ಟಿಪ್ಪರ್ ಹಾಗೂ ಆಟೋ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ 7 ಮಹಿಳೆಯರು ಸ್ಥಳದಲ್ಲಿ ಮೃತಪಟ್ಟಿರುವ ಗಟನೆ ಬೀದರ್ ಜಿಲ್ಲೆ ಚಿಟ್ಟಗುಪ್ಪ ತಾಲ್ಲೂಕಿನ ಬೆಳಮಖೇಡಾ ಸರ್ಕಾರಿ ಶಾಲೆ ಎದುರು ನಡೆದಿದೆ.
ಶುಕ್ರವಾರ ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ರೈತ ಮಹಿಳೆಯರು ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೃತ ದುರೈವಿಗಳನ್ನು ಪ್ರಭಾವತಿ(26), ಯಾದಮ್ಮ ಅಷ್ಮಿತ(40), ಗುಂಡಮ್ಮ ನರಸಿಂಗ(60), ಜಗಮ್ಮ ಪ್ರಭು(34), ರುಕ್ಮಿಣಿ ಭಾಯಿ(60), ಈಶ್ವರಮ್ಮ(55), ಪಾರ್ವತಿ(42) ಎಂದು ಗುರುತಿಸಲಾಗಿದೆ.
ಮೃತ ಏಳು ಮಂದಿ ಮಹಿಳೆಯರೆಲ್ಲರೂ ಚಿಟ್ಟಗುಪ್ಪ ತಾಲ್ಲೂಕಿನ ಉಡುಬನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ಟಿಪ್ಪರ್ ಚಾಲಕ ಹಾಘು ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣ ನೋಂದಣಿ ಸಂಖ್ಯೆ ಹೊಂದಿರುವ ಲಾರಿ ಹಾಗೂ ಆಂಧ್ರ ನೋಂದಣಿ ಸಂಖ್ಯೆ ಹೊಂದಿರುವ ಆಟೋ ಮುಖಾಮುಖಿ ಡಿಕ್ಕಿ ಹೊಡೆದಿದ್ದು ಆಟೋದಲ್ಲಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗೋಂವಿಂದ ರೆಡ್ಡಿ ತಿಳಿಸಿದ್ದಾರೆ.