• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸತತ ಹತ್ತು ದಿನಗಳೂ ಪೆಟ್ರೋಲ್, ಡಿಸೇಲ್ ದರ ಏರಿಸಿ ಐತಿಹಾಸಿಕ ದಾಖಲೆ ಮಾಡಿದ ಪ್ರಧಾನಿ ಮೋದಿ!

by
June 16, 2020
in ದೇಶ
0
ಸತತ ಹತ್ತು ದಿನಗಳೂ ಪೆಟ್ರೋಲ್
Share on WhatsAppShare on FacebookShare on Telegram

ಇಡೀ ದೇಶದ ಜನತೆ ತಮಗೆ ಗೊತ್ತಿಲ್ಲದಂತೆ ಐತಿಹಾಸಿಕ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಈ ದಾಖಲೆಯನ್ನು ನಿರ್ಮಿಸಿದ್ದು ತಮ್ಮನ್ನು ತಾವು ‘ಪ್ರಧಾನ ಸೇವಕ’ರೆಂದೂ, ‘ಚೌಕಿದಾರ’ನೆಂದೂ ಕರೆದುಕೊಂಡ ಪ್ರಧಾನಿ ನರೇಂದ್ರ ಮೋದಿ. ದಾಖಲೆ ಏನಪ್ಪಾ ಅಂದ್ರೆ- ಇದೇ ಮೊದಲ ಬಾರಿಗೆ ದೇಶದಲ್ಲಿ ಸತತ ಹತ್ತು ದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿದೆ. ಏರಿದ ದರದ ಪ್ರಮಾಣವು ಗರಿಷ್ಠ ಮಟ್ಟದಲ್ಲಿ ಇದೆ. ಈ ಹಿಂದೆ ಕೂಡಾ ಅದೂ ಪ್ರಧಾನಿ ನರೇಂದ್ರ ಮೋದಿ ಅವರ ‘ಆಳ್ವಿಕೆ’ಯಲ್ಲೇ ಅಂದರೆ 2018 ಮತ್ತು 2019 ರಲ್ಲಿ ಸತತ ಹತ್ತುದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿತ್ತು. ಆಗ ಏರಿದ್ದರ ದುಪ್ಪಟ್ಟು ಪ್ರಮಾಣದಲ್ಲಿ ಈಗ ದರ ಏರಿಕೆ ಆಗಿದೆ.

ADVERTISEMENT

‘ಪ್ರತಿಧ್ವನಿ’ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯ ಬಗ್ಗೆ ಕಾಲಕಾಲಕ್ಕೆ ವಿಸ್ತೃತ ವರದಿ ಮಾಡುತ್ತಿದೆ. ಗ್ರಾಹಕರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಾ ಬಂದಿದೆ. ಲಾಕ್‌ಡೌನ್‌ ತೆರವು ಮಾಡಿದ ಹಿಂದಿನ ದಿನದಿಂದಲೇ ಅಂದರೆ ಜೂನ್ 7ರಿಂದಲೇ ಪ್ರಧಾನಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುತ್ತಲೇ ಬಂದಿದೆ. ಗ್ರಾಹಕರೂ ಇವತ್ತಲ್ಲಾ ನಾಳೆ ದರ ಏರಿಕೆ ನಿಲ್ಲಬಹುದು, ಏರಿಕೆ ನಿಂತ ನಂತರ ದರವು ಇಳಿಯಬಹುದು ಎಂಬ ನಿರೀಕ್ಷೆಯಿಂದ ಕಾಯುತ್ತಲೇ ಇದ್ದಾರೆ. ಆದರೆ, ದುರಾದೃಷ್ಟವಶಾತ್ ಹತ್ತು ದಿನಗಳ ನಂತರವೂ ಏರುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ದರವು ಇಳಿಯುತ್ತಿಲ್ಲ. ಇನ್ನೂ ಎಷ್ಟು ದಿನಗಳ ಕಾಲ ಈ ಏರಿಕೆ ಮುಂದುವರೆಯುತ್ತದೋ ಅದೂ ಗೊತ್ತಿಲ್ಲ. ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ದರವು ಐತಿಹಾಸಿಕ ಗರಿಷ್ಠ ದರ ಮುಟ್ಟುವ ಮತ್ತು ಹೊಸ ಗರಿಷ್ಠ ದರ ದಾಖಲೆ ಮಾಡುವ ದಿನ ದೂರವಿಲ್ಲ.

Also Read: ಪ್ರಧಾನಿ ಮೋದಿ ಮ್ಯಾಜಿಕ್: ಸತತ ಐದನೇ ದಿನವೂ ಏರಿದ ಪೆಟ್ರೋಲ್, ಡಿಸೇಲ್ ಬೆಲೆ !

2018 ಸೆಪ್ಟೆಂಬರ್ 10 ರಂದು ಪೆಟ್ರೋಲ್ 83.84 ರುಪಾಯಿಗೆ ಏರಿದ್ದು, 2018 ಅಕ್ಟೋಬರ್ 15 ರಂದು ಡಿಸೇಲ್ 75.88 ರುಪಾಯಿಗೆ ಏರಿದ್ದು ಇದುವರೆಗಿನ ಸರ್ವಕಾಲಿಕ ಗರಿಷ್ಠದರದ ದಾಖಲೆಯಾಗಿದೆ. ಮಂಗಳವಾರ(ಜೂನ್ 16) ಬೆಂಗಳೂರಿನಲ್ಲಿ ಪೆಟ್ರೋಲ್ ದರವು 79.22 ರುಪಾಯಿಗೂ ಡಿಸೇಲ್ ದರವು 71.49ಕ್ಕೂ ಜಿಗಿದಿದೆ.

ಕಳೆದ ಹತ್ತು ದಿನಗಳಲ್ಲಿ 73.55 ರುಪಾಯಿ ಇದ್ದ ಪೆಟ್ರೋಲ್ 79.22 ರುಪಾಯಿಗೂ ಏರಿದ್ದು ಒಟ್ಟು ಏರಿಕೆಯು 5.67 ರುಪಾಯಿಗಳಾಗಿದೆ. 65.96 ರುಪಾಯಿ ಇದ್ದ ಡಿಸೇಲ್ 71.49 ರುಪಾಯಿಗೆ ಏರಿದ್ದು ಒಟ್ಟು 5.53 ರುಪಾಯಿ ಏರಿಕೆಯಾಗಿದೆ. ಈ ಹತ್ತು ದಿನಗಳಲ್ಲಿ ನಿತ್ಯವೂ ಸರಾಸರಿ ಪೆಟ್ರೋಲ್ 57 ಪೈಸೆ, ಡಿಸೇಲ್ 55 ಪೈಸೆ ಏರಿಕೆಯಾಗಿದೆ. 2018 ಮೇ ತಿಂಗಳಲ್ಲಿ ಸತತ ಹತ್ತು ದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಿದ್ದಾಗ ಪೆಟ್ರೋಲ್ 2.90 ರುಪಾಯಿ ಮತ್ತು ಡಿಸೇಲ್ 2.40 ರುಪಾಯಿ ಅಂದರೆ ನಿತ್ಯ ಸರಾಸರಿ 29 ಪೈಸೆ ಮತ್ತು 24 ಪೈಸೆಯಷ್ಟು ಏರಿಕೆಯಾಗಿತ್ತು. 2019ರ ಜುಲೈ ತಿಂಗಳಲ್ಲಿ ಸತತ ಹತ್ತು ದಿನಗಳ ಕಾಲ ಪೆಟ್ರೋಲ್ ಮತ್ತು ಡಿಸೇಲ್ 2.60 ಮತ್ತು 2.90 ರುಪಾಯಿ ಅಂದರೆ ನಿತ್ಯವೂ ಸರಾಸರಿ 26 ಮತ್ತು 29 ಪೈಸೆ ಏರಿಕೆಯಾಗಿತ್ತು. ಆಗಿನ ಹತ್ತು ದಿನಗಳ ಏರಿಕೆಗೆ ಹೋಲಿಸಿದರೆ ಈಗ ದುಪ್ಪಟ್ಟು ಏರಿಕೆಯಾಗಿದೆ. ಹತ್ತು ದಿನಗಳಲ್ಲಿ ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ ದರ ಏರಿಕೆಯಾದ ಉದಾಹರಣೆಗಳಿಲ್ಲ. ಇದೇ ಐತಿಹಾಸಿಕ ದರಏರಿಕೆಯ ದಾಖಲೆಯಾಗಿದೆ. ಈ ಹಿಂದೆ ಮಾಸಿಕ, ಪಾಕ್ಷಿಕವಾಗಿ ದರ ನಿಗದಿ ಮಾಡುತ್ತಿದ್ದ ಅವಧಿಯಲ್ಲೂ ಎಂದೂ ಹತ್ತು ದಿನಗಳ ಅವಧಿಗೆ ಸರಾಸರಿ ಶೇ.8ರಷ್ಟು ಏರಿಕೆ ಆಗಿದ್ದಿಲ್ಲ.

Also Read: ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಮತ್ತೆ ಶಾಕ್ ನೀಡಿದ ಪ್ರಧಾನಿ ಮೋದಿ!

ಒಂದು ವೇಳೆ ಕಳೆದ ಹತ್ತು ದಿನಗಳ ದರ ಏರಿಕೆಯನ್ನೇ ಮಾನದಂಡವಾಗಿಟ್ಟುಕೊಂಡು ಅಳೆದು ನೋಡಿದರೆ- ಮುಂದಿನ ಐದೂ ದಿನಗಳೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮುಂದುವರೆದರೆ ಸರ್ವಕಾಲಿಕ ಗರಿಷ್ಠ ದರದ ಹೊಸ ದಾಖಲೆ ಆಗಬಹುದು.

ಬೆಲೆ ಏರಿಕೆ ಬಗ್ಗೆ ತಕರಾರು ಏಕೆ?

ಪ್ರಧಾನಿ ನರೇಂದ್ರಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುತ್ತಿರುವ ಬಗ್ಗೆ ತಕರಾರು ಏಕೆ? ಏಕೆಂದರೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಇಳಿಜಾರಿನಲ್ಲಿ ಸಾಗಿದೆ. ಆದರೆ, ಇತ್ತ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಆಕಾಶದತ್ತ ಜಿಗಿಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆ ದರ ನಿಗದಿ ಮಾಡಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸತತ ಹತ್ತನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಕೆ ಮಾಡಿದೆ.

Also Read: ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ 8 ರೂಪಾಯಿ ಏರಿಕೆ..!!

ಕರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿದ ನಂತರ ದೇಶದ ಜನರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಿತ್ಯ ಜೀವನ ಸಾಗಿಸಲು ಸಾಲ ಮಾಡಬೇಕಾದ ದಯನೀಯ ಸ್ಥಿತಿಯಲ್ಲಿ ಕೋಟ್ಯಂತರ ಜನರಿದ್ದಾರೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆ ಹೇರುವ ಬದಲು ತೆರಿಗೆ ತಗ್ಗಿಸಿ ಜನರಿಗೆ ನೆರವು ನೀಡಬೇಕಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟ ಮಾಡಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಇಂತಹ ಸಂಕಷ್ಟ ಸ್ಥಿತಿಯಲ್ಲೂ ತಕ್ಷಣವೇ ಬೊಕ್ಕಸಕ್ಕೆ ನಗದು ಹರಿದು ಬರುವ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಭಾರಿ ಪ್ರಮಾಣದಲ್ಲಿ ತೆರಿಗೆ ಹೇರಿ ನಿತ್ಯವೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುತ್ತಿದೆ. ಇದು ನ್ಯಾಯ ಸಮ್ಮತವಂತೂ ಅಲ್ಲವೇ ಅಲ್ಲಾ. ಇದು ಹಗಲು ದರೋಡೆ ಅಲ್ಲದೇ ಬೇರೇನೂ ಅಲ್ಲ.

Also Read: ಪ್ರಧಾನಿ ನೀಡಿದ ಮಧ್ಯರಾತ್ರಿ ಶಾಕ್! ಪೆಟ್ರೋಲ್ ಮೇಲೆ ₹10, ಡಿಸೇಲ್ ಮೇಲೆ ₹13 ಹೆಚ್ಚುವರಿ ಟ್ಯಾಕ್ಸ್!!

ಕಳೆದ ಮೂರು ತಿಂಗಳಿಂದಲೂ ಕಚ್ಚಾ ತೈಲ ದರದಲ್ಲಿ ಬಾರಿ ಇಳಿಕೆಯಾಗಿದೆ. ಒಂದು ಹಂತದಲ್ಲಿ ಋಣಾತ್ಮಕ ದರಕ್ಕೆ ಕುಸಿದು ವಹಿವಾಟಾಗಿದೆ. ಪ್ರತಿ ಬ್ಯಾರೆಲ್ ಗೆ ಸರಾಸರಿ 10 ಡಾಲರ್ ಗಳ ಆಜಾಬಾಜಿನಲ್ಲಿ ವಹಿವಾಟಾಗಿದೆ. ಇದೀಗ ಡಬ್ಲ್ಯೂಟಿಐ ಮತ್ತು ಬ್ರೆಂಟ್ ಕ್ರೂಡ್ ಕ್ರಮವಾಗಿ 28 ಮತ್ತು 30 ಡಾಲರ್ ಗಳ ಆಜುಬಾಜಿನಲ್ಲಿ ವಹಿವಾಟಾಗುತ್ತಿವೆ. ಈ ಪ್ರಮಾಣದಲ್ಲಿ ಕಚ್ಚಾ ತೈಲ ದರ ಇದ್ದಾಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರವು 50 ರುಪಾಯಿ ಮತ್ತು ಡಿಸೇಲ್ ದರವು 42 ರುಪಾಯಿ ಆಜುಬಾಜಿನಲ್ಲಿ ಗ್ರಾಹಕರಿಗೆ ಲಭ್ಯವಾಗಬೇಕು. ಆದರೆ, ಮೋದಿ ಸರ್ಕಾರವು ಹತ್ತಾರು ಪಟ್ಟು ತೆರಿಗೆ ಹೇರಿ ನಿತ್ಯವೂ ದರ ಏರಿಕೆ ಮಾಡುತ್ತಲೇ ಇದೆ. ದುರಾದೃಷ್ಟವಶಾತ್ ಜನತೆ ದರ ಏರಿಕೆಯನ್ನು ಒಪ್ಪಿಕೊಂಡಂತಿದೆ. ದರ ಏರಿಕೆ ವಿರುದ್ಧ ಯಾರೂ ದನಿ ಎತ್ತುತ್ತಿಲ್ಲ.

Tags: petrol-diesel price hikePM Modiಐತಿಹಾಸಿಕ ದಾಖಲೆಡಿಸೇಲ್ ದರಪೆಟ್ರೋಲ್ಪ್ರಧಾನಿ ಮೋದಿ
Previous Post

PM-CARES ಲೆಕ್ಕ ಕೇಳಿದವರಿಗೆ ಬಿ.ಎಲ್ ಸಂತೋಷ್ ತಿರುಗೇಟು..!

Next Post

ಲಾಕ್‌ಡೌನ್ ಪರ ವರದಿಯನ್ನು ತಳ್ಳಿ ಹಾಕಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

Related Posts

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
0

"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....

Read moreDetails

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025

CM Siddaramaiah: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ..

October 29, 2025
Next Post
ಲಾಕ್‌ಡೌನ್ ಪರ ವರದಿಯನ್ನು ತಳ್ಳಿ ಹಾಕಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

ಲಾಕ್‌ಡೌನ್ ಪರ ವರದಿಯನ್ನು ತಳ್ಳಿ ಹಾಕಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

Please login to join discussion

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.
Top Story

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

by ಪ್ರತಿಧ್ವನಿ
November 2, 2025
ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ
Top Story

ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ

by ಪ್ರತಿಧ್ವನಿ
November 2, 2025
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ
Top Story

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

by ಪ್ರತಿಧ್ವನಿ
November 2, 2025
ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!
Top Story

ಗಡಿನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವದ ಕಲರವ!

by ಪ್ರತಿಧ್ವನಿ
November 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada