• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಿಎಎ-ಎನ್‌ಆರ್‌ಸಿ ಭಾರತಕ್ಕೆ ಹೊಂದುವಂತದಲ್ಲ; ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿ

by
June 27, 2020
in ದೇಶ
0
ಸಿಎಎ-ಎನ್‌ಆರ್‌ಸಿ ಭಾರತಕ್ಕೆ ಹೊಂದುವಂತದಲ್ಲ; ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿ
Share on WhatsAppShare on FacebookShare on Telegram

ಕಾಶ್ಮೀರಿ ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಭಾರತ ಸರ್ಕಾರ ಮರಳಿಸಬೇಕು ಎಂದು ಹೇಳಿರುವ ಡೆಮಾಕ್ರಟಿಕ್‌ ಪಕ್ಷದ ಅಮೇರಿಕಾ ಅಧ್ಯಕ್ಷ ಅಭ್ಯರ್ಥಿ ಜೋ ಬೈಡೆನ್‌, ಭಾರತದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಅಸ್ಸಾಮ್‌ನಲ್ಲಿ ಎನ್‌ಆರ್‌ಸಿ ಹೇರಿರುವ ಕುರಿತು ಕಳವಳ ವ್ಯಕ್ತ ಪಡಿಸಿದ್ದಾರೆ.

ADVERTISEMENT

ತನ್ನ ಚುನಾವಣಾ ಪ್ರಚಾರ ವೆಬ್‌ಸೈಟಿನಲ್ಲಿ ತನ್ನ ನಿಲುವು ಮತ್ತು ನಂಬಿಕೆಯ ಆಶಯವನ್ನು ವ್ಯಕ್ತಪಡಿಸಿರುವ ಜೋ- ಹಲವು ಪಂಡಗಳು, ಹಲವು ಜಾತಿ-ಧರ್ಮಗಳೊಂದಿಗೆ ಸೌಹಾರ್ದತೆಯಿಂದ ಬಾಳುವ, ಜಾತ್ಯಾತೀತೆಯ ಸುದೀರ್ಘ ಇತಿಹಾಸವಿರುವ ಪ್ರಜಾಪ್ರಭುತ್ವ ಭಾರತಕ್ಕೆ ಈ ಕ್ರಮಗಳು ಸರಿ ಹೊಂದುವುದಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಅಮೇರಿಕನ್ ಮುಸ್ಲಿಮರು‌ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಡಲು ಅವರ ಜೊತೆ ನಿಲ್ಲುವುದಾಗಿ ಹೇಳಿಕೊಂಡಿರುವ ಅಧ್ಯಕ್ಷೀಯ ಅಭ್ಯರ್ಥಿ ʼಜನಾಂಗೀಯ ಹಲ್ಲೆ, ಇಸ್ಲಾಮೋಫೋಬಿಯಾ ಮುಂತಾದ ಸವಾಲುಗಳನ್ನು ಅಮೇರಿಕನ್‌ ಮುಸ್ಲಿಮರು ಎದುರಿಸುತ್ತಿದ್ದಾರೆ, ಅಮೇರಿಕಾದ ಅಭಿವೃಧ್ದಿಗಳಲ್ಲಿ ಅಮೇರಿಕನ್‌ ಮುಸ್ಲಿಮರ ಪಾಲೂ ಇದೆ ಎಂದು ಹೇಳಿದ್ದಾರೆ.

ಟ್ರಂಪ್‌ ಭಾವಿಸಿರುವಂತಹ ಅಮೇರಿಕಾ ನಮ್ಮ ಅಮೇರಿಕವಲ್ಲವೆಂದು ಹೇಳುತ್ತಲೇ ಅಭಿಯಾನ ಶುರು ಮಾಡಿದ ಜೋ, ಇಲ್ಲಿ(ಅಮೇರಿಕಾ) ನೆಲೆಸಿರುವವರು ಎಲ್ಲಿಂದ ಬಂದವರು, ಅವರ ಕುಟುಂಬಸ್ಥರು ಎಲ್ಲಿ ನೆಲೆಸಿದ್ದಾರೆ, ಅವರು ಹೇಗೆ ಕಾಣುತ್ತಾರೆ ಹಾಗೂ ಯಾವ ಜನಾಂಗ ಮತ್ತು ನಂಬಿಕೆ ಯಾವುದೂ ಇಲ್ಲಿ ಮುಖ್ಯವಾಗುವುದಿಲ್ಲ. ಎಲ್ಲಾ ಪುರುಷ ಮತ್ತು ಮಹಿಳೆಯರು ಸಮಾನರು ಹಾಗೂ ಎಲ್ಲರಿಗೂ ಗೌರವಪೂರ್ವಕವಾಗಿ ಬದುಕಲು ಹಕ್ಕು ಇದೆ ಎಂಬುವುದು ಅಮೇರಿಕಾದ ಸಿದ್ಧಾಂತ. ಹಾಗೂ ಈ ಸಿದ್ಧಾಂತ ಯಾವುದೇ ಮಿಲಿಟರಿ, ಶಕ್ತಿಶಾಲಿ ಸರ್ವಾಧಿಕಾರಿಗಿಂತ ಬಲಯುತವಾದದ್ದು ಎಂದು ಹೇಳಿದ್ದಾರೆ. ನಮ್ಮ ಪೀಳಿಗೆಯ ಎಲ್ಲರೂ ಈ ಅಲೋಚನೆಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳದಿದ್ದರೂ ನಮ್ಮ ಮುಂದಿನ ತಲೆಮಾರು ಈ ವಿಶಾಲ ಮನೋಭಾವದೊಂದಿಗೆ ಬದುಕಬಲ್ಲರು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅಮೇರಿಕಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಮೇರಿಕರಲ್ಲದ ಜನರ, ನಿರಾಶ್ರಿತರು, ಅಲ್ಪಸಂಖ್ಯಾತರು ಹಾಗೂ ಮುಸಲ್ಮಾನರ ವಿರುದ್ಧ ಆಕ್ರಮಣಕಾರಿ ನಿಲುವನ್ನು ತಳೆದಿದ್ದಾರೆ. ಟ್ರಂಪ್‌ನ ಮುಸ್ಲಿಂ ವಿರೋಧಿ ನೀತಿಗಳು ನಮ್ಮ ಆರ್ಥಿಕತೆ ಹಾಗೂ ನೈತಿಕತೆಯ ಮೇಲೆ ಬಲವಾದ ಹೊಡೆತ ನೀಡಿದೆ. ಅಮೇರಿಕಗೆ ಮುಸ್ಲಿಮರ ಪ್ರವೇಶ ನಿರ್ಭಂಧಿಸುವುದರಿಂದ ದೇಶ ಭದ್ರವಾಗಿರುತ್ತದೆ ಎಂಬ ವಾದಕ್ಕೆ ಯಾವ ಹುರುಳೂ ಇಲ್ಲ, ವೈಜ್ಞಾನಿಕ ಕಾರಣವೂ ಇಲ್ಲ ಎಂದು ಅಧ್ಯಕ್ಷೀಯ ಅಭ್ಯರ್ಥಿ ಹೇಳಿದ್ದಾರೆ.

ಜಗತ್ತಿನ ಹಲವೆಡೆ ಜರುಗುತ್ತಿರುವ ಮುಸ್ಲಿಮ್‌ ವಿರೋಧಿ ಬೆಳವಣಿಗೆಗಳು ಹಾಗೂ ಹಾಲಿ ಅಮೇರಿಕಾ ಅಧ್ಯಕ್ಷರ ನೀತಿಗಳು ಅಮೇರಿಕಾದ ಮುಸ್ಲಿಮರನ್ನು ಆತಂಕಕ್ಕೆ ತಳ್ಳುತ್ತಿದೆ. ಚೀನಾದ ಉಯ್ಘರ್‌ನಲ್ಲಿ, ಬರ್ಮಾದ ರೊಹಿಂಗ್ಯಾದಲ್ಲಿ ಹಾಗೂ ಭಾರತದಲ್ಲಿ ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರದಲ್ಲಿ ಪ್ರಭುತ್ವ ನಡೆಸುತ್ತಿರುವ ದೌರ್ಜನ್ಯವು ಒಪ್ಪತಕ್ಕಂತಹದಲ್ಲ ಎಂದು ಜೋ ಹೇಳಿದ್ದಾರೆ.

ಟ್ರಂಪ್‌ನ್ನು ಗೆಳೆಯನೆಂದು ಹೇಳಿಕೊಳ್ಳುವ ನರೇಂದ್ರ ಮೋದಿಯವರು ಎಷ್ಟು ಆಪ್ತರೋ ಗೊತ್ತಿಲ್ಲ. ಆದರೆ ಜನರನ್ನು ಧ್ರುವೀಕರಿಸಿ ಆಡಳಿತ ನಡೆಸುವುದರಲ್ಲಿ ಇಬ್ಬರೂ ಸಮಾನಮನಸ್ಕರೇ.. ಈಗ ಅದೇ ಟ್ರಂಪ್‌ ಪಕ್ಷದ ವಿರೋಧ ಪಕ್ಷ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ ಮತ್ತು ಮೋದಿಯ ನಡೆಗಳನ್ನು ಟೀಕಿಸಿ ಸೌಹಾರ್ದದ ದೇಶ ಕಟ್ಟುವ ಕನಸನ್ನು ಬಿತ್ತಿದ್ದಾರೆ. ಕರೋನಾ ನಿಯಂತ್ರಿಸುವಲ್ಲಿ ವಿಫಲತೆ, ಜನಾಂಗೀಯವಾದದ ವಿರುದ್ಧ ಭುಗಿಲೆದ್ದ ಹೋರಾಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುತ್ತಿರುವ ಅಮೇರಿಕಾದ ವರ್ಚಸ್ಸು ಅಮೇರಿಕಾದಲ್ಲಿ ಟ್ರಂಪ್‌ನ ವಿರೋಧಿ ಅಲೆ ಎದ್ದಿರುವಂತೆ ಕಾಣುತ್ತಿದೆ. ಅಮೇರಿಕನ್ನರು ಜನಾಂಗೀಯವಾದಿ ಟ್ರಂಪನ್ನು ಆಯ್ದುಕೊಳ್ಳುತ್ತಾರೋ ಮಾನವತಾವಾದಿ ಜೋ ಬೈಡನ್‌ರನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕು.

Previous Post

ಕರೋನಾ ಆತಂಕದ ನಡುವೆ ವೈರಾಣು ಪರೀಕ್ಷೆ ಕುಂಠಿತವಾಗಲು ಕಾರಣವೇನು?

Next Post

ಕಾರ್ಮಿಕರ ಭವಿಷ್ಯ ನಿಧಿಗೆ ‘ಕನ್ನ’ ಹಾಕಲು ಮುಂದಾದ ಪ್ರಧಾನಿ ನರೇಂದ್ರ ಮೋದಿ!

Related Posts

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!
Top Story

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

by ಪ್ರತಿಧ್ವನಿ
August 19, 2026
0

ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಿಸುವ ವೇಳೆ ಉಪ್ಪಿನ ಬದಲು ತಪ್ಪಾಗಿ ಡಿಟರ್ಜೆಂಟ್‌ ಪೌಡರ್‌ ಬಳಸಿದ ಪರಿಣಾಮ 36 ವಿದ್ಯಾರ್ಥಿನಿಯರು ಅಸ್ವಸ್ಥರಾದ ಘಟನೆ...

Read moreDetails
3ನೇ ಮಗುವಿಗೂ ಒಂದು ವರ್ಷ ಮಾತೃತ್ವ ರಜೆ: ತಮಿಳುನಾಡು ಸರ್ಕಾರದ ಮಹತ್ವದ ಘೋಷಣೆ

3ನೇ ಮಗುವಿಗೂ ಒಂದು ವರ್ಷ ಮಾತೃತ್ವ ರಜೆ: ತಮಿಳುನಾಡು ಸರ್ಕಾರದ ಮಹತ್ವದ ಘೋಷಣೆ

August 19, 2026
ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ದುರಂತ: ಮಲಗಿದಲ್ಲೇ ಕಣ್ಮುಚ್ಚಿದ 9 ವಿದೇಶಿಗರು

ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ದುರಂತ: ಮಲಗಿದಲ್ಲೇ ಕಣ್ಮುಚ್ಚಿದ 9 ವಿದೇಶಿಗರು

August 19, 2026
ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

August 18, 2026
JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

JSSC-CGL ಪರೀಕ್ಷೆ ರದ್ದು: 16 ದಿನಗಳ ಉಪವಾಸ ಅಂತ್ಯಗೊಳಿಸಿದ ವಿದ್ಯಾರ್ಥಿ ನಾಯಕ

August 18, 2026
Next Post
ಕಾರ್ಮಿಕರ ಭವಿಷ್ಯ ನಿಧಿಗೆ ‘ಕನ್ನ’ ಹಾಕಲು ಮುಂದಾದ ಪ್ರಧಾನಿ ನರೇಂದ್ರ ಮೋದಿ!

ಕಾರ್ಮಿಕರ ಭವಿಷ್ಯ ನಿಧಿಗೆ ‘ಕನ್ನ’ ಹಾಕಲು ಮುಂದಾದ ಪ್ರಧಾನಿ ನರೇಂದ್ರ ಮೋದಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada