ಕೊರೊನಾ ವೈರಸ್ ಮತ್ತು ಕೆಜಿಎಫ್-2 ಅಬ್ಬರಕ್ಕೆ ಬೆದರಿ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದ ನಿರ್ಮಾಪಕರು ಈಗ ತಾ ಮುಂದು ನಾ ಮುಂದು ಎಂಬಂತೆ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಗಿಬಿದಿದ್ದಾರೆ.
ಹೌದು, ಕೆಜಿಎಫ್-2 ಬಿಡುಗಡೆ ಆಗಿ ಬರೋಬ್ಬರಿ ಒಂದು ತಿಂಗಳು ಆಗುತ್ತಿದ್ದಂತೆ ವರ್ಷಗಳಿಂದ ಕಾದು ಕುಳಿತಿದ್ದ ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಶುಕ್ರವಾರ ಅಂದರೆ ಮೇ ೨೦ರಂದು ಒಂದೇ ದಿನ ೬ ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿವೆ.
ಒಂದೇ ದಿನ ಇಷ್ಟೊಂದು ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿರುವುದು ತುಂಬಾ ಅಪರೂಪ ಎಂದೇ ಹೇಳಬಹುದು. ಏಕೆಂದರೆ ಮೂರರಿಂದ ನಾಲ್ಕು ಚಿತ್ರಗಳು ಬಿಡುಗಡೆ ಆದರೆ ಪೈಪೋಟಿ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ನಾಳೆ ಒಂದೇ ದಿನ 6 ಚಿತ್ರಗಳು ಬಿಡುಗಡೆ ಆಗುತ್ತಿದ್ದು, ಯಾವ ಚಿತ್ರ ಯಶಸ್ಸು ಕಾಣುತ್ತದೆ. ಯಾವುದು ಸೋಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಪರಭಾಷೆ ಚಿತ್ರಗಳ ನಡುವೆ ಕನ್ನಡ ಚಿತ್ರಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ. ಆದರೆ ಸಿನಿಮಾ ಬಿಡುಗಡೆಗೆ ಅವಕಾಶವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಇದೀಗ ಎಲ್ಲರೂ ಚಿತ್ರ ಬಿಡುಗಡೆಗೆ ಮುಗಿಬಿದ್ದಿದ್ದಾರೆ.
ಅಷ್ಟಕ್ಕೂ ಮೇ 20ರಂದು ಬಿಡುಗಡೆ ಆಗಲಿರುವ 6 ಕನ್ನಡ ಚಿತ್ರಗಳು ಯಾವುವು ಅಂತಿರಾ? ಇಲ್ಲಿದೆ ನೋಡಿ ಅದರ ವಿವರ.
ರವಿಚಂದ್ರನ್ ಪುತ್ರ ಮನೋರಂಜನ್ ಮತ್ತು ಕೀರ್ತಿ ಕಲ್ಕೇರಿ ನಟಿಸಿ ಮನು ಕಲ್ಯಾಡಿ ನಿರ್ದೇಶಿಸಿರುವ ʻಪ್ರಾರಂಭʼ, ಡಾಲಿ ಧನಂಜಯ್ ನಟಿಸಿರುವ ʻ21 ಅವರ್ಸ್ʼ, ಸಿದ್ಧಾರ್ಥ್ ಮಹೇಶ್ ಶ್ರೀನಗರ ಕಿಟ್ಟಿ ಮತುತ ಆಶಿಕಾ ರಂಗನಾಥ್, ಐಂದ್ರಿತಾ ರೈ ನಟಿಸಿ ಧನಕುಮಾರ್ ನಿರ್ದೇಶಿಸಿರುವ ಗರುಡ ಬಿಡುಗಡೆ ಆಗುತ್ತಿರುವ ಪ್ರಮುಖ ಚಿತ್ರಗಳು.ʼ
ಇದಲ್ಲದೇ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರವಾಗಿದ್ದು, ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿ ನಾಗೇಂದ್ರ ಪ್ರಸಾದ್ ಚೊಚ್ಚಲ ನಿರ್ದೇಶನದ ಲಕ್ಕಿ ಮ್ಯಾನ್ ಹಾಗೂ ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರಗಳು ಕೂಡ ಬಿಡುಗಡೆ ಆಗುತ್ತಿವೆ.