2024 ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು 4 Critical ಕ್ಷೇತ್ರಗಳ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗ ಕ್ಷೇತ್ರಗಳ ಕೋರ್ ಕಮಿಟಿ ಸಭೆ ಕರೆದಿದ್ದು, ಸಭೆಯಲ್ಲಿ ಕ್ಷೇತ್ರಗಳಲ್ಲಿನ ವಾತಾವರಣದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಅಷ್ಟಕ್ಕೂ ಈ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಷ್ಟ ಸಾಧ್ಯವಾಗಿದ್ದೇಕೆ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದಾದ್ರೆ, ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಬಂಡಾಯದ ಬಿಸಿ ಪಕ್ಷಕ್ಕೆ ತಟ್ಟಿತ್ತು. ಹಾಲಿ ಸಂಸದರುಗಳು ಟಿಕೆಟ್ ಮಿಸ್ ಆಗಿದೆ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದು, ಕೆಲ ನಿಷ್ಠಾವಂತ ಕಾರ್ಯಕರ್ತರು ಕೂಡ ಪಕ್ಷ ತ್ಯಜಿಸುವತ್ತ ನಿಗಾವಹಿಸಿದ್ದಾರೆ. ಇನ್ನು ಬಂಡಾಯ ಹೊರತುಪಡಿಸಿದ್ರೆ, ಗೆಲುವಿನ ವಾತಾವರಣಕ್ಕೆ ಅಡ್ಡಿಯಾಗಬಹುದಾದ ಒಂದಿಷ್ಟು ಅಂಶಗಳಿದ್ದು, ಅಲ್ಲಿ ಬಿಜೆಪಿ- ಜೆಡಿಎಸ್ ಸಮನ್ವಯ ಅನಿವಾರ್ಯತೆ ಎಂದು ಕಾಣ ಸಿಗುತ್ತಿರುವುದು. ಇದರ ಜೊತೆಗೆ ಕ್ಷೇತ್ರಗಳ ಮೇಲೆ ಈವರೆಗೂ ಅಭ್ಯರ್ಥಿಗಳು ಹಿಡಿತ ಸಾಧಿಸದೇ ಹೋಗಿರುವುದು. ಪ್ರಚಾರಕ್ಕೆಂದು ಹೋದಾಗ ಟಿಕೆಟ್ ಆಕಾಂಕ್ಷಿಗಳು ಅಥವಾ ಹಾಲಿ ಸಂಸದರುಗಳು ಅಭ್ಯರ್ಥಿಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡದೇ ಇರುವುದು. ನಮ್ಮ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ನಮ್ಮವರೇ ಅಡ್ಡಗಾಲು ಹಾಕುತ್ತಿರುವ ವಿಚಾರವನ್ನು ಚರ್ವೆ ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.
ಇತ್ತ ಚಿಕ್ಕಬಳ್ಳಾಪುರದಿಂದ ಡಾ.ಕೆ. ಸುಧಾಕರ್‌ಗೆ ಹಾಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ತುಮಕೂರಿನಲ್ಲಿ ಅಭ್ಯರ್ಥಿ ವಿ. ಸೋಮಣ್ಣರಿಗೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಚಿತ್ರದುರ್ಗದಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಗೋಬ್ಯಾಕ್ ಅಭಿಯಾನ, ದಾವಣಗೆರೆಯಲ್ಲಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ಗೆ ಸ್ಥಳೀಯ ಬಿಜೆಪಿ ನಾಯಕರಿಂದ ಒಳಪೆಟ್ಟಿನ ಆತಂಕ. ಹೀಗೆ ನಾಲ್ಕು Critical ಕ್ಷೇತ್ರಗಳ ನಾಯಕರನ್ನು ಕರೆಸಿ, ಅಮಿತ್ ಶಾ ಸಭೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
