ಕೇಂದ್ರ ಸರ್ಕಾರದ ಉಜ್ವಲ ಹಾಗೂ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ , 74.78% ರಷ್ಟು ಅಸಂಘಟಿತ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗದ ಕಾರಣ, ಸುಮಾರು 3.9 ಕೋಟಿ ಫಲಾನುಭವಿಗಳಿಗೆ ಸರ್ಕಾರದ ಯಾವುದೇ ಸಬ್ಸಿಡಿಗಳು ದೊರೆಯದಿರುವುದು ಬಹಿರಂಗವಾಗಿದೆ.
ಹೆಚ್ಚು ಓದಿದ ಸ್ಟೋರಿಗಳು
e-ಶ್ರಮ್ ಯೋಜನೆಯಡಿಯಲ್ಲಿ ಯಾವುದೇ ಕಾರ್ಮಿಕ ಫಲಾನುಭವಿಗಳು ಸಬ್ಸಿಡಿಗಳನ್ನು ಪಡೆಯ ಬೇಕೆಂದಿದ್ದರೆ ಮೊದಲು ಆಧಾರ್ ಕಾರ್ಡ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯನ್ನು e-ಶ್ರಮ್ ಪೋರ್ಟಲ್ನಲ್ಲಿ ಲಿಂಕ್ ಮಾಡಬೇಕಾಗಿತ್ತದೆ. ಆದರೆ ಸುಮಾರು ಮೂರು ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲ. ಪ್ರಮುಖವಾಗಿ e-ಶ್ರಮ್ ಪೋರ್ಟಲ್ನಲ್ಲಿ ಯಾರೇ ನೋಂದಣಿ ಮಾಡಿಕೊಳ್ಳಬೇಕಾದರೆ ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯನ್ನೇ ನೀಡಬೇಕಾಗಿದೆ.
ಅಸಂಘಟಿತ ವಲಯದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PMSYM), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗಳ e-ಶ್ರಮ್ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದೀಗ ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಖಾತೆಗಳಿಗೆ ಸಬ್ಸಿಡಿಯು ದೊರೆಯುತ್ತಿಲ್ಲ. ಇದೀಗ ಅಸಂಘಟಿತ ಕಾರ್ಮಿಕರು ಆಧಾರ್ ಲಿಂಕ್ ಮಾಡದೇ ಇದ್ದರೆ, ಪಿ ಎಂ ಫಂಡ್ ಸಿಗುವುದಿಲ್ಲ ಎಂಬುವುದು ಖಚಿತವಾಗಿದೆ. ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾರೇ ಫಲಾನುಭವಿಗಳಿದ್ದರೂ, ಆಧಾರ್ ಸಂಖ್ಯೆ ಹೊಂದಿರದೇ ಇದ್ದರೂ ಪಡಿತರ ಸೇವೆಯ ಸಬ್ಸಿಡಿಯಂತಹ ಪ್ರಮುಖ ಸೌಲಭ್ಯಗಳನ್ನು ಒದಗಿಸಬೇಕು ಕೋರ್ಟ್ ಆದೇಶಿಸಿತು.

e-ಶ್ರಮ್ನಿಂದ ಕಾರ್ಮಿಕರಿಗಾಗುವ ಅನುಕೂಲ ಏನು?
ಕಾರ್ಮಿಕ ಸಚಿವಾಲಯದ ಹಿರಿಯ ಅಧಿಕಾರಿಗಳು ಅಸಂಘಟಿತ ವಲಯದ ಕಾರ್ಮಿಕರ ಜತೆ ಮತ್ತು ಟ್ರೇಡ್ ಯೂನಿಯನ್ಗಳ ನಾಯಕರ ಜತೆ ನಿರಂತರ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಇ-ಶ್ರಮ ಪೋರ್ಟಲ್ನಲ್ಲಿ ನೋಂದಾಯಿಸುವುದರಿಂದ ಅಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಹೆಚ್ಚೆಚ್ಚು ಕಾರ್ಮಿಕರು ಪೋರ್ಟಲ್ನಲ್ಲಿ ನೋಂದಾಯಿಸಿ ಸರ್ಕಾರದ ಯೋಜನೆಗಳನ್ನು ನೇರವಾಗಿ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಈ ಘೋಷಣೆಯ ನಂತರ, ಈಗ ವಲಯದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (PMSYM), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY) ಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
