• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಬಿಎಂಪಿ & ಪೊಲೀಸ್ ಇಲಾಖೆಯಿಂದ BWSSBಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ!

Any Mind by Any Mind
March 7, 2022
in ಕರ್ನಾಟಕ
0
ಬಿಬಿಎಂಪಿ & ಪೊಲೀಸ್ ಇಲಾಖೆಯಿಂದ BWSSBಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ!
Share on WhatsAppShare on FacebookShare on Telegram

ಎಲ್ಲಾ ಇಲಾಖೆಯಂತೆಯೇ ಬೆಂಗಳೂರು ಜಲ ಮಂಡಳಿ (Bangalore Water Supply and Sevage Board) ಕೂಡ ಆದಾಯದಲ್ಲಿ ಇಳಿಮುಖವಾಗಿದೆ. ಕೊರೋನಾ ಕಾಲದಲ್ಲಿ ಜನರು ಬಿಲ್ ಕಟ್ಟಲು ಬಾಕಿ ಉಳಿಸಿಕೊಂಡಿದ್ದರು. ಆದರೆ ಪೊಲೀಸ್ ಇಲಾಖೆ (Police Department) ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಶೇ. 90 ರಷ್ಟು ಶುಲ್ಕವನ್ನು BWSSB ವಸೂಲಿ ಮಾಡಿಕೊಂಡಿದೆ. ಆದರೀಗ ಅದೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದಲೇ ಜಲ ಮಂಡಳಿಗೆ ಕೋಟಿ ಕೋಟಿ ನೀರಿನ ಬಿಲ್ ಬರಬೇಕಿದೆ.

ADVERTISEMENT

ಹೌದು, ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯಿಂದ ಜಲ ಮಂಡಳಿಗೆ ಕೋಟಿ ಕೋಟಿ ನೀರಿನ ಬಿಲ್ ಬಾಕಿ ಇದೆ. ನೀರಿನ ಬಿಲ್ ಕಟ್ಟದೆ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಕುಂಟು ನೆಪ ಹೇಳುತ್ತಿದೆ. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಈ ನಡೆಯಿಂದ ಜಲಮಂಡಳಿ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದೆ. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯ ಜೊತೆಗೆ BWSSB ಗೆ ಇತರೆ ಸರ್ಕಾರಿ ಸಂಸ್ಥೆಗಳಿಂದಲೂ ಕೋಟ್ಯಾಂತರ ರೂಪಾಯಿ ನೀರಿನ ಶುಲ್ಕ ಬರಬೇಕಿದೆ.

ಸಾರ್ವಜನಿಕರು ಎರಡು ತಿಂಗಳು ನೀರಿನ ಬಿಲ್ (Water Bill) ಕಟ್ಟಿಲ್ಲ ಅಂದ್ರೆ ನೀರಿನ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಟ್ರಾಫಿಕ್ ನಿಯಮ ಅಂತ ಸಾರ್ವಜನಿಕರ ಜೇಬಿಗೆ ಪೊಲೀಸ್ ಇಲಾಖೆ ಕತ್ತರಿ ಹಾಕುತ್ತೆ. ಕಸ, ತೆರಿಗೆ ಅಂತ ಜನರಿಂದ ಹಣವನ್ನು ಬಿಬಿಎಂಪಿ ವಸೂಲಿ ಮಾಡುತ್ತೆ. ಆದರೆ ಇವರು ಮಾತ್ರ ನೀರಿನ ಬಿಲ್ ಕಟ್ಟದೆ ಕೋಟಿ ಕೋಟಿ ಉಳಿಸಿಕೊಂಡಿದ್ದಾರೆ. ಬಿಬಿಎಂಪಿ 19 ಕೋಟಿ 47 ಲಕ್ಷ ಹಾಗೂ ಪೊಲೀಸ್ ಇಲಾಖೆ 46 ಕೋಟಿ 73 ಲಕ್ಷ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ. ಕಳೆದ ಮೂರುನಾಲ್ಕು ವರ್ಷಗಳಿಂದ ಕೋಟ್ಯಾಂತರ ಹಣ ಬಾಕಿ ಊಳಿಸಿ ಕೊಂಡಿರುವ ಈ ಸರ್ಕಾರಿ ಸಂಸ್ಥೆಗಳ ಈ ನಡೆಯಿಂದಾಗಿ ಕೋಟಿ ಕೋಟಿ ನಷ್ಟವಾಗುತ್ತಿದೆ. ಕೇವಲ ಪೊಲೀಸ್ ಇಲಾಖೆ, ಬಿಬಿಎಂಪಿ ಮಾತ್ರವಲ್ಲ ಇನ್ನೂ ಹಲವಾರು ಸರ್ಕಾರಿ ಸಂಸ್ಥೆಗಳಿಂದ BWSSBಗೆ ಕೋಟಿ ಕೋಟಿ ಶುಲ್ಕ ಬಾಕಿ ಉಳಿದಿದೆ. ಒಟ್ಟು ಸುಮಾರು 135 ಕೋಟಿ ರೂಪಾಯಿ ಸಂದಬೇಕಿದೆ ವಿವಿಧ ಇಲಾಖೆಯಿಂದ ಜಲಮಂಡಳಿಗೆ.

BWSSBಗೆ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳ ವಿವರ!

ಬಿಬಿಎಂಪಿಯಿಂದ 497 ಕಟ್ಟಡಗಳ 19 ಕೋಟಿ 47 ಲಕ್ಷ ಬಾಕಿ ಇದೆ. ಪೊಲೀಸ್ ಇಲಾಖೆಯಿಂದ 163 ಕಟ್ಟಡಗಳ 46 ಕೋಟಿ 73 ಲಕ್ಷ ಶುಲ್ಕ ಬಾಕಿ ಇದೆ. ರಾಜ್ಯ ಸರ್ಕಾರಕ್ಕೆ ಸೇರಿದ 542 ಕಟ್ಟಡಗಳ 20 ಕೋಟಿ 82 ಲಕ್ಷ ನೀರಿನ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೆ ಸೇರಿದ 170 ಕಟ್ಟಡಗಳ 21 ಕೋಟಿ 79 ಲಕ್ಷ ಬಾಕಿ ಇದೆ. ರಕ್ಷಣ ಇಲಾಖೆಗೆ ಸೇರಿದ 49 ಕಟ್ಟಡಗಳ 21 ಕೋಟಿ 84 ಲಕ್ಷ ಹಣ ಬರಬೇಕಿದೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ 23 ಕಟ್ಟಡಗಳ 16 ಕೋಟಿ 52 ಲಕ್ಷ ಹಣ ಜಲ ಮಂಡಳಿಗೆ ಸಂಧಬೇಕಿದೆ. ಹೀಗೆ ಒಟ್ಟಾರೆ ಒಟ್ಟು 135 ಕೋಟಿಗೂ ಅಧಿಕ ಮೊತ್ತ ಜಲಂಡಳಿಗೆ ಬರಬೇಕಿದೆ. ಈಗಾಗಲೇ ಈ ಬಗ್ಗೆ ಆಯಾ ಸಂಸ್ಥೆಯ ಮುಖ್ಯಸ್ಥರ ಜೊತೆ ಹಲವು ಭಾರಿ ಮಾತುಕತೆ ನಡೆಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜಲ ಮಂಡಳಿ ಅಪರ ಮುಖ್ಯ ಅಭಿಯಂತರ ದೇವರಾಜು.

Tags: Bangalore Water Supply BoardBWSSBPolice departmentWater Billನೀರಿನ ಬಿಲ್ಪೊಲೀಸ್ ಇಲಾಖೆಬೆಂಗಳೂರು ಜಲ ಮಂಡಳಿ
Previous Post

Ukraine – Russia War : ಪೋಷಕರಲ್ಲಿ ಹೆಚ್ಚಿದ ಆತಂಕ!

Next Post

ವಿದೇಶಿ ಮಾದರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶಾಪಿಂಗ್ ಹಬ್ ಗಳ ಸ್ಥಾಪನೆ!

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ವಿದೇಶಿ ಮಾದರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶಾಪಿಂಗ್ ಹಬ್ ಗಳ ಸ್ಥಾಪನೆ!

ವಿದೇಶಿ ಮಾದರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಶಾಪಿಂಗ್ ಹಬ್ ಗಳ ಸ್ಥಾಪನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada