• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ದೇಶದ ಸಾಮಾಜಿಕ ಸಂರಚನೆ ಮಹಿಳಾ ಕಾರ್ಮಿಕರ ವೇತನವನ್ನು ನಿರ್ಧರಿಸುತ್ತಿದೆಯೇ? ಒಂದು ಅವಲೋಕನ

Any Mind by Any Mind
March 8, 2022
in ಅಭಿಮತ
0
ದೇಶದ ಸಾಮಾಜಿಕ ಸಂರಚನೆ ಮಹಿಳಾ ಕಾರ್ಮಿಕರ ವೇತನವನ್ನು ನಿರ್ಧರಿಸುತ್ತಿದೆಯೇ? ಒಂದು ಅವಲೋಕನ

A woman works at a textile mill in Mumbai, India March 8, 2018. REUTERS/Francis Mascarenhas - RC1FDD688F60

Share on WhatsAppShare on FacebookShare on Telegram

ಮುಂಬೈ ವಿಮಾನ ನಿಲ್ದಾಣದಲ್ಲಿ‌ ಮಹಿಳಾ ಡ್ರೈವರ್‌ಗಳಿರುವ ಕ್ಯಾಬ್‌ನಲ್ಲಿ ಪ್ರಯಾಣಿಸಬಯಸುವವರಿಗಾಗಿ ಪ್ರತ್ಯೇಕ ಕೌಂಟರ್ ಒಂದನ್ನು ತೆರೆಯಲಾಗಿದೆ.  ವಿಮಾನ ನಿಲ್ದಾಣದಲ್ಲಿ ಅದು ‌ಅತ್ಯಂತ ಹೆಚ್ಚು ಗಮನ‌ ಸೆಳೆಯುವ ಕೌಂಟರ್ ಆಗಿದೆ. ಆದರೆ ಮುಂಬೈಯಂತಹ‌ ನಗರದ ವಿಮಾನ‌ನಿಲ್ದಾಣದಲ್ಲೂ ಈ ಕೌಂಟರ್ ಏಕೆ ಹೆಚ್ಚು ವಿಶೇಷವೆನಿಸಿಕೊಳ್ಳಬೇಕು? ವಿಮಾನ‌‌ ನಿಲ್ದಾಣಗಳಲ್ಲಿ ಮಹಿಳಾ ಚಾಲಕರಿರುವ ಕ್ಯಾಬ್‌ಗಳನ್ನು ಪರಿಚಯಿಸಲು ಇಷ್ಟು ಸಮಯ ಏಕೆ ತೆಗೆದುಕೊಂಡಿತು?  ‌ಮಹಿಳಾ ಚಾಲಿತ ಟ್ಯಾಕ್ಸಿಗಳು ಇತರ ಮೆಟ್ರೋ ನಗರಗಳಲ್ಲಿ ಯಾಕಿಲ್ಲ?  ವಿಮಾನ ನಿಲ್ದಾಣಗಳಲ್ಲಿ ಮಾತ್ರ ಇಂತಹ ಕೌಂಟರ್‌ಗಳು ಯಾಕಿವೆ? ಯಾಕೆಂದರೆ ನಮ್ಮ ಸಮಸಜದಲ್ಲಿ ಮಹಿಳೆ ಕೆಲ‌ ಕೆಲಸಗಳನ್ನು ಮಾಡಲು ಅಸಮರ್ಥಳು ಎನ್ನುವ ನಂಬಿಕೆಯಿದೆ. ಹಾಗಾಗಿಯೇ ಆ ಕೌಂಟರ್ ಹೆಚ್ಚು ಗಮನ ಸೆಳೆಯುತ್ತಿದೆ. ಪುರುಷರಷ್ಟೇ ಸಮಾನ ಅವಕಾಶಗಳು ಮಹಿಳೆಯರಿಗೂ ಇದ್ದಿದ್ದರೆ ಅದು ಅಷ್ಟು ವಿಶೇಷವಾಗಿ ಗಮನ ಸೆಳೆಯುತ್ತಿತ್ತೇ? ಬಹುಶಃ ಇಲ್ಲ.

ADVERTISEMENT

ಈಗೀಗ ಉದ್ಯೋಗಸ್ಥ ಮಹಿಳೆಯರು ಹೆಚ್ಚು ಹೆಚ್ಚು ಗೋಚರಿಸುತ್ತಾರೆ. ಮತ್ತು ಕೆಲವೆಡೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಉದಾಹರಣೆಗೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ  ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಸುಮಾರು 50% ಆಗಿದೆ.  ವಿಶ್ವದ ಸರಾಸರಿ ಮಹಿಳಾ ಪೈಲಟ್‌ಗಳ ಪ್ರಮಾಣ 5% ಆಗಿದ್ದರೆ ಭಾರತದಲ್ಲಿರುವ ಒಟ್ಟು ಪೈಲಟ್ ಗಳಲ್ಲಿ  ಮಹಿಳಾ ಏರ್‌ಲೈನ್ ಪೈಲಟ್‌ಗಳ ಪಾಲು 15%. ಬಹಳ ಹಿಂದೆಯೇ, ಭಾರತದ ಅರ್ಧದಷ್ಟು ಬ್ಯಾಂಕಿಂಗ್ ಆಸ್ತಿಗಳು ಮಹಿಳೆಯರ ನೇತೃತ್ವದ ಸಂಸ್ಥೆಗಳ ಅಡಿಯಲ್ಲಿದ್ದವು. ದಶಕಗಳ ಹಿಂದೆಯೇ ಭಾರತವು ಮಹಿಳಾ ಪ್ರಧಾನಮಂತ್ರಿಯನ್ನು ಹೊಂದಿತ್ತು.  ಮತ್ತು ಭಾರತವು ಮಹಿಳಾ ಹಣಕಾಸು ಮಂತ್ರಿ ಮತ್ತು ರಕ್ಷಣಾ ಸಚಿವರನ್ನೂ ಹೊಂದಿದೆ.

ಆದರೆ ಈ ಸಾಧನೆಗಳ‌ ನಡುವೆಯೂ ಭಾರತದಲ್ಲಿ ಮಹಿಳೆಯರು ಮತ್ತು ಉದ್ಯೋಗಿಗಳ ವಿಷಯಕ್ಕೆ ಬಂದಾಗ ವಸ್ತುಸ್ಥಿತಿ ಬೇರೆಯದೇ ಅಂಕಿ ಅಂಶಗಳನ್ನು ಮುಂದಿಡುತ್ತದೆ.  ನಮ್ಮ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (LFPR) ಈಗ ಸೌದಿ ಅರೇಬಿಯಾದಂತಹ ದೇಶಗಳಿಗೆ ಸರಿಸಮಾನವಾಗಿದೆ. ಅಂದರೆ ಭಾರತದ ಮಹಿಳಾ LFPR ಸುಮಾರು 20% ದಷ್ಟು ಮಾತ್ರ.  ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ನ ವರದಿಯ ಪ್ರಕಾರ, ಮಹಿಳಾ LFPR ನಲ್ಲಿ ಭಾರತವು ಒಟ್ಟು131 ದೇಶಗಳಲ್ಲಿ 121 ನೇ ಸ್ಥಾನದಲ್ಲಿದೆ.  ಈ ಡೇಟಾವು ಕೋವಿಡ್ ಪೂರ್ವದ ದಾಖಲೆಯಾಗಿದ್ದು ಕೋವಿಡ್ ನಂತರದಲ್ಲಿ ಈ ಅನುಪಾತ ಇನ್ನಷ್ಟು ಹದಗೆಟ್ಟಿರಬಹುದು.  ಯಾಕೆಂದರೆ ಭಾರತದಲ್ಲಿ ನಿರುದ್ಯೋಗ ಹೆಚ್ಚಾದಾಗ ಮೊದಲು ಕೈ ಬಿಡುವುದೇ ಮಹಿಳಾ ಉದ್ಯೋಗಿಗಳನ್ನು.  ‘ಪ್ಯೂ ರಿಸರ್ಚ್ ಸೆಂಟರ್‌’ನ ಇತ್ತೀಚಿನ ಸಮೀಕ್ಷೆಯಿಂದ ಇದು ಮತ್ತಷ್ಟು ದೃಢಪಟ್ಟಿದೆ. ತಾನು ಸಮೀಕ್ಷೆಗಳೊಪಡಿಸಿದವರಲ್ಲಿ  82% ಪುರುಷರು ಮತ್ತು 77% ಮಹಿಳೆಯರು, ಉದ್ಯೋಗಗಳು ವಿರಳವಾಗಿದ್ದಾಗ ಉದ್ಯೋಗ ಪುರುಷರಿಗೇ ಲಭಿಸಬೇಕು ಎಂದು ಹೇಳಿರುವುದಾಗಿ ಅದು ವರದಿ ನೀಡಿದೆ . ಇದು ಭಾರತದಲ್ಲಿ ಇನ್ನೂ ಅಂತರ್ಗತವಾಗಿರುವ ಪುರುಷ ಪ್ರಧಾನ ಮನಸ್ಥಿತಿಯ ಪ್ರತಿಬಿಂಬವಾಗಿದೆ.

ಕಳೆದ 16 ವರ್ಷಗಳ ಅವಧಿಯಲ್ಲಿ ಭಾರತದ ಮಹಿಳಾ LFPR ಶೇಕಡಾ 20 ಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ.  2004-5 ರಲ್ಲಿ, ಸಾಮಾನ್ಯ ಪ್ರಿನ್ಸಿಪಲ್ ಸಬ್ಸಿಡಿಯರಿ ಸ್ಟೇಟಸ್ ವ್ಯಾಖ್ಯಾನದ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ  LFPR 42.7% ಇದ್ದರೆ  2009-10ರ ವೇಳೆಗೆ ಅದು ಶೇ.32.7ಕ್ಕೆ ಕುಸಿದಿತ್ತು.  ಅಂದಿನಿಂದ ಈ ಅನುಪಾತವು ತೀವ್ರವಾಗಿ ಕುಸಿಯುತ್ತಲೇ ಬಂದಿದೆ.  1991 ರ ನಂತರದ ಮೂರು ದಶಕಗಳ ಆರ್ಥಿಕ ಸುಧಾರಣೆಗಳು ಹೆಚ್ಚಿನ ಆದಾಯದ ಜೊತೆಗೆ ಉದ್ಯೋಗದ ಬೆಳವಣಿಗೆ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ .  ಇದು ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೂ ಕಾರಣವಾಗಬೇಕಿತ್ತು. ಆದರೆ ಆ ಸಂಖ್ಯೆ ಕುಸಿದಿದೆ ಎನ್ನುವುದು ದೊಡ್ಡ ವಿಪರ್ಯಾಸ.

ಭಾರತದ ಕಡಿಮೆ ಸ್ತ್ರೀ LFPR ಗೆ ಕಾರಣಗಳು ಹಲವು. ಮುಖ್ಯವಾಗಿ ನಮ್ಮ ಸಾಮಾಜಿಕ ಸಂರಚನೆಯೇ ಪುರುಷ ಪ್ರಧಾನವಾಗಿದ್ದು ಮಹಿಳೆಯರ ಉದ್ಯೋಗದ ಮೇಲೆ ಪರಿಣಾಮ‌ ಬೀರುತ್ತದೆ.  ಉದಾಹರಣೆಗೆ, ಮಗುವಿನ ಆರೈಕೆಯು ಪ್ರಾಥಮಿಕವಾಗಿ ಮಹಿಳೆಯ ಜವಾಬ್ದಾರಿಯಾಗಿದೆ ಎಂಬ ಸಾಮಾಜಿಕ ರೂಢಿಯು  ಮಹಿಳೆಯರು ಉದ್ಯೋಗದಿಂದ ಹೊರಗುಳಿಯಲು ಆಯ್ಕೆಯನ್ನು ಮಾತ್ರ ಅವರ ಮುಂದಿಡುತ್ತದೆ. ಭಾರತದಲ್ಲಿ ಮಹಿಳೆ ತನ್ನ ಮೊದಲ ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಸಂಭವನೀಯತೆ 30% ಕ್ಕಿಂತ ಕಡಿಮೆ.  26 ವಾರಗಳ ಹೆರಿಗೆ ರಜೆಯನ್ನು ಕಡ್ಡಾಯಗೊಳಿಸಿದ 2016 ರ ಮಹಿಳಾ ಪರ ಕಾನೂನು ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕೆಲವು ಕಡೆ ಕಡಿಮೆ ಮಾಡಿದೆ. ಏಕೆಂದರೆ ಕೆಲವು ಕಂಪನಿಗಳು ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳಲೇ ಈಗ ಮೀನಾಮೇಷ ಎನಿಸುತ್ತದೆ.

ಈ ಒಂದು ಕಾರಣದಿಂದಾಗಿ 1.8 ಮಿಲಿಯನ್ ಮಹಿಳಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ‘TeamLease’  ಅಂದಾಜಿಸಿದೆ. ಆದರೆ ಮಾತೃತ್ವ ರಜೆಯ ಅರ್ಹತೆಗಳನ್ನು ದುರ್ಬಲಗೊಳಿಸುವುದು ಇದಕ್ಕೆ ಪರಿಹಾರವಾಗಬಾರದು, ಬದಲಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಶಿಶುಪಾಲನೆಯು ಲಭ್ಯವಾಗುವಂತೆ ನೋಡಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ

ಇನ್ನೊಂದೆಡೆ ಮಹಿಳೆಯರ ಕಡ್ಡಾಯ ನೇಮಕಾತಿಯ ಆದೇಶಕ್ಕೂ ಬೆಲೆಯಿಲ್ಲದಂತಾಗಿದೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್‌ಗೆ ತನ್ನ ಸ್ಥಾನಗಳಲ್ಲಿ 15% ಅನ್ನು ಮಹಿಳೆಯರಿಗೆ ಮೀಸಲಿಡಲು ಕೇಳಿಕೊಳ್ಳಲಾಗಿತ್ತು.‌ಆದರೆ ಅದು 2% ಅನ್ನು ಸಹ ನೇಮಕ ಮಾಡುವಲ್ಲಿ ಸೋತಿದೆ. ನಮ್ಮ ಸ್ತ್ರೀ LFPR ನ ಬೆಳವಣಿಗೆಯನ್ನು ಪ್ರತಿಬಂಧಿಸುವ ಮತ್ತೊಂದು ಸಮಸ್ಯೆ ಸುರಕ್ಷತೆ.  ಕೆಲಸಕ್ಕೆ ಹೊರಗೆ ಹೋಗುವ ಮಹಿಳೆಯರಿಗೆ ಸುರಕ್ಷಿತ ಸಾರ್ವಜನಿಕ ಸಾರಿಗೆಯೂ ಲಭ್ಯವಿಲ್ಲದಿರುವುದು ಈ‌‌ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಶೈಕ್ಷಣಿಕ ಹಂತದಲ್ಲಿ ಮಹಿಳೆಯರ‌ ಪಾಲ್ಗೊಳ್ಳುವಿಕೆ ಭಾರತದಲ್ಲಿ ಹೆಚ್ಚಿದೆ. ಆದರೆ ಒಂದು ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದುಕೊಂಡವರು ಆಮೇಲೆ ಉದ್ಯೋಗದ ವಿಚಾರಕ್ಜೆ ಬಂದಾಗ ಮನೆಯಲ್ಲಿ ಉಳಿದುಕೊಳ್ಳುವುದೇ ಹೆಚ್ಚು. ಉದಾಹರಣೆಗೆ, MBBS ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಹಿಳೆಯರು ಇರುತ್ತಾರೆ ಆದರೆ ದೇಶದಲ್ಲಿ ಕಾರ್ಯನಿರತ ವೈದ್ಯರಲ್ಲಿ 15% ಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಅನೇಕ ಇತರ ವೃತ್ತಿಗಳಲ್ಲೂ ಇದೇ ಪರಿಸ್ಥಿತಿ ಇದೆ. 

ಕ್ಲಾರಾ ಜೆಟ್‌ಕಿನ್ ಹುಟ್ಟು ಹಾಕಿದ ಸಮಾನ ಕೆಲಸಕ್ಕೆ ಸಮಾನ ವೇತನ ಚಳವಳಿಯ ಗೆಲುವು ವಿಶ್ವ ಮಹಿಳಾ ದಿನವಾಗಿ ಆಚರಿಸಲ್ಪಡುವ ಸಂದರ್ಭದಲ್ಲಿ ಕೇವಲ ಉದ್ಯೋಗಗಳಲ್ಲಷ್ಟೇ ಅಲ್ಲದೆ, ಶಾಸಕಾಂಗಗಳು, ಪೊಲೀಸ್, ಸಶಸ್ತ್ರ ಪಡೆಗಳು ಮತ್ತು ನ್ಯಾಯಾಂಗದಲ್ಲಿ ಮಹಿಳೆಯರ ಹೆಚ್ಚಿನ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆ ನಮ್ಮ‌ ಗುರಿಯಾಗಬೇಕು.  ನಿಜವಾದ ಮಹಿಳಾ ದಿನಾಚರಣೆಯೆಂದರೆ ಮುಂಬೈ ವಿಮಾನ ನಿಲ್ದಾಣದಲ್ಲಿ  ಮಹಿಳಾ-ಚಾಲಕರಿರುವ ಟ್ಯಾಕ್ಸಿ ಕೌಂಟರ್ ವಿಶೇಷವಾಗದೆ  ಪುರುಷರಷ್ಟೇ ಮಹಿಳಾ ಚಾಲಕರಿರುವುದು ಸಹಜ ಸಂಗತಿಯಾಗುವುದು ಎಂಬುವುದು ನಮಗೆ ಅರ್ಥವಾಗುವುದು.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಒಂದು ಅವಲೋಕನಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಮಹಿಳಾ ಕಾರ್ಮಿಕಸಾಮಾಜಿಕ ಸಂರಚನೆಸಿದ್ದರಾಮಯ್ಯ
Previous Post

ಬಜೆಟ್ ಗಾತ್ರ ಹೆಚ್ಚಾದಂತೆ, ದುರ್ಬಲ ವರ್ಗದವರ ಅಭಿವೃದ್ಧಿಗೆ ಅನುದಾನ ಕೂಡ ಹೆಚ್ಚಾಗಬೇಕಿತ್ತು : ಸಿದ್ದರಾಮಯ್ಯ

Next Post

ಅಮಿತ್‌ ಶಾರನ್ನು ಸಿಬಿಐ ಕಸ್ಟಡಿಗೆ ನೀಡಿದ್ದ ನ್ಯಾಯಾಧೀಶರು ಕಲಿಸಿಕೊಟ್ಟ ಪಾಠ!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
Next Post
ಅಮಿತ್‌ ಶಾರನ್ನು ಸಿಬಿಐ ಕಸ್ಟಡಿಗೆ ನೀಡಿದ್ದ ನ್ಯಾಯಾಧೀಶರು ಕಲಿಸಿಕೊಟ್ಟ ಪಾಠ!

ಅಮಿತ್‌ ಶಾರನ್ನು ಸಿಬಿಐ ಕಸ್ಟಡಿಗೆ ನೀಡಿದ್ದ ನ್ಯಾಯಾಧೀಶರು ಕಲಿಸಿಕೊಟ್ಟ ಪಾಠ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada