ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ದಂಪತಿ ಪುತ್ರ ನಟ ಅಭಿಷೇಕ್ ಅಂಬರೀಶ್ ಇಂದು ತಮ್ಮ ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಕುಟುಂಬಸ್ಥರು,ಸ್ಯಾಂಡಲ್ವುಡ್ ತಾರೆಯರು ಹಾಗೂ ಆಪ್ತ ಬಳಗದ ಸಮ್ಮುಖದಲ್ಲಿ ಅಭಿಷೇಕ್ – ಅವಿವಾ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ತಿಳಿ ಗುಲಾಬಿ ಬಣ್ಣದ ಸೀರೆ ಹಾಗೂ ಟೆಂಪಲ್ ಜ್ಯುವೆಲ್ಲರಿಯಲ್ಲಿ ಅವಿವಾ ಕಂಗೊಳಿಸಿದರೆ ನಟ ಅಭಿಷೇಕ್ ಅಂಬರೀಶ್ ಬಂಗಾರ ಬಣ್ಣದ ದೋತಿ, ಶರ್ಟ್ ಮತ್ತೆ ಪೇಟ ಧರಿಸಿ ಮಿಂಚಿದ್ರು. ಅಭಿಷೇಕ್ ವಿವಾಹಕ್ಕೆ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬೇರೆ ಇಂಡಸ್ಟ್ರಿಯ ನಟರು ಆಗಮಿಸಿದ್ದು ವಿಶೇಷವಾಗಿತ್ತು.


ನಟ ಸುದೀಪ್ ಕುಟುಂಬ, ನಟ ಯಶ್ – ರಾಧಿಕಾ ದಂಪತಿ, ತಲೈವಾ ರಜನೀಕಾಂತ್ ,ನಟಿ ಮೇಘನಾ ರಾಜ್ ಸರ್ಜಾ ಸೇರಿದಂತೆ ಚಿತ್ರರಂಗ ಗಣ್ಯರು ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.