ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿರುವ ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿದೆ. 193 ಸದಸ್ಯ ರಾಷ್ಟ್ರಗಳ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಭಾರತ 184 ದೇಶಗಳ ಮತವನ್ನು ಪಡೆದುಕೊಂಡಿದೆ. ಚುನಾವಣೆಯಲ್ಲಿ ಗೆಲ್ಲಲು 2/3 ಮತಗಳ ಆವಶ್ಯವಿದೆ, ಅಂದರೆ 128 ಮತಗಳು. ಆದರೆ ಭಾರತ 184 ಮತಗಳಿಂದ ಆಯ್ಕೆಗೊಂಡಿದೆ.
ವಿಶ್ವ ಸಂಸ್ಥೆಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆರನೇ ಬಾರಿ ಆಯ್ಕೆಯಾಗುತ್ತಿದೆ. 1950-1951, 1967-1968, 1972-1973, 1977-1978, 1984-1985, 1991-1992 ಹಾಗೂ ಕೊನೆಯ ಬಾರಿಗೆ 2011-2012 ರಲ್ಲಿ ಸದಸ್ಯ ರಾಷ್ಟ್ರವಾಗಿ ಆಯ್ಕೆಗೊಂಡಿತ್ತು.
ಭಾರತದೊಂದಿಗೆ ಐರ್ಲೆಂಡ್, ಮೆಕ್ಸಿಕೋ ಹಾಗೂ ನಾರ್ವೆ ದೇಶ ಕೂಡ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಗೊಂಡಿದೆ. ವಿಶೇಷವೆಂದರೆ ಭಾರತದೊಂದಿಗೆ ಗಡಿ ಕ್ಯಾತೆ ತೆಗೆದಿರುವ ಚೀನಾವು ಭಾರತದ ಪರ ಮತ ಚಲಾಯಿಸಿದೆ. ಚೀನಾ ಮಾತ್ರವಲ್ಲದೆ ಪಾಕಿಸ್ತಾನವೂ ವಿಶ್ವಸಂಸ್ಥೆಯಲ್ಲಿ ಭಾರತದ ಪರ ಮತ ಚಲಾಯಿಸಿದೆ.