ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ ವರದಿ ಟೈಮ್ಸ್ ಆಪ್ ಇಂಡಿಯಾಗೆ ಲಭ್ಯವಾಗಿದ್ದು ಈ ಕುರಿತು ಸಮಗ್ರವಾಗಿ ವರದಿ ಬಿತ್ತರಿಸಿದೆ.

ಕುಂಭ ಮೇಳದಲ್ಲಿ ಮಾಡಿದ ನಾಲ್ಕು ಲಕ್ಷ ಕರೋನ ಟೆಸ್ಟ್ ಗಳಿಲ್ಲ ಕನಿಷ್ಠ 1 ಲಕ್ಷ ಟೆಸ್ಟ್‌ ವರದಿಗಳನ್ನು ಖಾಸಗಿ ಸಂಸ್ಥೆ ನಕಲಿ ಮಾಡಿದೆ ಎನ್ನಲಾಗಿದೆ. ಒಂದೇ ಫೋನ್ ಸಂಖ್ಯೆಯನ್ನು 50ಕ್ಕೂ ಹೆಚ್ಚು ಜನರನ್ನು ಕರೋನ ಟೆಸ್ಟ್ ನೋಂದಾಯಿಸಲು ಬಳಸಲಾಗಿದೆ. ಒಂದು ಆಟಿಜೆನ್ ಟೆಸ್ಟ್ ಕಿಟ್ ನಿಂದ 700 ಮಾದರಿಗಳನ್ನು ಪರೀಕ್ಷಿಸಿದೆ ಎಂದು ತೋರಿಸಲಾಗಿದೆ. ಕರೋನ ಟೆಸ್ಟ್‌ ಮೊದಲು ನೀಡಬೇಕಿರುವ ವಿಳಾಸಗಳು ಮತ್ತು ಹೆಸರುಗಳು ಕಾಲ್ಪನಿಕವಾಗಿದ್ದು, ಹರಿದ್ವಾರದ ‘ಹೌಸ್ ನಂಬರ್ 5’ ಈ ಒಂದೇ ಮನೆಯಿಂದ ಸುಮಾರು 530 ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ಮನೆಯಲ್ಲಿ 500ಕ್ಕೂ ಹೆಚ್ಚು ಜನರು ಇರಲು ಸಾಧ್ಯವೇ? ವಿಲಕ್ಷಣ ವಿಳಾಸಗಳನ್ನು ನೀಡಲಾಗಿದೆ – ಹೌಸ್ ನಂಬರ್ 56 ಅಲಿಗ, ಹೌಸ್ ಸಂಖ್ಯೆ 76 ಮುಂಬೈ ನದ್ದು ಇದೆ ಕತೆ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು TOI ಗೆ ತಿಳಿಸಿದ್ದಾರೆ.

“ಫೋನ್ ಸಂಖ್ಯೆಗಳು ಸಹ ನಕಲಿ”. ಕಾನ್ಪುರ್, ಮುಂಬೈ, ಅಹಮದಾಬಾದ್ ಮತ್ತು ಇತರ 18 ಸ್ಥಳಗಳಲ್ಲಿನ ಜನರು ಒಂದೇ ಫೋನ್ ಸಂಖ್ಯೆಯನ್ನು ಕರೋನ ಟೆಸ್ಟ್‌ಗೆ ಹಂಚಿಕೊಂಡಿದ್ದಾರೆ.

ಕುಂಭಮೇಳ ಆರೋಗ್ಯ ಅಧಿಕಾರಿ ಡಾ.ಅರ್ಜುನ್ ಸಿಂಗ್ ಸೆಂಗಾರ್ ಅವರು, “ಏಜೆನ್ಸಿಯು ಎರಡು ಖಾಸಗಿ ಲ್ಯಾಬ್‌ಗಳಿಗೆ ಮಾದರಿಗಳನ್ನು ಸಲ್ಲಿಸಬೇಕಿತ್ತು. ಈ ಕುರಿತು ಲ್ಯಾಬ್‌ಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ” ಎಂದು TOIಗೆ ತಿಳಿಸಿದ್ದಾರೆ.

ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಅವರ ಪ್ರಕಾರ, “ಈ ಪ್ರಕರಣದಲ್ಲಿ ಹಲವಾರು ಅಕ್ರಮಗಳು ಕಂಡುಬಂದಿದ್ದು ಈ ಕುರಿತು ತನಿಖಾ ವರದಿಯನ್ನು ಹರಿದ್ವಾರ ಡಿಎಂಗೆ ರವಾನಿಸಲಾಗಿದೆ. 15 ದಿನಗಳಲ್ಲಿ ಡಿಎಂನಿಂದ ವಿವರವಾದ ವರದಿಯನ್ನು ಪಡೆದ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ ” ಎಂದು ಹೇಳಿದ್ದಾರೆ.

ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ.ರವಿಶಂಕರ್ ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಏಜೆನ್ಸಿಗಳ ಪಾವತಿ ಬಾಕಿ ಉಳಿಸಲು ಸೂಚಿಸಿದ್ದಾರೆ.

ಏಜೆನ್ಸಿಯಿಂದ ನೇಮಕಗೊಂಡ 200 ಕರೋನ ಮಾದರಿ ಸಂಗ್ರಹಾಕಾರರು ರಾಜಸ್ಥಾನದಲ್ಲಿ ಇರುವ ವಿದ್ಯಾರ್ಥಿಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಾಗಿದ್ದರು, ಏಜೆನ್ಸಿಯಿಂದ ನೇಮಿಸಲಾದ ವ್ಯಕ್ತಿಗಳು “ಮಾದರಿಗಳನ್ನು ಸಂಗ್ರಹಿಸಲುವುದಿರಲಿ ಅವರು ಹರಿದ್ವಾರಕ್ಕೆ ಹೋಗಿಯೇ ಇರಲಿಲ್ಲ. ಏಜೆನ್ಸಿಯಲ್ಲಿ ನೇಮಿಸಲಾದ ಮಾದರಿ ಸಂಗ್ರಹಾಕಾರರನ್ನು ನಾವು ಸಂಪರ್ಕಿಸಿದಾಗ, ಅವರಲ್ಲಿ 50% ಜನರು ರಾಜಸ್ಥಾನದ ನಿವಾಸಿಗಳು, ಹಲವರು ವಿದ್ಯಾರ್ಥಿಗಳು ಅಥವಾ ಡೇಟಾ ಎಂಟ್ರಿ ಆಪರೇಟರ್‌ಗಳು ಇವರ್ಯಾರು ಕುಂಭಮೇಳಕ್ಕೆ ಹೋಗಿಲ್ಲ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು TOIಗೆ ತಿಳಿಸಿದ್ದಾರೆ.

ಒಬ್ಬ ಮಾದರಿ ಸಂಗ್ರಾಹಕ ರಾಜಸ್ಥಾನದ ಹನುಮನ್‌‌ಗರ್ ಸರ್ಕಾರಿ ಅಧಿಕೃತ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡವನು. ಈತನನ್ನು ವಿಚಾರಣೆಯ ಒಳಪಡಿಸಿದಾಗ, ನಾನು ಕುಂಭಕ್ಕೆ ಹೋಗಲಿಲ್ಲ ಎಂದು ಹೇಳಿದ್ದಾನೆ. ತನಿಖೆಯ ವರದಿಯ ಪ್ರಕಾರ, ತನ್ನ ಬೋಧಕರು ಡೇಟಾವನ್ನು ಅಪ್‌ಲೋಡ್ ಮಾಡಲು ಹೇಳಿದ್ದಾರೆ, ಟ್ರೈನಿಂಗ್ ಭಾಗವಾಗಿ ಅದನ್ನು ಅಪ್ಲೋಡ್ ಮಾಡಿರುವುದಾಗಿ ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಇದು ” ಈ ಪ್ರಕರಣದ ಸೂಕ್ಷ್ಮವಾದೆ” ಏಕೆಂದರೆ ಕುಂಭ ಸಮಯದಲ್ಲಿ ಪ್ರತಿದಿನ ಕನಿಷ್ಠ 50,000 ಪರೀಕ್ಷೆಗಳನ್ನು ನಡೆಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು. ಇದಾದ ನಂತರ ಇನ್ನೂ ಎಂಟು ಮಾದರಿ ಸಂಗ್ರಹ ಏಜೆನ್ಸಿಗಳಿಗೆ ಕರೋನ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ವಹಿಸಿದೆ. ಕುಂಭ ಉತ್ಸವವನ್ನು ಏಪ್ರಿಲ್ 1 ರಿಂದ 30 ರವರೆಗೆ ಹರಿದ್ವಾರದಲ್ಲಿ ನಡೆಸಲಾಯಿತು. ಈ ಅವಧಿಯಲ್ಲಿ ನಾಲ್ಕು ಲಕ್ಷ ಪರೀಕ್ಷೆಗಳನ್ನು ಒಂಬತ್ತು ಏಜೆನ್ಸಿಗಳು ಮತ್ತು 22 ಖಾಸಗಿ ಲ್ಯಾಬ್‌ಗಳು ನಡೆಸಿದವು. ಈ ಪರೀಕ್ಷೆಗಳಲ್ಲಿ ಹೆಚ್ಚಿನವು ಆಂಟಿಜೆನ್ ಪರೀಕ್ಷೆಗಳಾಗಿವೆ. ರಾಜ್ಯ ಇಲಾಖೆಯು ಸರ್ಕಾರಿ ಪ್ರಯೋಗಾಲಯಗಳ ಮೂಲಕ ತನ್ನದೇ ಆದ ಪರೀಕ್ಷೆಗಳನ್ನು ಕೂಡ ನಡೆಸಿದೆ.

ಸ್ಕ್ಯಾನರ್ ಅಡಿಯಲ್ಲಿ ಏಜೆನ್ಸಿ ನಡೆಸಿದ 1 ಲಕ್ಷ ಪರೀಕ್ಷೆಗಳಲ್ಲಿ, 177 “ಕೋವಿಡ್ ಪಾಸಿಟಿವ್” – ಪಾಸಿಟಿವಿಟಿ ರೇಟ್ ಕೇವಲ 0.18%. ಇದಕ್ಕೆ ವ್ಯತಿರಿಕ್ತವಾಗಿ, ಏಪ್ರಿಲ್‌ನಲ್ಲಿ ಹರಿದ್ವಾರದಲ್ಲಿ ಪಾಸಿಟಿವಿಟಿ ರೇಟ್ 10% ವರೆಗೆ ಹೆಚ್ಚಾಯಿತು. ಈ ವಾರದ ಆರಂಭದಲ್ಲಿ ಕುಂಭ ಮೇಳಕ್ಕೆ ಭೇಟಿ ನೀಡದ ಪಂಜಾಬ್ ಮೂಲದ ವ್ಯಕ್ತಿಯೊಬ್ಬರ ಫೋನಿಗೆ ಹರಿದ್ವಾರ ಆರೋಗ್ಯ ಇಲಾಖೆಯಿಂದ ಕೋವಿಡ್ ನೆಗೆಟಿವ್ ವರದಿಯ ಮೆಸೇಜ್ ಬಂದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ದೂರು ನೀಡಿದ್ದು, ಈ ದೂರು ರಾಜ್ಯ ಅಧಿಕಾರಿಗಳನ್ನು ಎಚ್ಚರಿಸಿದೆ. ಏಜೆನ್ಸಿಗೆ ಪ್ರತಿ ಆಂಟಿಜೆನ್ ಪರೀಕ್ಷೆಗೆ 350 ರೂ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಹೆಚ್ಚಿನ ಮೊತ್ತವನ್ನು ನೀಡಲಾಗುತ್ತಿತ್ತು ಅಂದರೆ ಹಗರಣವು ಕೋಟಿ ಲೆಕ್ಕದಲ್ಲಾಗಿದೆ. ಇತರೆ ಏಜೆನ್ಸಿಗಳ ಪರೀಕ್ಷಾ ಫಲಿತಾಂಶಗಳನ್ನು ಸಹ ಈಗ ಪರಿಶೀಲಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು TOI ಗೆ ತಿಳಿಸಿದ್ದಾರೆ.

Please follow and like us:

Related articles

Share article

Stay connected

Latest articles

Please follow and like us: