ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಪ್ರಕರಣದಲ್ಲಿ ಜಾಮೀನು ರಹಿತ ಆದೇಶ ಹೊರಡಿಸಿದೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ.
ಮೊರಾದಾಬಾದ್‌ನ ಕಟ್ಘರ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಈವೆಂಟ್ ಆಯೋಜಕರಾದ ಪ್ರಮೋದ್ ಶರ್ಮಾ ಅವರು ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಆಹ್ವಾನಿಸಿದ್ದರು. ಇದಕ್ಕಾಗಿ ಆಯೋಜಕರು 37 ಲಕ್ಷ ರೂ.ಗಳನ್ನು ನೀಡಿದ್ದರು. ಆದಾಗ್ಯೂ, ನಟಿ ಈವೆಂಟ್‌ಗೆ ಹಾಜರಾಗಲಿಲ್ಲ.
ಹೀಗಾಗಿ ಈವೆಂಟ್ ಆಯೋಜಕರನ್ನು ಮರುಪಾವತಿಗೆ ವಿನಂತಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ಈವೆಂಟ್ ಆಯೋಜಕರಿಗೆ ಹಣ ನೀಡಲು ಆಕೆಯ ಮ್ಯಾನೇಜರ್ ನಿರಾಕರಿಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೇ, ಸೋನಾಕ್ಷಿ ಸಿನ್ಹಾ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಹಣ ಸಿಗದಿದ್ದಾಗ, ಬೇಸತ್ತ ಆಯೋಜಕನು ನಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾನೆ.

ಈ ವಿಚಾರದಲ್ಲಿ ಹೇಳಿಕೆ ನೀಡಲು ಸೋನಾಕ್ಷಿ ಮೊರಾದಾಬಾದ್‌ಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ವಂಚನೆ ಪ್ರಕರಣದಲ್ಲಿ ಬಾಲಿವುಡ್ ತಾರೆ ನಿರಂತರ ಗೈರುಹಾಜರಾಗಿದ್ದರಿಂದ ನ್ಯಾಯಾಲಯ ಇದೀಗ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.






