ದೆಹಲಿಯ ಕಸ್ತೂರ್ಬಾ ಗಾಂಧಿ ಆಸ್ಪತ್ರೆಯ ನಿವಾಸಿ ವೈದ್ಯರು ಒಂದು ವಾರಗಳ ಧರಣಿ ನಿಡೆಸುವ ತೀರ್ಮಾನಕ್ಕೆ ಬಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸರಿಯಾಗಿ ವೇತನ ನೀಡದ ಕಾರಣಕ್ಕಾಗಿ ಈ ನಿರ್ಧಾರ ತಾಳಲಾಗಿದೆ.

ಆಸ್ಪತ್ರೆಯ ವೈದ್ಯಾಧಿಕಾರಿಗೆ ನೀಡಿರುವ ಪತ್ರದಲ್ಲಿ “ಜುಲೈ 2020ರಿಂದ ವೇತನ ಪಾವತಿಯಾಗದ ಕಾರಣಕ್ಕೆ ಒಂದು ವಾರಗಳ ಕಾಲ ಧರಣಿ ನಡೆಸುತ್ತಿದ್ದೇವೆ. ನಾಳೆಯಿಂದ ಅಂದರೆ ಅಕ್ಟೋಬರ್ 14ರಿಂದ ಒಂದು ವಾರಗಳ ಕಾಲ ಅಥವಾ ನಮ್ಮ ಬೇಡಿಕೆಗಳು ಈಡೇರುವ ವರೆಗೂ ಸಂಪೂರ್ಣವಾಗಿ ಧರಣಿಯನ್ನು ನಡೆಸುತ್ತೇವೆ. ಅಕ್ಟೋಬರ್ 20ರ ವರೆಗೂ ನಮ್ಮ ಬೇಡಿಕೆಗಲು ಈಡೇರದಿದ್ದಲ್ಲಿ, ಸಾಮೂಹಿಕವಾಗಿ ರಾಜಿನಾಮೆಯನ್ನು ನೀಡುತ್ತೇವೆ. ಅಕ್ಟೋಬರ್ 14ರಿಂದ ಎಲ್ಲಾ ತುರ್ತು ಸೇವೆಗಳಲ್ಲಿ ನಾವು ಲಭ್ಯರಿರುವುದಿಲ್ಲ,” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿಂದೆಯೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾದಾಗ ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸಿತ್ತು. ಮಾರ್ಚ್ 2020ರಿಂದ ಮೇ 2020ರವರೆಗಿನ ವೇತನ ಪಾವತಿಯಾಗದ ಕಾರಣಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮೇ 2020ರ ವರೆಗಿನ ವೇತನವನ್ನು ಜೂನ್ 19ರ ಒಳಗಾಗಿ ನೀಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿತ್ತು.
Also Read: ದೆಹಲಿ: ನಿವಾಸಿ ಸರ್ಕಾರಿ ವೈದ್ಯರ ವೇತನ ನೀಡಲು ಹೈಕೋರ್ಟ್ ಆದೇಶ
ಕೋವಿಡ್ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುವ ವೈದ್ಯರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ವೇತನ ಸಲ್ಲಿಸಲು ಹಿಂದೇಟು ಹಾಕುತ್ತಿರುವ ಸರ್ಕಾರದ ವಿರುದ್ದ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಕೋವಿಡ್ ವಾರಿಯರ್ಸ್‌ಗಳಿಗಾಗಿ ಚಪ್ಪಾಳೆ ತಟ್ಟಲು, ತಟ್ಟೆ ಬಡಿಯಲು ಹೇಳಿದ ಹಾಗೂ ಕೋವಿಡ್ ವಾರಿಯರ್ಸ್‌ಗಳಿಗೆ ಆಕಾಶದಿಂದ ಪುಷ್ಟವೃಷ್ಟಿ ಸುರಿಸಿದ ಸರ್ಕಾರ ಅವರ ವೇತನದ ವಿಚಾರ ಬಂದಾಗ ಅವರನ್ನು ವಾರಿಯರ್ಸ್‌ಗಳೆಂದು ನೆನಪಿನಲ್ಲಿ ಇಟ್ಟುಕೊಳ್ಳದಿರುವುದು ದ್ವಂದ್ವ ನೀತಿಯನ್ನು ಬಹಿರಂಗಪಡಿಸುತ್ತದೆ.
Also Read: ಗುತ್ತಿಗೆ ಆಧಾರಿತ ವೈದ್ಯರ ವೇತನ ಹೆಚ್ಚಿಸಲು ಸರ್ಕಾರದ ನಿರ್ಧಾರ









