ಅಫ್ಘಾನಿಸ್ತಾನದ ರಾಜಧಾನಿಯಾಗಿರು ಕಾಬೂಲ್ನಲ್ಲಿ ಇಂದು ಎರಡು ಪ್ರಬಲ ಸ್ಫೋಟಗಳು ಸಂಭವಿಸಿವೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 6 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿಯಾದಿಗೆ. ಕಾಬೂಲ್ನ ಪಶ್ಚಿಮ ಭಾಗದಲ್ಲಿ ಈ ಎರಡೂ ಸ್ಪೋಟಗಳು ಸಂಭವಿಸಿವೆ.
ಈ ಎರಡೂ ಸ್ಪೋಟಗಳು ಶಾಲೆಯಲ್ಲಿ ಸಂಭವಿಸಿದ್ದು, ಅದರಲ್ಲಿ ಒಂದು ಮಮ್ತಾಜ್ ಶಾಲೆಯಲ್ಲಿ ಸ್ಪೋಟಗೊಂಡಿದ್ದು ಇಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಎರಡನೇ ಸ್ಪೋಟ ಮತ್ತೊಂದು ಶಾಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.






