ವಾಹನದಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಿಬಿಎಂಪಿ ಹೊರಡಿಸಿರುವ ಆದೇಶದಲ್ಲಿ ಹೇಳಿದೆ.
ಒಬ್ಬರೇ ಇರುವಾಗ ಮಾಸ್ಕ್ ಧರಿಸಬೇಕೆ ಬೇಡವೇ, ಧರಿಸದಿದ್ದರೆ ದಂಡ ಕಟ್ಟಬೇಕೆ ಮೊದಲಾದ ಗೊಂದಲಗಳಿಗೆ ಆ ಮೂಲಕ ಬಿಬಿಎಂಪಿ ತೆರೆ ಹಾಕಿದೆ.
ಆಹಾರ ಸೇವಿಸುವಾಗ, ನೀರು ಕುಡಿಯುವಾಗ, ಬಾಯಿಯ ಅಗತ್ಯ ಇರುವ ಯಾವುದಾದರೂ ಕೆಲಸ ಮಾಡುವಾಗ, ಮುಖ ಒದ್ದೆಗೊಳಿಸಬೇಕಾದಂತಹ ಸಂಧರ್ಭವಿದ್ದಾಗ(ಸ್ನಾನ, ಈಜು), ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಮುಖ ಗುರುತಿಗೆ, ಶ್ರವಣ ದೋಷ ಇರುವವರೊಂದಿಗೆ ಸಂವಹನ ನಡೆಸುವಾಗ, ಹಲ್ಲು, ಅಥವಾ ವೈದ್ಯಕೀಯ ಚಿಕಿತ್ಸೆ ಸಂಧರ್ಭದಲ್ಲಿ ಮಾತ್ರ ಮಾಸ್ಕ್‌ಗೆ ವಿನಾಯಿತಿ ನೀಡಲಾಗಿದೆ.
ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಜನರು ಸಂವಹನ ನಡೆಸುತ್ತಿದ್ದರೆ ಮಾಸ್ಕ್ ಕಡ್ಡಾಯ ಎಂದು ಬಿಬಿಎಂಪಿ ತಿಳಿಸಿದೆ. ಅದೇ ವೇಳೆ ಐದು ವರ್ಷ ಪ್ರಾಯಕ್ಕಿಂತ ಸಣ್ಣ ಮಕ್ಕಳಿಗೆ ಮಾಸ್ಕ್ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಎಲ್ಲಾ ಸಂಧರ್ಭದಲ್ಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬಿಬಿಎಂಪಿ ಹೇಳಿದೆ.



