ವಿಶ್ವದಲ್ಲಿ ಕರೋನಾ ಸೋಂಕು 20 ಲಕ್ಷ ಗಡಿ ದಾಟಿ ಮುಂದೆ ಓಡುತ್ತಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ್ಲಗಲಿ ಸೋಂಕು ಸರ್ಕಾರದ ಹಿಡಿತವನ್ನೂ ಮೀರಿ ಹೋಗುತ್ತಿದೆ. ವಿಶ್ವದಾದ್ಯಂತ 20 ಲಕ್ಷದ 4 ಸಾವಿರದ 819 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ ಬರೋಬ್ಬರಿ 6 ಲಕ್ಷದ 14 ಸಾವಿರದ 246 ಜನ ಸೋಂಕಿತರು ಅಮೆರಿಕ ಒಂದರಲ್ಲೇ ಇದ್ದಾರೆ. ಅದರಲ್ಲಿ ಬರೋಬ್ಬರಿ 26 ಸಾವಿರದ 64 ಜನರು ಸೋಂಕಿನ ವಿರುದ್ಧ ಹೋರಾಟ ಮಾಡುವಲ್ಲಿ ವಿಫಲರಾಗಿ ಸಾವಿನ ಮನೆ ಸೇರಿದ್ದಾರೆ. ವಿಶೇಷ ಅಂದ್ರೆ ಕೇವಲ 38 ಸಾವಿರದ 820 ಜನರು ಸೋಂಕಿನಿಂದ ಚೇತರಿಕೆ ಹೊಂದಿದ್ದಾರೆ. ಅಂದರೆ ಶೇಕಡವಾರು 60 ರಷ್ಟು ಜನರು ಕರೋನಾ ಸೋಂಕಿನಿಂದ ಚೇತರಿಸಿಕೊಂಡರೆ, ಶೇಕಡವಾರು 40ರಷ್ಟು ಜನರು ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ನಿನ್ನೆ ಒಂದೇ ದಿನ 2407 ಜನರು ಸಾವನ್ನಪ್ಪಿರುವುದು ಆಡಳಿತ ವರ್ಗವನ್ನು ಕಂಗಾಲಾಗುವಂತೆ ಮಾಡಿದೆ. ನ್ಯೂಯಾರ್ಕ್ ಒಂದರಲ್ಲೇ 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದಂತೆ ನ್ಯೂ ಜೆರ್ಸಿ, ಮ್ಯಾಸೆಚೂಟ್ಸ್, ಮಿಚಿಗಾನ್, ಕ್ಯಾಲಿಪೋರ್ನಿಯಾ ನಂತರದ ಸ್ಥಾನದಲ್ಲಿವೆ.
ವಿಶ್ವದಲ್ಲಿ ಕರೋನಾ ಸೋಂಕಿನಲ್ಲಿ 2ನೇ ಸ್ಥಾನದಲ್ಲಿದೆ ಸ್ಪೇನ್. ಒಟ್ಟು 1 ಲಕ್ಷದ 74 ಸಾವಿರದ 60 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 18 ಸಾವಿರದ 255 ಜನರು ಸೋಂಕಿನಿಂದ ಸಾವಿನ ಮನೆ ಸೇರಿದ್ದಾರೆ. 67 ಸಾವಿರದ 504 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಶೇಕಡವಾರು 21ರಷ್ಟು ಜನರು ಸಾವನ್ನಪ್ಪುತ್ತಿದ್ದು, ಶೇಕಟ 79ರಷ್ಟು ಜನರು ಗುಣಮುಖರಾಗುತ್ತಿದ್ದಾರೆ. 80 ಸಾವಿರದ 930 ಜನರಲ್ಲಿ ಇನ್ನೂ ಕೂಡ ಸೋಂಕು ಇದ್ದು, 7371 ಜನರು ತುಂಬಾ ಸೀರಿಯಸ್ ಆಗಿದ್ದಾರೆ. ನಿನ್ನೆ ಒಂದೇ ದಿನ 499 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಏರು ಗತಿಯಲ್ಲೇ ಸಾಗುತ್ತಿದೆ. ಇನ್ನೂ ನಿನ್ನೆ ಒಂದೇ ದಿನ 3961 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
3ನೇ ಸ್ಥಾನದಲ್ಲಿ ಇಟಲಿ ದೇಶವಿದ್ದು, ಒಟ್ಟು 1 ಲಕ್ಷದ 62 ಸಾವಿರದ 488 ಜನರಲ್ಲಿ ಕರೋನಾ ವೈರಸ್ dಆಂಗುಡಿ ಇಟ್ಟಿದೆ. ಒಟ್ಟು 37 ಸಾವಿರದ 130 ಜನರು ಸೋಂಕಿನಿಂದ ಗುಣಮುಖರಾಗಿದ್ದು, 21 ಸಾವಿರದ 67 ಜನರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಶೇಕಡವಾರು ಲೆಕ್ಕಾಚಾರ ನೋಡೋದಾದ್ರೆ 64 ರಷ್ಟು ಜನ ಗುಣಮುಖ ಆಗಿದ್ರೆ, ಶೇಕಡ 36 ರಷ್ಟು ಜನರು ಸಾವಿನ ಸಮಾಧಿ ಸೇರಿದ್ದಾರೆ. ಮೊದಲು ಇಟಲಿ ಸಾವಿನ ಬಗ್ಗೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಇದೀಗ ಅಮೆರಿಕ ಇಟಲಿಯನ್ನೇ ಮೀರಿ ಮುಂದೆ ಸಾಗಿದೆ.
4ನೇ ಸ್ಥಾನದಲ್ಲಿರುವ ಫ್ರಾನ್ಸ್ ನಲ್ಲಿ ಒಟ್ಟು 1 ಲಕ್ಷದ 43 ಸಾವಿರದ 303 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 28 ಸಾವಿರದ 805 ಜನರು ಗುಣಮುಖರಾಗಿದ್ದು, 15 ಸಾವಿರದ 729 ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾವಿರ ಅಂಕಿ ಸಂಖ್ಯೆಯಲ್ಲಿ ಫ್ರಾನ್ಸ್ ಕೂಡ ನಾಗಾಲೋಟದಲ್ಲಿ ಸಾಗಿದ್ದು, ಶೇಕಡ 65ರಷ್ಟು ಜನರು ಗುಣಮುಖರಾಗಿದ್ದರೆ, ಶೇಕಡ 35 ರಷ್ಟು ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 762 ಜನರು ಸಾವನ್ನಪ್ಪಿದ್ದು, 6524 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಟಾಪ್ ಫೈವ್ ಸ್ಥಾನದಲ್ಲಿ ಜರ್ಮನಿ ಇದ್ದು, ಸೋಂಕಿತರ ಸಂಖ್ಯೆ 1 ಲಕ್ಷದ 32 ಸಾವಿರದ 210 ಆಗಿದೆ. 72 ಸಾವಿರದ 600 ಜನರು ಗುಣುಮುಖರಾಗಿದ್ದು 3495 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಕೇವಲ 5 ಪರ್ಸೆಂಟ್ ಆಗಿದ್ದು, ಉತ್ತಮ ಸ್ಥಿತಿಯಲ್ಲಿದೆ. ಆದರೆ ಭಾರತ 19ನೇ ಸ್ಥಾನದಲ್ಲಿ ಇರುವ ಭಾರತ 11 ಸಾವಿರದ 555 ಸೋಂಕಿತರನ್ನು ಹೊಂದಿದ್ದು, 396 ಜನರು ಸಾವನ್ನಪ್ಪಿದ್ದಾರೆ. 1362 ಜನರು ಚೇತರಿಸಿಕೊಂಡಿದ್ದು, ಸಾವಿನ ಶೇಕಡವಾರು 23ರಷ್ಟು ಹೊಂದಿದೆ. ಶೇಕಡ 77 ರಷ್ಟು ಜನರು ಚೇತರಿಕೆ ಕಾಣುತ್ತಿದ್ದಾರೆ. ಆದರೆ ವಿಶ್ವದ ಲೆಕ್ಕದಲ್ಲಿ ನೋಡುವುದಾದರೆ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ.ವಿಶ್ವದ ಅಂಕಿಸಂಖ್ಯೆ ಪ್ರಕಾರ ಶೇಕಡವಾಡು 21 ರಷ್ಟು ಮಂದಿ ಸಾವನ್ನಪ್ಪುತ್ತಿದ್ದರೆ, ಭಾರತದಲ್ಲಿ ಸಾವಿನ ಶೇಕಡವಾರು 23 ರಷ್ಟಿದೆ. ನಿನ್ನೆ ಒಂದೇ ದಿನ 1500 ಜನರು ಸೋಂಕಿಗೆ ತುತ್ತಾಗಿರುವುದು ಏರಿಕೆ ಕ್ರಮದಲ್ಲಿ ಸಾಗುತ್ತಿರುವ ಲಕ್ಷಣವಾಗಿದೆ. ಇದೀಗ 19ನೇ ಸ್ಥಾನದಲ್ಲಿರುವ ಭಾರತ ಶೀಘ್ರದಲ್ಲೇ ಪಟ್ಟಿಯಲ್ಲಿ ಮೇಲಕ್ಕೆ ಬರುವ ಎಲ್ಲಾ ಸಾಧ್ಯಗಳು ಇದೆ ಎನ್ನಲಾಗ್ತಿದೆ.









