ಈ ಜಗತ್ತಿನಲ್ಲಿ ಸಾಕಷ್ಟು ಅಚ್ಚರಿ ಘಟನೆಗಳು ನಡೆಯುತ್ತಲೇ ಇರುತ್ತವೆ, ಅವಳಲ್ಲೂ ಕೆಲವೊಂದು ಸುದ್ದಿಗಳನ್ನು ಕೇಳಿದಾಗ ಜಗತ್ತಿನಲ್ಲಿ ಇಂತಹ ಘಟನೆಗಳು ಕೂಡ ನಡೆಯುತ್ತವೆಯೇ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ನಮ್ಮ ಊಹೆಗೂ ಮೀರಿದ ಘಟನೆಗಳು ಅಚಾನಕ್ಕಾಗಿ ನಡೆದುಹೋಗುತ್ತವೆ ಒಂದು ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು.. 3 ವರ್ಷದ ಬಾಲಕ ಹಾವನ್ನು ಕಚ್ಚಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಮದ್ನಾಪುರ ಗ್ರಾಮದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ತನ್ನ ಬಳಿಗೆ ಬಂದ ಹಾವನ್ನು ಬಾಲಕ ಕಚ್ಚಿ ಸಾಯಿಸಿದ್ದಾನೆ ಈ ಘಟನೆಗೆ ಇಡೀ ಉತ್ತರ ಪ್ರದೇಶವೇ ಅಚ್ಚರಿಗೆ ಒಳಗಾಗಿದೆ..
ದಿನೇಶ್ ಸಿಂಗ್ ಎಂಬ ವ್ಯಕ್ತಿ ತನ್ನ ಮೂರು ವರ್ಷದ ಮಗ ಮತ್ತು ತಾಯಿಯೊಂದಿಗೆ ಮದ್ನಾಪುರ ಗ್ರಾಮದಲ್ಲಿ ವಾಸ ಮಾಡ್ತಾ ಇದ್ದಾರೆ. ಇನ್ನು ಕೆಲಸದ ನಿಮಿತ್ತ ಹೊರ ಹೋಗಿದ್ದ ದಿನೇಶ್ ಸಿಂಗ್, ತನ್ನ ತಾಯಿಯ ಬಳಿ ಮಗುವನ್ನ ನೋಡಿಕೊಳ್ಳಲು ಹೇಳಿ ಹೊರಹೋಗಿದ್ದಾನೆ. ಈ ಸಂದರ್ಭದಲ್ಲಿ ಕಳೆದ ಶನಿವಾರ ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ ಹಾವೊಂದು ಬಂದಿದೆ. ಹಾವಿನ ಬಗ್ಗೆ ಏನೂ ತಿಳಿಯದ ಆ ಪುಟ್ಟ ಬಾಲಕ ತೆವಳುತ್ತಿದ್ದ ಹಾವನ್ನು ಹಿಡಿದು ಬಾಯಿಗೆ ಹಾಕಿ ಕಚ್ಚಲು ಪ್ರಾರಂಭಿಸಿದ್ದಾನೆ.
ತನ್ನ ಮನೆಯ ಕೆಲಸದಲ್ಲಿ ನಿರತಳಾಗಿದ್ದ ಹುಡುಗನ ಅಜ್ಜಿ ಬಾಲಕನ ಚಟುವಟಿಕೆಯನ್ನ ಗಮನಿಸಲು ಬಂದಿದ್ದಾಳೆ ಈ ವೇಳೆ ಮಗುವಿನ ಬಾಯಲ್ಲಿ ರಕ್ತ ಸುರಿಯುತ್ತಿತ್ತು, ಹಾವು ಪಕ್ಕದಲ್ಲಿ ಬಿದ್ದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಜೋರಾಗಿ ಕೂಗಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ವೈದ್ಯರು ತಕ್ಷಣವೇ ಚಿಕಿತ್ಸೆ ಆರಂಭಿಸಿದ್ದಾರೆ, 24 ಗಂಟೆಗಳ ಬಳಿಕ ಯಾವುದೇ ಅಪಾಯವಿಲ್ಲ ಅಂತ ವೈದ್ಯರು ಹೇಳಿದ್ದಾರೆ. ಒಟ್ಟಾರೆಯಾಗಿ ಮಗು ಹಾವನ್ನ ಕಚ್ಚಿ ಕೊಂದಿರುವ ವಿಷಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಮಗುವನ್ನ ನೋಡಲು ಸಾಕಷ್ಟು ಮಂದಿ ಆಸ್ಪತ್ರೆಗೆ ಕೂಡ ಧಾವಿಸಿ ಬಂದಿದ್ದಾರೆ..