ಪಂಜಾಬ್ನ ಅಮೃತಸರದಲ್ಲಿನ ಬಿಎಸ್ಎಫ್ ಕ್ಯಾಂಟೀನ್ ನಲ್ಲಿ ಯೋಧನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಇದರ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
![](https://pratidhvani.com/wp-content/uploads/2022/03/BSF_1200x768-1024x576.jpeg)
ಅಮೃತಸರದ ಅಟ್ಟಾರಿ ಗಡಿಯ ಖೇಸರದಲ್ಲಿನ ಬಿಎಸ್ಎಫ್ ಕ್ಯಾಂಟೀನ್ ನಲ್ಲಿ ಬಿಎಸ್ಎಫ್ ಯೋಧನೊಬ್ಬ ಮನಬಂದಂತೆ ಗುಡಿನ ದಾಳಿ ನಡೆಸಿದ ಪರಿಣಾಮ, ಐವರು ಯೋಧರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳು ಯೋಧರನ್ನು ಗುರು ನಾನಕ್ ದೇವ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ.