ಬರ್ತಡೇ ಪಾರ್ಟಿಯಲ್ಲಿ ಅಪ್ರಾಪ್ತೆಯ ಮೇಲೆ 6 ಮಂದಿ ಅತ್ಯಾಚಾರ ಗೈದಿರುವ ಘಟನೆ ಮುಂಬೈನ ಲೋವರ್ ಪ್ಯಾರೆಲ್ ಏರಿಯಾದಲ್ಲಿ ನಡೆದಿದೆ.
ಘಟನೆ ಸಂಬಂಧ ಮೂವರುಯ ಅಪ್ರಾಪ್ತರು ಸೇರಿದಂತೆ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಅಪ್ರಾಪ್ತೆಯನ್ನ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ಘಟನೆಯ ಪ್ರಮುಖ ಆರೋಪಿ ಸಂತ್ರಸ್ತೆಯ ಸ್ನೇಹಿತನಾಗಿದ್ದು ಆಕೆಯನ್ನು ಪುಸಲಾಯಿಸಿ ಸ್ನೇಹಿತರೊಬ್ಬರ ಜನಮುದಿನ ಆಚರಣೆಗೆಂದು ಕರೆದೊಯ್ದಿದ್ದಾನೆ. ತಡರಾತ್ರಿ ನೆರೆಹೊರಯವರು ಬಾಲಕಿಯ ಅರಚಾಟ ಕೇಳಿ ಪೊಲೀಸರಿಗೆ ವಿಚಾರ ತಿಳಿಸಿ ಸ್ಥಳಕ್ಕೆ ಧಾವಿಸಿದಾಗಬಾಲಕಿಯ ಮೇಲೆ ಅತ್ಯಚಾರವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಸಂತ್ರಸ್ತೆ ನೀಡುವ ಹೇಳಿಕೆಯ ಆಧಾರದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಪೋಕಸೋ ಕಾಯ್ದೆಯಡಿ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.