• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹೈದರಾಬಾದ್‌ ಮೆಟ್ರೋ ಕಾಮಗಾರಿಯ ವೇಗ ಬೆಂಗಳೂರಿಗೊಂದು ಪಾಠ!

by
February 9, 2020
in ಕರ್ನಾಟಕ
0
ಹೈದರಾಬಾದ್‌ ಮೆಟ್ರೋ ಕಾಮಗಾರಿಯ ವೇಗ ಬೆಂಗಳೂರಿಗೊಂದು ಪಾಠ!
Share on WhatsAppShare on FacebookShare on Telegram

ಕಾರ್ಯಾರಂಭಗೊಂಡ ಎರಡು ವರ್ಷ 2-3 ತಿಂಗಳ ಒಳಗೇ ತನ್ನ ಮೂರೂ ಲೈನ್‌ಗಳಲ್ಲಿ ಸಕ್ರಿಯವಾಗಿರುವ ಹೈದರಾಬಾದ್‌ ಮೆಟ್ರೋ ಈಗ ದೆಹಲಿ ಬಿಟ್ಟರೆ ದೇಶದ ಎರಡನೇ ಅತಿ ದೊಡ್ಡ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ 69 ಕಿಮೀನಷ್ಟು active network ಹೊಂದಿರುವ ಹೈದರಾಬಾದ್‌ ಮೆಟ್ರೋದ ನಿರ್ಮಾಣ ಕಾಮಗಾರಿ ಸಂಬಂಧ ತೆಲಂಗಾಣ ಸರ್ಕಾರ ತೋರುತ್ತಿರುವ ರಾಜಕೀಯ ಇಚ್ಛಾಶಕ್ತಿಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬರುತ್ತಿದೆ.

ADVERTISEMENT

ಮತ್ತೊಂದು ಕಡೆ, ಎಂಟೂವರೆ ವರ್ಷಗಳ ಹಿಂದೆಯೇ ಕಾರ್ಯಾರಂಭಗೊಂಡ ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ವಿಸ್ತರಣೆ ಬಹಳ ನಿಧಾನವಾಗಿ ಸಾಗುತ್ತಿದ್ದು ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣ. ಮೊದಲೇ ಟ್ರಾಫಿಕ್ ಜಾಮ್‌ನಿಂದ ನರಳುತ್ತಿರುವ ಸಿಲಿಕಾನ್ ಸಿಟಿ ಜನರು ’ಇನ್ನೆಷ್ಟು ದಿನ ಕಾಯಬೇಕಪ್ಪಾ?’ ಎಂದು ಮೌನವಾಗಿ ಕಷ್ಟವನ್ನು ನುಂಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ವಿಸ್ತೀರ್ಣದಲ್ಲಿ ಹೈದರಾಬಾದ್‌ಗಿಂತ ದೊಡ್ಡದಾದ, ದೇಶದ ಮೂರನೇ ಅತಿ ದೊಡ್ಡ ನಗರವೂ ಆಗಿರುವ ಸಿಲಿಕಾನ್‌ ಸಿಟಿಯಲ್ಲಿ ಸಕ್ರಿಯವಾದ ಮೆಟ್ರೋ ಜಾಲದ ಉದ್ದ ಕೇವಲ ಬರೀ 42 ಕಿಮೀ ನಷ್ಟು ಮಾತ್ರ. ಎರಡು ಲೈನ್‌ಗಳು ಸಕ್ರಿಯವಾಗಿದ್ದು, ದಿನೇ ದಿನೇ ಹೆಚ್ಚುತ್ತಲೇ ಇರುವ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆಯ ಕಾರಣ ನಗರಾದ್ಯಂತ ಇನ್ನಷ್ಟು ವ್ಯಾಪಕವಾದ ಮೆಟ್ರೋ ಜಾಲದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಮೊನ್ನೆ ತಾನೇ ಹೈದರಾಬಾದ್ ಮೆಟ್ರೋ ಜಾಲಕ್ಕೆ ಹೆಚ್ಚುರಿಯಾಗಿ 11 ಕಿಮೀ ಮಾರ್ಗವನ್ನು ಸೇರಿಸುವ ಕೆಲಸ ಯಶಸ್ವಿಯಾಗಿ ಮುಗಿದಿದೆ. ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಖಾಸಗಿ ಪಾಲುದಾರಿಕೆ (PPP) ಪ್ರಾಜೆಕ್ಟ್‌‌ಗೆ ಮುಂದಡಿ ಇಟ್ಟು, ಇದನ್ನು ಬಹಳ ಅಚ್ಚುಕಟ್ಟಾಗಿ ಅನುಷ್ಠಾನ ಮಾಡಿಕೊಂಡು ಹೋಗುತ್ತಿರುವ ಹೈದರಾಬಾದ್‌ ಮೆಟ್ರೋನ ಮೂರನೇ ಲೈನ್‌ಅನ್ನು ಲೋಕಾರ್ಪಣೆ ಮಾಡಿದ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌, ಇಲ್ಲಿನ ಜುಬಿಲೀ ಬಸ್ ನಿಲ್ದಾಣದಿಂದ ಚಿಕ್ಕಡ್‌ಪಲ್ಲಿಯವರೆಗೆ ರೈಲಿನಲ್ಲಿ ಸಂಚರಿಸಿ ಉದ್ಘಾಟನಾ ಸವಾರಿ ಮಾಡಿದ್ದಾರೆ.

ನವೆಂಬರ್‌ 28, 2017ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಧ್ಯುಕ್ತ ಚಾಲನೆ ಪಡೆದ ಹೈದರಾಬಾದ್ ಮೆಟ್ರೋ, ನೋಡನೋಡುತ್ತಿದ್ದಂತೆಯೇ ಮೂರು ಲೈನ್‌ಗಳನ್ನು ಅಭಿವೃದ್ಧಿಪಡಿಸಿ, ಅವೆಲ್ಲವೂ ಈಗ ಸಕ್ರಿಯವಾಗಿ ಚಾಲೂ ಮಾಡಿ, ಪ್ರತಿನಿತ್ಯ 780 ಟ್ರಿಪ್‌ಗಳ ಮೂಲಕ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಾಟ ಮಾಡುತ್ತಿದೆ. ದೇಶದ ಅತಿ ದೊಡ್ಡ ಮೆಟ್ರೊ ನಿಲ್ದಾಣವಾಗಲಿದೆ ಎನ್ನಲಾಗುತ್ತಿರುವ ಮಹಾತ್ಮಾ ಗಾಂಧಿ ಬಸ್ ನಿಲ್ದಾಣ (MGBS) ಹಾಗೂ ಫಲಕ್‌ನುಮಾ ನಡುವಿನ ಮಾರ್ಗವೊಂದು ಪೂರ್ತಿಯಾಗಿ ಕಾಮಗಾರಿ ಕೆಲಸ ಮಗಿಸಿ ಈ ಜಾಲಕ್ಕೆ ಸೇರಿಕೊಂಡಲ್ಲಿ, ಮೊದಲ ಹಂತದ 73 ಕಿಮೀಗಳ ಅಷ್ಟೂ ಜಾಲ ಆಕ್ಟಿವೇಟ್ ಆಗಲಿದೆ. 20,000 ಕೋಟಿ ರೂಗಳ ಈ ಬೃಹತ್‌ ಯೋಜನೆಯ ನಿಮಾಣ ಕಾಮಗಾರಿಯನ್ನು L&T ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಲಾಗುತ್ತಿದೆ.

ಮತ್ತೊಂದೆಡೆ ದಿನದ 24 ಗಂಟೆಗಳ ಕಾಲವೂ ನಿರ್ಮಾಣ ಕಾಮಗಾರಿ ಮಾಡುವ ಮೂಲಕ ಮುಂಬಯಿ ಮೆಟ್ರೋ 3 ಅನ್ನು ಸಾಧ್ಯವಾದಷ್ಟು ಬೇಗ ಲೋಕಾರ್ಪಣೆ ಮಾಡಲು ಇಚ್ಛಿಸಿರುವ ಮಹಾರಾಷ್ಟ್ರ ಸರ್ಕಾರ, ಪುಣೆ ಹಾಗೂ ನಾಗ್ಪುರ ಮೆಟ್ರೋಗಳನ್ನೂ ಸಹ ದಾಖಲೆ ವೇಗದಲ್ಲಿ ಸಕ್ರಿಯವಾಗಿಸಿದೆ. ಮುಂಬಯಿ, ಚೆನ್ನೈ, ಹೈದರಾಬಾದ್, ದೆಹಲಿ, ಕೋಲ್ಕತ್ತಾ ಹಾಗೂ ಪುಣೆಗಳಲ್ಲಿ ಮೆಟ್ರೋಗಳೊಂದಿಗೆ ಸಬ್ ಅರ್ಬನ್‌ ರೈಲ್ವೇ ಜಾಲಗಳೂ ಸಹ ಸಕ್ರಿಯವಾಗಿ

ದಶಕಗಳ ಹೋರಾಟದ ಬಳಿಕ ಈ ಬಾರಿಯ ಬಜೆಟ್‌ನಲ್ಲಿ ಕೊನೆಗೂ ಸಬ್‌ ಅರ್ಬನ್‌ ರೈಲಿನ ಯೋಜನೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡ ಬೆಂಗಳೂರೆಂಬ ಟ್ರಾಫಿಕ್‌ ಬೆಂಗಾಡಿನ ನಿವಾಸಿಗಳು ಇನ್ನೂ ಅದೆಷ್ಟು ವರ್ಷಗಳು ತಮ್ಮ ದಿನನಿತ್ಯದ ರೋದನೆಗೆ ಫುಲ್ ಸ್ಟಾಪ್ ಹಾಕಲು ಕಾಯಬೇಕೋ ಗೊತ್ತಿಲ್ಲ.

Tags: ಬೆಂಗಳೂರಿಗೊಂದು ಪಾಠಮೆಟ್ರೋ ಕಾಮಗಾರಿಹೈದರಾಬಾದ್‌ ಮೆಟ್ರೋ
Previous Post

ಅಮಿತ್‌ ಶಾ ‘ಚಾಣಕ್ಯ’ನ ಪಟ್ಟಕ್ಕೆ ‘ಕಿಂಗ್ ಮೇಕರ್’ ಪ್ರಶಾಂತ್ ಕಿಶೋರ್ ಗುನ್ನಾ!

Next Post

ದಿಲ್ಲಿಯಲ್ಲಿ ಇವಿಎಂ ಹ್ಯಾಕ್ ಮಾಡುವ ಭೀತಿ? ಸಿಎಂ ಸಿಡಿಮಿಡಿ!

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ದಿಲ್ಲಿಯಲ್ಲಿ ಇವಿಎಂ ಹ್ಯಾಕ್ ಮಾಡುವ ಭೀತಿ? ಸಿಎಂ ಸಿಡಿಮಿಡಿ!

ದಿಲ್ಲಿಯಲ್ಲಿ ಇವಿಎಂ ಹ್ಯಾಕ್ ಮಾಡುವ ಭೀತಿ? ಸಿಎಂ ಸಿಡಿಮಿಡಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada