ಕಳೆದ ಏಳು ದಿನಗಳಿಂದ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಯೊಬ್ಬ (Indian student ) ರಾಯಭಾರ ಕಚೇರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಉಕ್ರೇನ್ನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು SOS ಕರೆಗಳಿಗೆ ಸ್ಪಂದಿಸುತ್ತಿಲ್ಲ, ವಿದ್ಯಾರ್ಥಿಗಳು ಹಳಸಿದ ಆಹಾರವನ್ನು ತಿನ್ನಲು ಮತ್ತು ಶೂನ್ಯಕ್ಕಿಂತ ಕಡುಮೆ ತಾಪಮಾನ (Sub-zero temperatures) ಕಿಲೋಮೀಟರ್‌ಗಳಷ್ಟು ನಡೆಯಲು ಬಿಟ್ಟುದ್ದಾರೆ ಎಂದು ದೂರಿದ್ದಾರೆ.
ಹೌದು, ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸತೊಡಗಿದೆ. ಉಕ್ರೇನ್ನ ಸುಮಿ ವಿಶ್ವವಿದ್ಯಾನಿಲಯದಲ್ಲಿ (Sumy University) ಓದುತ್ತಿರುವ ವಿದ್ಯಾರ್ಥಿ ಮೆಹ್ತಾಬ್ NDTV ಜೊತೆ ಮಾತನಾಡಿದ್ದು, ಒಬ್ಬ ವಿದ್ಯಾರ್ಥಿಯ ಪ್ರಾಣ ಕಳೆದುಕೊಂಡ ನಂತರವೇ ಭಾರತ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕಟುವಾಗಿ ಟೀಕಿಸಿದರು.
“ಪೋಷಕರು ಕರೆ ಮಾಡುತ್ತಿದ್ದಾರೆ, ಅವರು ಅಳುತ್ತಿದ್ದಾರೆ. ನಾವು ಉಕ್ರೇನ್‌ನ ಪೂರ್ವ ಭಾಗಗಳಲ್ಲಿ ಕಳೆದ 7 ದಿನಗಳಿಂದ ಸಿಲುಕಿಕೊಂಡಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಖಾರ್ಕಿವ್ ವಿದ್ಯಾರ್ಥಿಗಳು (Kharkiv students) ಕೂಡ ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ. ಸರಿಯಾದ ಕ್ರಮ ವಹಿಸಿದ್ದರೆ ನವೀನ್ (ಕರ್ನಾಟಕದ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಸತ್ತ) ಸಾಯುತ್ತಿರಲಿಲ್ಲ. ಈಗ ಇಲ್ಲಿ ಭಾರತೀಯರು ಸಾಯುತ್ತಿದ್ದಾರೆ. ಇಲ್ಲಿ ಭಾರತೀಯರು ಸತ್ತ ನಂತರ ಭಾರತ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ನಾವು ಸತ್ತ ನಂತರ ಭಾರತ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ, ”ಎಂದು ವೀಡಿಯೊ ಸಂದರ್ಶನದಲ್ಲಿ ಮೆಹ್ತಾಬ್ ಎನ್‌ಡಿಟಿವಿಗೆ ತಿಳಿಸಿದರು.
ಸುಮಿಯಲ್ಲಿ ಎಷ್ಟು ಮಂದಿ ಸಿಲುಕಿಕೊಂಡಿದ್ದಾರೆ ಎಂದು ಕೇಳಿದಾಗ, ಸುಮಾರು 800 (Approximately 800) ವಿದ್ಯಾರ್ಥಿಗಳು ಇದ್ದಾರೆ ಎಂದು ಮೆಹ್ತಾಬ್ ಹೇಳಿದರು.
” ಸುಮಿಯಿಂದ 800 ಜನರಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸ್ಥಳಾಂತರಿಸಲಾಗಿಲ್ಲ. ಏಳು ದಿನಗಳಿಂದ ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ನಾನು ಮೊದಲು ರಾಯಭಾರ ಕಚೇರಿಗೆ ಕರೆ ಮಾಡಿದ್ದೇನೆ, ಆದರೆ ಅವರು ಸಮಸ್ಯೆ ಎರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು. ನಾನು ಎರಡು ದಿನಗಳ ನಂತರ ಮತ್ತೆ ಕರೆ ಮಾಡಿದೆ, ಅಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
“ನಾವು ಇಲ್ಲಿ ಬ್ಯಾಕ್ಟೀರಿ ನೀರನ್ನು ಕುಡಿಯುತ್ತಿದ್ದೇವೆ ಮತ್ತು ಇದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಾವು ಹಳೆಯ ಆಹಾರವನ್ನು ಸೇವಿಸುತ್ತಿದ್ದೇವೆ ಮತ್ತು ಸ್ಫೋಟದ ಶಬ್ದಗಳನ್ನು ಕೇಳುತ್ತಿರುತ್ತವೆ ” ಎಂದು ಮೆಹ್ತಾಬ್ ಹೇಳಿದರು.

“ನಾವು ಇಲ್ಲಿ ಅಸಹಾಯಕರಾಗಿದ್ದೇವೆ, ನಾವು ಇಲ್ಲಿ ಏನು ಅನುಭವಿಸುತ್ತಿದ್ದೇವೆ, ಹೇಗೆ ಬದುಕುತ್ತಿದ್ದೇವೆ ಎಂದು ನಮಗೆ ತಿಳಿದಿದೆ. ನನ್ನ ಬಹಳಷ್ಟು ಸ್ನೇಹಿತರು ನನಗೆ ಕರೆ ಮಾಡಿ ಅಳುತ್ತಿದ್ದಾರೆ. ಸೈನ್ಯಕರು ಹೊಡೆದಿದ್ದಾರೆ, ಕೊರೆಯುವ ಚಳಿಯಲ್ಲಿ 15 ಕಿಮೀ ನಡೆದಿದ್ದಾರೆ ಎಂದು ಹೇಳಿದರು.
ಮೆಹ್ತಾಬ್ ಕೇಂದ್ರದಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿರುದ್ದ ಕಿಡಿಕಾರಿದ್ದಾರೆ ಕಠಿಣವಾಗಿ .
” ನಾವು ಇಲ್ಲಿ ತುಂಬಾ ಅಸಹಾಯಕರಾಗಿದ್ದೇವೆ. ರಾಯಭಾರ ಕಚೇರಿಗೆ ಹಲವು ಬಾರಿ ಕರೆ ಮಾಡಿದರು ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ವಿದ್ಯಾರ್ಥಿಗಳು ಏನು ಮಾಡುತ್ತಾರೆ.” ಎಂದು ಅವರು ಕಿಡಿಕಾರಿದ್ದಾರೆ.
ಗುರುವಾರ ಮಧ್ಯಾಹ್ನ ಉಕ್ರೇನ್ ನಿಂದ ಮನೆಗೆ ಹಿಂದಿರುಗಿದ ದಿವ್ಯಾಂಶು ಸಿಂಗ್ ಮಾತನಾಡಿ, ಭಾರತೀಯ ವಿದ್ಯಾರ್ಥಿಗಳನ್ನು “ಭಾರತ್ ಮಾತಾ ಕಿ ಜೈ” ಘೋಷಣೆಗಳು ಮತ್ತು ಹೂವುಗಳೊಂದಿಗೆ ಸ್ವಾಗತಿಸಲಾಗುತ್ತಿದೆ. ಇದರಿಂದ ಏನು ಪ್ರಯೋಜನ? ಅಲ್ಲಿ ನಮಗೆ ಏನಾದರೂ ಸಂಭವಿಸಿದರೆ ನಮ್ಮ ಕುಟುಂಬಗಳು ಏನು ಮಾಡಬೇಕಿತ್ತು?” ಸರ್ಕಾರ ಸಕಾಲದಲ್ಲಿ ಕ್ರಮಕೈಗೊಂಡಿದ್ದರೆ ಈಗ ಹೂವುಗಳನ್ನು ವಿತರಿಸುವ ಅಗತ್ಯವಿರುತ್ತಿರಲಿಲ್ಲ ಎಂದು ಹೇಳಿದರು.