ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾಗ್ತಿರುವ ಪೆನ್‌ಡ್ರೈವ್ ಕೇಸ್‌ನಲ್ಲಿ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಮೊದಲು ಲೈಂಗಿಕ ಕಿರುಕುಳ ಕೇಸ್ ಹಾಕಿಸಿದ್ರು. ಅದರಲ್ಲಿ ಯಾವುದೇ ಸಾಕ್ಷ್ಯ ಸಿಗಲಿಲ್ಲ. ಅದಾದ ಮೇಲೆ ರೇಪ್ ಕೇಸ್ ಹಾಕಿಸಿದ್ರು. ಅದರಲ್ಲೂ ಸಾಕ್ಷ್ಯ ಸಿಗಲಿಲ್ಲ. ಏನಾದರೂ ಮಾಡಿ ದೇವರಾಜೇಗೌಡರನ್ನ ಮಟ್ಟಹಾಕಬೇಕು ಅಂತ ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಲಾಕ್ ಮಾಡಿಸಿದ್ದಾರೆ ಎಂದು ದೂರಿದ್ದಾರೆ.
ಪೆನ್‌ಡ್ರೈವ್ ಕೇಸ್‌ನಲ್ಲಿ ಡಿ.ಕೆ ಶಿವಕುಮಾರ್ ಕೈವಾಡ ಇದೆ. ಮುಂದೆ ನನ್ನ ಕಾನೂನು ಹೋರಾಟ ಡಿ.ಕೆ ಶಿವಕುಮಾರ್ ಜೈಲಿಗೆ ಕಳಿಸೋದು ಎಂದಿದ್ದಾರೆ. ಸರ್ಕಾರದ ನಾಲ್ಕು ಸಚಿವರು ನನ್ನನ್ನು ಕರೆಸಿ ಮಾತನಾಡಿಸಿದ್ದರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗು ಇನ್ನೊಬ್ಬ ಸಚಿವರು ನನಗೆ ಆಫರ್ ಕೊಟ್ರು. ₹100 ಕೋಟಿ ಹಣದ ಆಫರ್ ನೀಡಿದ್ದರು. ಅಡ್ವಾನ್ಸ್ ಆಗಿ ₹5 ಕೋಟಿ ಹಣವನ್ನ ಬೌರಿಂಗ್ ಕ್ಲಬ್‌ಗೂ ಕಳಿಸಿದ್ದರು. ಆದರೆ ನಾನು ಹಣದ ಡೀಲ್‌ಗೆ ಒಪ್ಪಲಿಲ್ಲ ಅದಕ್ಕೇ ಹೀಗೆಲ್ಲಾ ಮಾಡುತ್ತಿದ್ದಾರೆ. ಕುಮಾರಸ್ವಾಮಿಯನ್ನ ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಿದ್ದರು ಎಂದು ಹೇಳಿದ್ದಾರೆ.

ಕಾರ್ತಿಕ್ ಗೌಡನ ಹತ್ತಿರ ಪೆನ್‌ಡ್ರೈವ್ Pendrive ತರಿಸಿಕೊಂಡು ಎಲ್ಲಾ ರೆಡಿ ಮಾಡಿದ ಡಿ.ಕೆ ಶಿವಕುಮಾರ್, ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿ ಇದನ್ನೆಲ್ಲಾ ಹ್ಯಾಂಡಲ್ ಮಾಡಬೇಕು ಎಂದು ಬಿಟ್ಟಿದ್ದಾರೆ. ಇಷ್ಟೆಲ್ಲಾ ದೊಡ್ಡ ಹಗರಣ ಆಗಿರೋದ್ರಿಂದ ಮೋದಿಯವರಿಗೆ, ಬಿಜೆಪಿಗೆ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರೋದಕ್ಕೆ ಮಾಡಿದ್ರು. ಚನ್ನರಾಯಪಟ್ಟಣದ ಗೋಪಾಲಸ್ವಾಮಿಯನ್ನು Gopalaswamy ಐದು ಕೋಟಿ ಕ್ಯಾಷ್ ಕೊಟ್ಟು ಸಂಧಾನಕ್ಕೆ ಕಳಿಸಿದ್ರು. ₹100 ಕೋಟಿ Crores ಆಫರ್ ಮಾಡಿದ್ದು ಡಿ.ಕೆ ಶಿವಕುಮಾರ್. ಮೋದಿವರಿಗೆ ಕಳಂಕ ತರಬೇಕು, ಬಿಜೆಪಿಗೆ ಕೆಟ್ಟ ಹೆಸರು ತರಬೇಕು. ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ Kumaraswamy ನಾಯಕತ್ವ ಹಾಳು ಮಾಡಬೇಕು ಅನ್ನೋದು ಡಿಕೆಶಿ ಉದ್ದೇಶ ಎಂದಿದ್ದಾರೆ.

ಡಿ.ಕೆ ಶಿವಕುಮಾರ್ ಡೀಲ್‌ಗೆ ನಾನು ಒಪ್ಪದಿದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ಮಾಡಿಸಿದ್ರು. ಅದರಲ್ಲಿ ಡಾಕ್ಯೂಮೆಂಟ್ ಸಿಗಲಿಲ್ಲ, ನೆಗೆಟಿವ್ ಆಯ್ತು. ಆ ಬಳಿಕ ಮತ್ತೊಬ್ಬಳ ಕೈಯಲ್ಲಿ 354A ಕೇಸ್ ಹಾಕಿಸಿದ್ರು. ಅದೂ ಫೆಲ್ಯೂರ್ ಆಯ್ತು, ಆದಾದ್ಮೇಲೆ ರೇಪ್ ಕೇಸ್ ಹಾಕಿಸಿದ್ರು, ರೇಪ್ ಕೇಸ್‌ನಲ್ಲಿ ಯಾವುದೇ ದಾಖಲೆಗಳು ಸಿಗಲಿಲ್ಲ. 4 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್ D.K Shivakumar ನೇರವಾಗಿ ನನ್ನ ಹತ್ತಿರ ಮಾತನಾಡಿ ಹಣದ Money Offer ಆಫರ್ ಮಾಡಿದ್ರು ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ ವಕೀಲ ದೇವರಾಜೇಗೌಡ.

ಒಂದು ದಿನಗಳ ಕಾಲ ದೇವರಾಜೇಗೌಡರನ್ನು Devarajegowda ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು, ಬೆಂಗಳೂರಿನ ಸಿಐಡಿ ಕಚೇರಿಗೆ ಕರೆತಂದಿದ್ದಾರೆ. ಇಂದು ಮತ್ತು ನಾಳೆ ದೇವರಾಜೇಗೌಡರನ್ನ ತೀವ್ರ ವಿಚಾರಣೆ ನಡೆಸಲಿದ್ದು, ಆ ಬಳಿಕ ಮತ್ತೆ ಕೋರ್ಟ್‌ಗೆ ಹಾಜರು ಮಾಡಲಿದ್ದಾರೆ. ಹಾಸನದ Hassan ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ಸಂಬಂಧ ವಶಕ್ಕೆ ಪಡೆದಿರೋ SIT ಟೀಂ ಪ್ರಕರಣದ 8ನೇ ಆರೋಪಿಯಾಗಿ ಸೇರಿಸಿಕೊಂಡಿದ್ದಾರೆ. ಕಾರ್ತಿಕ್ ಗೌಡ ಕೂಡ ದೇವರಾಜೇಗೌಡಗೆ ಪೆನ್‌ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದರಿಂದ ದೇವರಾಜೇಗೌಡರನ್ನು ವಿಚಾರಣೆ ನಡೆಸಲು ಕಸ್ಟಡಿಗೆ ಪಡೆದಿದ್ದಾರೆ.













