ಭಾರತದ ಆರ್ಥಿಕತೆ ಈಗಷ್ಟೇ ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಬಿಜೆಪಿ ಸರ್ಕಾರ ಜನರ ಮೇಲೆ ಬೆಲೆ ಏರಿಕೆ ಹಾಗೂ ವಿಪರೀತವಾದ ತೆರಿಗೆ ಹೊರೆಯನ್ನ ಕೂಡ ಹೊರಿಸಿದೆ. ಇದರಿಂದ ಜನರು ನಿರಂತರವಾಗಿ ಪರದಾಡುವ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ. ಆದರೆ ಈ ರೀತಿಯಾದ ತೆರಿಗೆ ವಸೂಲಾತಿ ಕೂಡ ದೇಶದ ಆರ್ಥಿಕ ನೀತಿಯನ್ನ ಬಲ ಪಡಿಸುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಇದೀಗ ಭಾರತದ ಕರೆನ್ಸಿ ವಿಚಾರಕ್ಕೆ ಸಂಬಂಧ ಪಟ್ಟಂತಹ ಸ್ಪೋಟಕ ಮಾಹಿತಿಯೊಂದು ಹೊರ ಬಂದಿದೆ. ಅದು ಕೂಡ 500 ರೂಪಾಯಿ ಮುಖ ಬೆಲೆಯ ನೋಟಿನ ಕುರಿತಾಗಿ..

ಸಾಮಾಜಿಕ ಕಾರ್ಯಕರ್ತ ಮನೋರಂಜನ್ ರಾಯ್ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್ನಿಂದ ಹೊಸದಾಗಿ ವಿನ್ಯಾಸಗೊಳಿಸಲಾದ 500 ರೂಪಾಯಿ ಮುಖಬೆಲೆಯ 375.450 ಮಿಲಿಯನ್ ನೋಟುಗಳನ್ನ ಮುದ್ರಿಸಲಾಗಿದೆ, ಆದರೆ ಆರ್ಬಿಐ ದಾಖಲೆಗಳ ಪ್ರಕಾರ ಏಪ್ರಿಲ್ 2015 ರಿಂದ ಡಿಸೆಂಬರ್ 2016 ರವರೆಗೆ ಕೇವಲ 345.000 ಮಿಲಿಯನ್ ನೋಟುಗಳನ್ನ ಮಾತ್ರ ಮುದ್ರಿಸಲಾಗಿದೆ ಅಂತ ಉಲ್ಲೇಖಿಸಲಾಗಿದೆ. ಇದು ಭಾರತದ ಆರ್ಥಿಕತೆಗೆ ಮಹಾ ಕೊಡಲಿಪೆಟ್ಟು ಕೊಡುವ ಸಾಧ್ಯತೆ ಇದ್ದು, ನೋಟು ಮುದ್ರಣದಲ್ಲಿ ಮಹಾ ಅಕ್ರಮ ನಡೆದಿರೋದು ಆರ್ಟಿಐ ದಾಖಲೆಗಳಿಂದ ಕೂಡ ಬಹಿರಂಗವಾಗಿದೆ.
ಹೌದು.. ಏಪ್ರಿಲ್ 2015 ಮತ್ತು ಮಾರ್ಚ್ 2016 ರ ನಡುವೆ ನಾಸಿಕ್ ಟಂಕಸಾಲೆಯಲ್ಲಿ ಮುದ್ರಿಸಲಾದ 210 ಮಿಲಿಯನ್ ನೋಟುಗಳನ್ನ, ಗಣನೆಗೆ ತೆಗೆದುಕೊಂಡರೆ, ನಿಗೂಢವಾಗಿ ನಾಪತ್ತೆಯಾಗಿರುವ 500 ರೂಪಾಯಿಗಳ ಸುಮಾರು 1,760.65 ಮಿಲಿಯನ್ ನೋಟುಗಳು ಎಲ್ಲಿವೆ ಎಂಬುದರ ಬಗ್ಗೆ ಯಾವ ಮಾಹಿತಿಯೂ ಕೂಡ ಇಲ್ಲ. ಇದೀಗ ನಾಪತ್ತೆಯಾದ ಒಟ್ಟು ನೋಟುಗಳ ಮೌಲ್ಯ 88,032 ಕೋಟಿ ರೂಪಾಯಿಗಳಾಗಿದ್ದು, ಇಷ್ಟು ಮೊತ್ತದ ಹಣ ಏನಾಗಿದೆ, ಎಂಬುವುದರ ಬಗ್ಗೆ ಯಾರಿಗೂ ಕೂಡ ತಿಳಿಯದಿರುವುದು ಅಚ್ಚರಿಗೆ ಕಾರಣವಾಗಿದ್ರೆ, ಇಷ್ಟು ದೊಡ್ಡ ಮೊತ್ತದ ಹಣ ಕಾಣೆಯಾಗಿರುವುದರ ಹಿಂದೆ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಶಂಕೆ ಕೂಡ ವ್ಯಕ್ತವಾಗ್ತಾ ಇದೆ. ಇನ್ನು ಈ ಬಗ್ಗೆ ಆರ್ಬಿಐ ವಕ್ತಾರರು ಕೂಡ ಯಾವುದೇ ರೀತಿಯಾದ ಮಾಹಿತಿಯನ್ನ ಕೂಡ ನೀಡದೆ ಇರುವುದು ಕೂಡ ಹಲವು ಅನುಮಾನಗಳನ್ನ ಹುಟ್ಟು ಹಾಕಿವೆ.
ಆರ್‌ಟಿಐ ಬಯಲಾಯಿತು ಮಹಾ ಲೋಪ
ಭಾರತದ ಕರೆನ್ಸಿ ನೋಟುಗಳನ್ನ ಮೂರು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತೆ, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾಣ್ (ಪಿ) ಲಿಮಿಟೆಡ್ ಬೆಂಗಳೂರು, ಕರೆನ್ಸಿ ನೋಟ್ ಪ್ರೆಸ್ ನಾಸಿಕ್, ಹಾಗೂ ಬ್ಯಾಂಕ್ ನೋಟ್ ಪ್ರೆಸ್ ದೇವಾಸ್ನಲ್ಲಿ. ಇನ್ನು ಹೀಗೆ ಪ್ರಿಂಟ್ ಆದ ನೋಟುಗಳನ್ನ ಭಾರತೀಯ ಆರ್ಥಿಕತೆಯಲ್ಲಿ ಹೆಚ್ಚಿನ ವಿತರಣೆಗಾಗಿ ಆರ್ಬಿಐ ಕಮಾನುಗಳಿಗೆ ಕೂಡ ಕಳುಹಿಸಲಾಗುತ್ತೆ.
ಇನ್ನು ಸಾಮಾಜಿಕ ಕಾರ್ಯಕರ್ತ ಮನೋರಂಜನ್ ರಾಯ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಪಡೆದ ಮಾಹಿತಿಯ ಪ್ರಕಾರ, ಇನ್ನೊಂದಷ್ಟು ಮಾಹಿತಿಗಳು ಕೂಡ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಮತ್ತೊಂದು ಆರ್ಟಿಐನಲ್ಲಿ ಪಡೆದ ಉತ್ತರದಲ್ಲಿ, ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್, 2015-2016 (ಏಪ್ರಿಲ್ 2015-ಮಾರ್ಚ್ 2016,) ಆರ್ಬಿಐಗೆ 500 ರೂಪಾಯಿಗಳ 210.000 ಮಿಲಿಯನ್ ನೋಟುಗಳನ್ನ ಸರಬರಾಜು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಅವಧಿಯಲ್ಲಿ ರಘುರಾಮ್ ರಾಜನ್ ಅವರು ಆರ್ಬಿಐನ ಗವರ್ನರ್ ಆಗಿದ್ದರು ಅಂತ ತಿಳಿದು ಬಂದಿದೆ.
ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್ನ ವರದಿಯ ಪ್ರಕಾರ ಹೊಸದಾಗಿ ವಿನ್ಯಾಸಗೊಳಿಸಲಾದ 500 ರೂಪಾಯಿ ಕರೆನ್ಸಿ ನೋಟುಗಳನ್ನ ಸೆಂಟ್ರಲ್ ಬ್ಯಾಂಕ್ಗೆ ಸರಬರಾಜು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಆರ್ಬಿಐ ವಾರ್ಷಿಕ ವರದಿಯಲ್ಲಿ ಹೊಸ ವಿನ್ಯಾಸದೊಂದಿಗೆ ಯಾವುದೇ 500 ರೂಪಾಯಿ ನೋಟುಗಳನ್ನು ಸ್ವೀಕರಿಸಿರುವ ಕುರಿತು ಮಾಹಿತಿ ಇಲ್ಲ. ಆದರೆ ನಾಸಿಕ್ನ ಕರೆನ್ಸಿ ನೋಟ್ ಪ್ರೆಸ್ ಒದಗಿಸಿದ ಹೆಚ್ಚಿನ ಮಾಹಿತಿಯ ಪ್ರಕಾರ ಆರ್ಬಿಐ ತನ್ನ ಡೊಮೈನ್ ವಾರ್ಷಿಕ ವರದಿಯಲ್ಲಿ 2016-2017 ರಲ್ಲಿ ಆರ್ಬಿಐಗೆ ಹೊಸದಾಗಿ ವಿನ್ಯಾಸಗೊಳಿಸಲಾದ ರೂ 500 ನೋಟಿನ 1,662.000 ಮಿಲಿಯನ್ ನೋಟುಗಳ ಬಗ್ಗೆ ಉಲ್ಲೇಖವನ್ನ ಮಾಡಲಾಗಿದೆ.
ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ (ಪಿ) ಲಿಮಿಟೆಡ್, ಬೆಂಗಳೂರು, ಆರ್ಬಿಐಗೆ 5,195.65 ಮಿಲಿಯನ್ ನೋಟುಗಳನ್ನ ಪೂರೈಸಿದೆ ಇದರ ಜೊತೆಗೆ ಬ್ಯಾಂಕ್ ನೋಟ್ ಪ್ರೆಸ್, ದೇವಾಸ್, 2016-2017ರಲ್ಲಿ ಆರ್ಬಿಐಗೆ 1,953.000 ಮಿಲಿಯನ್ ನೋಟುಗಳನ್ನ ಪೂರೈಸಿದೆ, ಆದರೆ ಆರ್ಬಿಐ ಎಲ್ಲಾ ಮೂರು ಪ್ರಿಂಟಿಂಗ್ ಪ್ರೆಸ್ಗಳಿಂದ ಹೊಸದಾಗಿ ವಿನ್ಯಾಸಗೊಳಿಸಲಾದ 500 ರೂ ಮುಖಬೆಲೆಯ 7,260 ನೋಟುಗಳನ್ನ ಮಾತ್ರ ಸ್ವೀಕರಿಸಿದೆ. ಹೊಸ ವಿನ್ಯಾಸದ 500 ರೂ ನೋಟಿನ 8,810.65 ಮಿಲಿಯನ್ ತುಣುಕುಗಳನ್ನು ಮೂರು ಟಂಕಸಾಲೆಗಳಿಂದ ಮುದ್ರಿಸಲಾಗಿದೆ, ಆದರೆ RBI ಕೇವಲ 7,260.000 ತುಣುಕುಗಳನ್ನು ಪಡೆದುಕೊಂಡಿರೋದಾಗಿ ಉಲ್ಲೇಖಿಸಿದ. ಇದರಲ್ಲಿ ಮಹಾ ಅಕ್ರಮವೇ ನಡೆದಿದ್ಯಾ ಅನ್ನೋ ಅನುಮಾನ ಮೂಡ್ತಾ ಇದೆ.
ಮೂರು ಟಂಕಸಾಲೆಗಳಲ್ಲಿ ಮುದ್ರಿಸಲಾದ ಲಕ್ಷಾಂತರ ಹಾಗೂ ಅಧಿಕ ಮೌಲ್ಯದ ಕರೆನ್ಸಿ ನೋಟುಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಮನೋರಂಜನ್ ರಾಯ್ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಕರೆನ್ಸಿ ನೋಟುಗಳ ಮುದ್ರಣ ಮತ್ತು ಪೂರೈಕೆಯಲ್ಲಿನ ಬೃಹತ್ ಲಾಜಿಸ್ಟಿಕ್ಸ್ ಅನ್ನು ಉಲ್ಲೇಖಿಸಿ ಆರ್ಬಿಐನ ಹಿರಿಯ ಅಧಿಕಾರಿಗಳು ಹೊಂದಾಣಿಕೆಯಾಗದಿರುವುದನ್ನ ಸಮರ್ಥಿಸಿಕೊಂಡಿದ್ದಾರೆ. ಆದರೆ, ಆರ್ಬಿಐ ಕಮಾನುಗಳಿಗೆ ನೋಟುಗಳು ತಲುಪಲು ಇಷ್ಟು ಸಮಯ ಹಿಡಿಯೋದು ಮಾತ್ರ ವಿಚಿತ್ರ. ಹಾ…