ನಿಷೇಧಿತ ಲಷ್ಕರೆ ಇ-ತೋಯ್ಬಾ ಸಹ ಸಂಸ್ಥಾಪಕ ಹಫೀಜ್ ಸಯೀದ್ ಗೆ 31 ವರ್ಷ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಾಕಿಸ್ತಾನ ಮೂಲದ ಲಷ್ಕರೆ ಇ-ತೋಯ್ಬಾ ಸಂಘಟನೆಯ ಸಹ ಸಂಸ್ಥಾಪಕ ಅಲ್ಲದೇ ಜಮಾತ್ ಇ-ಇಸ್ಲಾಮಿ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ 2 ಉಗ್ರವಾದಿ ಪ್ರಕರಣದಲ್ಲಿ ಕೈವಾಡವಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
2008ರ ಮುಂಬೈ ದಾಳಿ ಪ್ರಕರಣದ ಹಿಂದಿನ ರೂವಾರಿಯೂ ಆಗಿರುವ ಹಫೀಜ್ ಸಯೀದ್ ಭಾರತಕ್ಕೆ ಬೇಕಿದ್ದ ಪ್ರಮುಖ ಉಗ್ರರಲ್ಲಿ ಒಬ್ಬನಾಗಿದ್ದ. ಮುಂಬೈನಲ್ಲಿ 10 ಜನರ ಉಗ್ರರ ತಂಡ 4 ದಿನ ದಾಳಿ ನಡೆಸಿ 160 ಮಂದಿ ಹತ್ಯೆಗೈದಿದ್ದರು.