ಸರಣಿ ಭೂಕಂಪಗಳ ಸಂಭವಿಸಿದ ಪರಿಣಾಮ ಐಸ್ಲ್ಯಾಂಡ್ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಪೂರ್ವಭಾವಿಯಾಗಿ ಈ ಭೂಕಂಪನಗಳು ಸಂಭವಿಸಿರುವ ಸಾಧ್ಯತೆಯಿದೆ.
ಕಳೆದ 14 ಗಂಟೆಗಳಲ್ಲಿ ಸುಮಾರು 800 ಬಾರಿ ಭೂಮಿ ಕಂಪಿಸಿದ್ದರಿಂದ ಐಸ್ಲ್ಯಾಂಡ್ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಭೂಮಿ ಕಂಪಿಸಿರುವುದು ಇಡೀ ದೇಶವನ್ನು ಆತಂಕಕ್ಕೆ ದೂಡಿದೆ. ಅಲ್ಲದೇ ಜ್ವಾಲಾಮುಖಿ ಸ್ಪೋಟದ ಮುನ್ಸೂಚನೆಯೂ ದೊರೆತಿದೆ. ಇದರ ಮುನ್ನೆಚ್ಚರಿಕೆ ಕ್ರಮವಾಗಿ ಐಸ್ಲ್ಯಾಂಡ್ ಸರ್ಕಾರವು ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ.
24000 ಬಾರಿ ಭೂಕಂಪನವಾದ ದಾಖಲೆಗಳಿವೆ. ಎರಡು ದಿನದಲ್ಲಿ 1,485 ಭೂಕಂಪನವಾಗಿರುವ ಮಾಹಿತಿಯಿದೆ. ಇದರಿಂದಾಗಿ ಹಲವು ಕಡೆ ರಸ್ತೆಗಳು ಹಾಳಾಗಿ ಹೋಗಿವೆ. ಭೂಮಿ ಬಿರುಕುಬಿಟ್ಟು ಜನ ಭಯಭೀತಗೊಂಡಿದ್ದಾರೆ. ಅಲ್ಲದೇ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಲಾವಾರಸ ಉಕ್ಕಿ ಜ್ವಾಲಾಮುಖಿಯ ಭಯವೂ ಮೂಡಿದೆ. ಅದರಲ್ಲೂ ಐಸ್ಲ್ಯಾಂಡ್ನ ರೇಖೀನೀಸ್ ಪರ್ವತ ಶ್ರೇಣಿಯ್ಲಲಿ ಲಾವಾರಸ ಉಕ್ಕಿದ್ದು, ಮತ್ತೆ ಸದ್ಯದಲ್ಲಿ ಇದು ಪುನರಾವರ್ತನೆಯಾಗಬಹುದು ಎನ್ನುವ ಭಯವಿದೆ.

ಭೂಕಂಪನಗಳ ಸೂಚನೆಯಿಂದಾಗಿ ಐಸ್ಲ್ಯಾಂಡ್ನ ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆಯು ರೇಕ್ಜಾನೆಸ್ ಪರ್ಯಾಯ ದ್ವೀಪದಲ್ಲಿ ತುರ್ತು ಸ್ಥಳಾಂತರಕ್ಕೆ ತಾಕೀತು ಮಾಡಿದ್ದಲ್ಲದೇ, ಖಾಸಗಿ ಸಂಘ ಸಂಸ್ಥೆಗಳೊಂದಿಗೆ ಜನರ ರಕ್ಷಣೆಗೆ ಕೈ ಜೋಡಿಸಿದೆ