ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.
Also Read: ಹಳೇ ಮೈಸೂರು ಭಾಗದ ಹಿಡಿತಕ್ಕೆ BY ವಿಜಯೇಂದ್ರ ತಯಾರಿ..!
ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಗೆಲುವಿನಲ್ಲಿ ವಿಜಯೇಂದ್ರ ಅವರ ಪಾಲು ದೊಡ್ಡದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಕೇಳಿ ಬಂದಿದ್ದವು. ಅಲ್ಲದೆ, ವಿಜಯೋತ್ಸವದಲ್ಲಿ ವಿಜಯೇಂದ್ರ ಅವರನ್ನು ಅಭಿಮಾನಿಗಳು ಹೊತ್ತು ಸಂಭ್ರಮಾಚರಣೆ ಮಾಡಿದ್ದರು, ಇದು ಬಿಜೆಪಿ ಹಿರಿಯ ನಾಯಕರಲ್ಲಿ ಸಾಕಷ್ಟು ಇರಿಸು-ಮುರಿಸು ತಂದಿದೆ. ಅದರಲ್ಲಿ, ಕೆ ಎಸ್ ಈಶ್ವರಪ್ಪ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
Also Read: ಬಿಜೆಪಿ ಗೆಲುವು: ವಿಜಯೇಂದ್ರರನ್ನು ಹೊತ್ತು ಸಂಭ್ರಮಾಚರಿಸಿದ ಕಾರ್ಯಕರ್ತರು

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದೆ ಈಶ್ವರಪ್ಪ, ಕೆಲವು ಮಾಧ್ಯಮಗಳು ವಿಜಯೇಂದ್ರ ಅವರನ್ನು ವಿಪರೀತವಾಗಿ ವೈಭವೀಕರಿಸುತ್ತಿದೆ. ಅದರ ಕುರಿತು ನನಗೇನು ಅಭ್ಯಂತರವಿಲ್ಲ. ಆದರೆ ಬಿಜೆಪಿ ಓರ್ವನ ಪ್ರಯತ್ನದಿಂದ ಗೆಲ್ಲುವುದಲ್ಲ, ಅದರಲ್ಲಿ ಹಲವಾರು ನಾಯಕರ, ಸಾವಿರಾರು ಕಾರ್ಯಕರ್ತರ ಪರಿಶ್ರಮವಿರುತ್ತದೆ. ಸಂಘಟಿತ ಪರಿಶ್ರಮದಿಂದ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.
Also Read: ಭವಿಷ್ಯದಲ್ಲಿ ಕೆ.ಆರ್.ಪೇಟೆ ಮೇಲೆ ಕಣ್ಣಿಟ್ಟೇ ಬಿಜೆಪಿ ಗೆಲ್ಲಿಸಿದ ವಿಜಯೇಂದ್ರ
ಪ್ರತಿ ವಿಧಾನಸಬೆ ಚುನಾವಣೆಗೂ ನಾಲ್ಕರಿಂದ ಐದು ಮಂದಿಯನ್ನು ಉಸ್ತುವಾರಿಯಾಗಿ ನೇಮಿಸಲಾಗುತ್ತದೆ. ಅದೇ ಮಾದರಿಯಲ್ಲಿ ಆರ್‌ಆರ್ ನಗರ ಹಾಗೂ ಶಿರಾದಲ್ಲೂ ಉಸ್ತುವಾರಿ ನೇಮಿಸಲಾಗಿತ್ತು. ಈ ಕ್ಷೇತ್ರಗಳಲ್ಲಿ ಅಶ್ವಥ್ ನಾರಾಯಣ, ಅಶೋಕ್ ಮೊದಲಾದವರ ಪ್ರಯತ್ನವೂ ಇದೆ. ಹಾಗೆಯೇ ವಿಜಯೇಂದ್ರ ಅವರೂ ಪ್ರಯತ್ನ ಪಟ್ಟಿದ್ದಾರೆ. ಆದರೆ ವಿಜಯೇಂದ್ರ ಅವರನ್ನು ಮಾತ್ರ ವೈಭವೀಕರಿಸಲಾಗುತ್ತಿದೆ, ಇದಕ್ಕೆ ನಾವೇನು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.
Also Read: BS ವಿಜಯೇಂದ್ರ ವಿರುದ್ಧ ಹೈಕಮಾಂಡ್‌ಗೆ ದೂರು ಕೊಟ್ಟವರು ಯಾರು..?