• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

Ukraine – Russia War : ಪೋಷಕರಲ್ಲಿ ಹೆಚ್ಚಿದ ಆತಂಕ!

ಕರ್ಣ by ಕರ್ಣ
March 7, 2022
in ವಿದೇಶ
0
Ukraine – Russia War : ಪೋಷಕರಲ್ಲಿ ಹೆಚ್ಚಿದ ಆತಂಕ!
Share on WhatsAppShare on FacebookShare on Telegram

ಉಕ್ರೇನ್ ಹಾಗೂ ರಷ್ಯಾ ನಡುವಣ ಸಂಘರ್ಷ (ukraine russia conflict) ದಿನದಿಂದ ದಿನಕ್ಕೆ ಭೀಕರತೆಗೆ ಮುಖ ಮಾಡುತ್ತಿದೆ. ಈಗಾಗಲೇ ಉಕ್ರೇನ್ ನಲ್ಲಿ ಜನ‌ ಜೀವನ ಎಲ್ಲವೂ ತತ್ತರಿಸಿ ಹೋಗಿದ್ದು, ಯುದ್ಧಗ್ರಸ್ತ ಉಕ್ರೇನ್ ನೆಲದಲ್ಲಿ ಭಾರತೀಯ ವಿದ್ಯಾರ್ಥಿಗಳ (Indian Students) ಪರದಾಡುತ್ತಿದ್ದಾರೆ. ಇದು ಇಲ್ಲಿನ ಪೋಷಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಉಕ್ರೇನ್ ಪರಿಸ್ಥಿತಿ ನೋಡಿಕೊಂಡು ಪೋಷಕರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಉಕ್ರೇನ್ – ರಷ್ಯಾ ಯುದ್ಧ ಹಿನ್ನೆಲೆ ಪೋಷಕರ ಮನಸ್ಥಿತಿಯಲ್ಲಿ ಬದಲಾವಣೆಯ ಟ್ರೆಂಡ್ ಶುರುವಾಗಿದೆ. ಈ ಹಿಂದೆ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಶಿಕ್ಷಣ ಪಡೆಯುವಂತೆ ಪೋಷಕರು ಒತ್ತಾಯಿಸುತ್ತಿದ್ದರು. ಇದೀಗ ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷ ನೋಡಿ ಪೋಷಕರು ಕಳವಳಗೊಂಡಿದ್ದಾರೆ. ಇನ್ಮುಂದೆ ಉಕ್ರೇನ್ ಸೇರಿದಂತೆ ವಿದೇಶಗಳಿಗೆ ತೆರಳಿ ಶಿಕ್ಷಣಕ್ಕೆ ಒಲ್ಲೆ ಎನ್ನುತ್ತಿದ್ದಾರೆ ಪೋಷಕರು.‌

ADVERTISEMENT

ಉಕ್ರೇನ್, ಅಸ್ಟ್ರೇಲಿಯಾ, ಕೆನಡಾ, ಯುಎಸ್ ಸೇರಿದಂತೆ ಹಲವು ದೇಶಗಳಲ್ಲಿ ರಾಜ್ಯದ ಹಾಗೂ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ವಿದೇಶಗಳಿಗೆ ಮಕ್ಕಳನ್ನು ಕಳುಹಿಸದೇ ಇರುವ ನಿರ್ಧಾರಕ್ಕೆ ಪೋಷಕರು ಬರುತ್ತಿದ್ದಾರೆ. ಕರ್ನಾಟಕದಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಅರಸಿ ವಿದೇಶದಲ್ಲಿದ್ದಾರೆ. ಇದೀಗ ಉಕ್ರೇನೇತರ ದೇಶಗಳಲ್ಲಿ ಇರುವ ಮಕ್ಕಳ ಪೋಷಕರಿಗೆ ಆತಂಕ ಶುರುವಾಗಿದೆ. ಮುಂದೇ ಉಕ್ರೇನ್ ಪರಿಸ್ಥಿತಿ ಬೇರೆಡೆಯೂ ನಿರ್ಮಾಣವಾದರೆ ಮಕ್ಕಳನ್ನು ಕಳೆದುಕೊಳ್ಳುವ ಆತಂಕ ಪೋಷಕರದ್ದಾಗಿದೆ. ಹೀಗಾಗಿ ಪೋಷಕರಲ್ಲಿ‌ ದೇಶದಲ್ಲೇ ಶಿಕ್ಷಣ ಪಡೆಯುವಂತೆ ಆಗ್ರಹಿಸುವ ಟ್ರೆಂಡ್ ಶುರುವಾಗಿದೆ.

ಈ ಬಗ್ಗೆ ಮಾತನಾಡಿದ ಬನಶಂಕರಿಯಲ್ಲಿನ ಗಿರಿಜಾ ಎಂಬವರು ನಮಗೆ ನಮ್ಮ‌ ಮಕ್ಕಳು ಮುಖ್ಯ. ಶಿಕ್ಷಣ ಆಸೆಯಿಂದ ನಾವು ವಿದೇಶಗಳಿಗೆ ಕಳುಹಿಸುತ್ತೇವೆ. ಅದಾಗಿಯೂ ಅವರ ಜೀವಕ್ಕೆ ಅಪಾಯವಿದ್ದರೆ ನಾವೇಕೆ ಅವರನ್ನು ವಿದೇಶಕ್ಕೆ ಕಳುಹಿಸಬೇಕು..? ನನ್ನ ಮಗನನ್ನು ವಿದೇಶಕ್ಕೆ ಕಳುಹಿಸುವ ಆಸೆ ಇತ್ತು. ಆದರೆ ಇದೆಲ್ಲಾ ನೋಡಿದ ಮೇಲೆ ಆಸೆ ಕೈಬಿಟ್ಟಿದ್ದೇನೆ ಎಂದರು. ಮತ್ತೊಬ್ಬರು ಪೋಷಕರಾದ ಪ್ರಸಾದ್ ಮಾತನಾಡಿ, ಇಂದು ಉಕ್ರೇನ್ ನಾಳೆ ಮತ್ತೊಂದು ದೇಶ. ಕಷ್ಟ ಪಟ್ಟು ದುಡಿದು ನಾವು ಮಕ್ಕಳನ್ನು ಶಿಕ್ಷಣಕ್ಕಾಗಿ ಮಕ್ಕಳನ್ನು ಕಳುಹಿಸುತ್ತೇವೆ. ಇವೆಲ್ಲಾ ನೋಡಿದರೆ ಮಕ್ಕಳು ಕಣ್ಣ ಮುಂದೆಯೇ ಇರಲಿ ಎಂದು ಅನಿಸುತ್ತದೆ ಎಂದಿದ್ದಾರೆ.

ಪೋಷಕರಲ್ಲಿ ಹುಟ್ಟಿಕೊಂಡಿರುವ ಈ ಹೊಸ ಮನಸ್ಥಿತಿಯ ಬಗ್ಗೆ ಮಾತ‌ನಾಡಿದ ನಿಮ್ಹಾನ್ಸ್ ನ ಹಿರಿಯ ಮನೋವೈದ್ಯೆ ಪದ್ಮಾಕ್ಷಿ, ಈ ಮನಸ್ಥಿತಿ ಬದಲಾವಣೆ ಒಂದು ರೀತಿಯ ಸಿಂಡ್ರೋಮ್ ಎಂದಿದ್ದಾರೆ. ಇದು ಅಲ್ಪಕಾಲಿಕವಾಗಿದ್ದು, ದಿನಗಳು ಸಾಗುತ್ತಾ ಇದು ಕಡಿಮೆಯಾಗಲಿದೆ. ಕೊರೋನಾ ಕಾಲದಲ್ಲೂ ಇಂಥದ್ದೇ ಸಿಂಡ್ರೋಮ್ ಗಳಿಗೆ ಪೋಷಕರು ಒಳಗಾಗಿದ್ದರು. ಈಗ ಕೊರೋನಾ‌ ಕಡಿಮೆಯಾದ ಬೆನ್ನಲ್ಲೇ ಆತಂಕ ದೂರವಾಗಿದೆ. ಹೀಗೆಯೇ ಈ ವಿಚಾರದಲ್ಲೂ ಪೋಷಕರು ಸದ್ಯಕ್ಕೆ ಆತಂಕಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.

ಸದ್ಯ ಯುದ್ಧಗ್ರಸ್ತ ಉಕ್ರೇನ್ ನಿಂದ‌ 458 ಕನ್ನಡಿಗ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. 47 ಬ್ಯಾಚ್ ಗಳ ಮೂಲಕ‌ 458 ಕನ್ನಡಿಗ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ದೆಹಲಿ, ಮುಂಬೈ, ಹೈದರಾಬಾದ್ ಮೂಲಕ ಬೆಂಗಳೂರಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಮಾರ್ಚ್ 3ರಂದೇ ಅತಿ ಹೆಚ್ಚು ಎಂದರೆ 104 ವಿದ್ಯಾರ್ಥಿಗಳು ಬಂದಿದ್ದಾರೆ‌. ಇಂದು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವ ಸಾಧ್ಯತೆ ಇದೆ. ಇನ್ನು ಉಕ್ರೇನ್ ನಿಂದ ಆಗಮಿಸಿದ ವಿದ್ಯಾರ್ಥಿಗಳ ದಿನವಾರು‌ ಲೆಕ್ಕ ನೋಡುವುದಾದರೆ, ಫೆ.27 ರಂದು 30 ವಿದ್ಯಾರ್ಥಿಗಳು, ಫೆ. 28 ರಂದು 7, ಮಾರ್ಚ್ 1 ರಂದು 18, ಮಾರ್ಚ್ 2 ರಂದು 31, ಮಾರ್ಚ್ 3 ರಂದು 104, ಮಾರ್ಚ್ 4 ರಂದು 92, ಮಾರ್ಚ್ 5 ರಂದು 90 ಹಾಗೂ ಮಾರ್ಚ್ 6 ರಂದು 86 ವಿದ್ಯಾರ್ಥಿಗಳು ಆಗಮಿಸಿದ್ದಾರೆ‌.

Tags: Indian Studentsukraine russia conflictಅಸ್ಟ್ರೇಲಿಯಾಉಕ್ರೇನ್ಉಕ್ರೇನ್ - ರಷ್ಯಾಕೆನಡಾಪೋಷಕರುಭಾರತೀಯ ವಿದ್ಯಾರ್ಥಿಗಳುಯುಎಸ್ರಷ್ಯಾ ನಡುವಿನ ಸಂಘರ್ಷ
Previous Post

ಯುದ್ಧದ ಹಿನ್ನೆಲೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಬಂದಿರುವ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು? : HDK ಪ್ರಶ್ನೆ

Next Post

ಬಿಬಿಎಂಪಿ & ಪೊಲೀಸ್ ಇಲಾಖೆಯಿಂದ BWSSBಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ!

Related Posts

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?
Top Story

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

by ಪ್ರತಿಧ್ವನಿ
May 23, 2026
0

 ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ...

Read moreDetails
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
Next Post
ಬಿಬಿಎಂಪಿ & ಪೊಲೀಸ್ ಇಲಾಖೆಯಿಂದ BWSSBಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ!

ಬಿಬಿಎಂಪಿ & ಪೊಲೀಸ್ ಇಲಾಖೆಯಿಂದ BWSSBಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada