಯುತ್ತಾರೆ ಎಂಬ ಭರವಸೆ ರಾಜಕೀಯ ವಲಯದಲ್ಲಿ ಇರಲಿಲ್ಲ.

2017ರ ಬಿಜೆಪಿಯ ಭಾರೀ ಚುನಾವಣಾ ಜಯದ ಹಿಂದೆ ನಿಜವಾಗಿಯೂ ಕೆಲಸ ಮಾಡಿದ್ದ ಮೌರ್ಯ, ತಮ್ಮ ಯೌವನದ ದಿನಗಳಿಂದಲೂ ಆರ್ ಎಸ್ ಎಸ್, ವಿಎಚ್ ಪಿ ಮತ್ತು ಭಜರಂಗದಳದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು. ಗೋರಕ್ಷಕರಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದವರು.1990ರ ದಶಕದಲ್ಲಿ ಬಿಜೆಪಿಗೆ ದೊಡ್ಡ ಬಲ ತಂದುಕೊಟ್ಟ, ರಾಷ್ಟ್ರವ್ಯಾಪಿ ರಾಜಕೀಯ ನೆಲೆ ವಿಸ್ತರಿಸಿದ ರಾಮಜನ್ಮಭೂಮಿ ಆಂದೋಲನದಲ್ಲಿ ಉತ್ತರಪ್ರದೇಶದ ಮುಂಚೂಣಿ ನಾಯಕರಾಗಿ ಕೆಲಸ ಮಾಡಿದವರು. 2017ರ ಚುನಾವಣೆಗೆ ಒಂದು ವರ್ಷ ಮುಂಚೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಹೊಣೆ ಹೊತ್ತಿದ್ದ ಮೌರ್ಯ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಮುಖವಾಗಿ ಹಿಂದುಳಿದ ಸಮುದಾಯದ ಮತಗಳನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಅವರು ನಿರ್ಣಾಯಕವಾಗಿದ್ದರು.

ಹಾಗಾಗಿ ಸಹಜವಾಗಿಯೇ ಆ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೌರ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಹಜವಾಗಿಯೇ ಒಲಿದುಬರಲಿದೆ ಎಂಬ ಲೆಕ್ಕಾಚಾರಗಳಿದ್ದವು. ಆದರೆ, ಬಿಜೆಪಿ ದೆಹಲಿಯ ವರಿಷ್ಠರು ಪಕ್ಷವನ್ನು ಅಧಿಕಾರಕ್ಕೆ ತಂದ ಮೌರ್ಯ ಅವರನ್ನು ಬದಿಗೊತ್ತಿ, ಕೇಸರಿಧಾರಿ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ಉಗ್ರ ಹಿಂದುತ್ವದ ಮುಖ ಯೋಗಿ ಆದಿತ್ಯನಾಥರನ್ನು ಸಿಎಂ ಕುರ್ಚಿಯ ಮೇಲೆ ಕೂರಿಸಿತ್ತು. ಈ ಅನಿರೀಕ್ಷಿತ ಆಯ್ಕೆ ಕೆಲ ಕಾಲ ಪಕ್ಷದೊಳಗೆ ಒಂದು ಮಟ್ಟದ ಆಘಾತ ಮತ್ತು ಅಸಮಾಧಾನಕ್ಕೂ ಕಾರಣವಾಗಿತ್ತು. ಆ ಬಳಿಕ ಮೌರ್ಯರನ್ನು ಸಮಾಧಾನಪಡಿಸುವ ಯತ್ನವಾಗಿ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೇ ಏರಿಸಲಾಗಿತ್ತು.

ಆದರೆ, ಈ ಬಾರಿ ಯೋಗಿ ಆದಿತ್ಯನಾಥ ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧವೇ ಹಳಸಿದೆ ಎಂಬ ವಾದಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಕಳೆದ ಬಾರಿ ಕೈತಪ್ಪಿದ ಸ್ಥಾನ ಮತ್ತೆ ಒಲಿದು ಬರಬಹುದು ಎಂಬ ನಿರೀಕ್ಷೆಗಳಿದ್ದವು. ಆ ಕಾರಣಕ್ಕಾಗಿಯೇ ಸಿರತು ಕ್ಷೇತ್ರದ ಚುನಾವಣೆಯ ಮೇಲೆ ಎಲ್ಲರ ಕಣ್ಣಿತ್ತು. ಆದರೆ, ಅಲ್ಲಿ ಪವಾಡದಂತೆ ಪಲ್ಲವಿ ಗೆದ್ದು, ಮೌರ್ಯ ಸೋತು ಹೋಗಿದ್ದಾರೆ. ಆ ಹಿನ್ನೆಲೆಯಲ್ಲಿ ಅಲ್ಲಿನ ಈ ಸೋಲು- ಗೆಲುವಿನ ಲೆಕ್ಕಾಚಾರಗಳ ಹಿಂದೆ ಯಾರ ತಂತ್ರಗಾರಿಕೆ ಇದೆ? ನಿಜವಾಗಿಯೂ ಇದು ಪಲ್ಲವಿ ಅವರ ಗೆಲುವೇ? ಅಥವಾ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಮೌರ್ಯ ಅವರನ್ನು ಸೋಲಿಸಲೇಬೇಕಾದ ಅನಿವಾರ್ಯತೆಗೆ ಬಿದ್ದ ಪ್ರಭಾವಿ ನಾಯಕರ ಕೈವಾಡವೇ ಎಂಬ ಪ್ರಶ್ನೆ ಈಗ ಎದ್ದಿದೆ.

ಈ ನಡುವೆ, ಉತ್ತರಪ್ರದೇಶದಲ್ಲಿ ವಿಧಾನಪರಿಷತ್ ವ್ಯವಸ್ಥೆಯೂ ಇರುವುದರಿಂದ, ಬಿಜೆಪಿಗೆ ನಿಜವಾಗಿಯೂ ಮೌರ್ಯ ಅವರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಮತ್ತೆ ಉಪಮುಖ್ಯಮಂತ್ರಿ ಮಾಡಲು ಅವಕಾಶವೂ ಇದೆ. ಆದರೆ, ಹಾಗೆ ಮಾಡುವ ಸೂಚನೆಗಳು ಮಾತ್ರ ಸದ್ಯಕ್ಕಂತೂ ಇಲ್ಲ ಎಂಬುದು ರಾಜಕೀಯ ವಲಯದ ಮಾಹಿತಿ. ಜೊತೆಗೆ ಬಿಜೆಪಿಯು ಶೂದ್ರರು, ದಲಿತರನ್ನು ಗೆಲುವಿನ ದಾಳವಾಗಿ ಬಳಸಿಕೊಂಡು, ಅಧಿಕಾರದ ಅವಕಾಶ ತೆರೆದಾಗ ತನ್ನ ಮನುವಾದಿ ವರಸೆಯನ್ನು ಪ್ರದರ್ಶಿಸುತ್ತದೆ. ಮೇಲ್ಜಾತಿ ಮತ್ತು ಮೇಲ್ವರ್ಗದವರನ್ನೇ ಅಧಿಕಾರದ ಗುದ್ದುಗೆಗೆ ಏರಿಸುತ್ತದೆ ಎಂಬುದಕ್ಕೆ ಈ ಕೇಶವ್ ಪ್ರಸಾದ್ ಮೌರ್ಯ ಸೋಲಿನ ಘಟನೆ ಕೂಡ ಒಂದು ನಿದರ್ಶನ ಎಂಬ ಮಾತುಗಳೂ ಕೇಳಿಬಂದಿವೆ.

ಹಾಗಾಗಿ, ಕೇಶವ್ ಪ್ರಸಾದ್ ಮೌರ್ಯ ಅವರ ಸೋಲು ಮತ್ತು ಸೋಲಿನ ಬಳಿಕ ಬಿಜೆಪಿ ಅವರ ವಿಷಯದಲ್ಲಿ ತಳೆಯುವ ನಿಲುವು ಬಿಜೆಪಿಯ ರಾಜಕೀಯ ಆದ್ಯತೆಯ ಪ್ರಶ್ನೆಯಾಗಿಯೂ ಚಾಲ್ತಿಗೆ ಬಂದಿದೆ.

Punjab ಗೆಲುವಿನ ಬೆನ್ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆಗೆ AAP ಮಾಸ್ಟರ್‌ ಪ್ಲಾನ್: Prithvi Reddyಯವರು ಹೇಳೊದೇನು?
Tags: ಅಖಿಲೇಶ್ ಯಾದವ್ಅನುಪ್ರಿಯಾ ಪಟೇಲ್ಅಮಿತ್ ಶಾಆರ್ ಎಸ್ ಎಸ್ಉತ್ತರಪ್ರದೇಶ ಚುನಾವಣೆಕೇಶವ ಪ್ರಸಾದ್ ಮೌರ್ಯಜಯಾ ಬಚ್ಚನ್ಡಿಂಪಲ್ ಯಾದವ್ಪಲ್ಲವಿ ಪಟೇಲ್ಪ್ರಧಾನಿ ಮೋದಿಬಿಜೆಪಿಭಜರಂಗ ದಳಯೋಗಿ ಆದಿತ್ಯನಾಥವಿಎಚ್ ಪಿಸಿರತು ವಿಧಾನಸಭಾ ಕ್ಷೇತ್ರ
Previous Post

ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸನ್ನು ಅವಲಂಬಿಸುವುದರಲ್ಲಿ ಅರ್ಥವಿಲ್ಲ: ಮಮತಾ ಬ್ಯಾನರ್ಜಿ

Next Post

ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದ ‘ಜಿ-23’ ನಾಯಕರ ಗ್ಯಾಂಗ್ ಅಪ್

Related Posts

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೋಶ್ ತಂದೆ ಸುಬ್ಬರಾವ್ ವಿಧಿವಶರಾಗಿದ್ದಾರೆ. ಹೀಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರದೋಶ್ ಗೆ ಕೋರ್ಟ್ ಅನುಮತಿ ನೀಡಿದೆ.ತಂದೆ ನಿಧನರಾದ...

Read moreDetails
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

October 23, 2025
Next Post
ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದ ‘ಜಿ-23’ ನಾಯಕರ ಗ್ಯಾಂಗ್ ಅಪ್

ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದ 'ಜಿ-23' ನಾಯಕರ ಗ್ಯಾಂಗ್ ಅಪ್

Please login to join discussion

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada