ಪ್ರಪಂಚದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ (Mount everest) ಈಗ ಕಸದ ಮಡುವಿನಲ್ಲಿದೆ ಭೂಮಿಯ ಮೇಲೆ ಕಡಲ ಆಳದಲ್ಲಿ ಪ್ಲಾಸ್ಟಿಕ್ (Plastic) ಮತ್ತು ಕಸ ಪತ್ತೆಯಾಗಿದ್ದನ್ನು ನೋಡಿದ್ವಿ. ಇದೀಗ ಮೌಂಟ್ ಎವರೆಸ್ಟ್ ಗು ಕಸದ ಕಾಟ ತಪ್ಪಿಲ್ಲ.
ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಚಾರಣಿಗರು (Trucking) ಮೌಂಟ್ ಎವರೆಸ್ಟ್ ಪರ್ವತವನ್ನು ಏರಲು ಬಯಸುತ್ತಾರೆ. ಈ ಪೈಕಿ ಪ್ರತಿ ವ್ಯಕ್ತಿಯೂ ಕೂಡ ಎಂಟು ಕೆಜಿ (8kg) ಕಸವನ್ನು ಉತ್ಪತ್ತಿ ಮಾಡುತ್ತಾನೆ. ಇನ್ನು ಬಹುತೇಕರು ಟ್ರಕ್ಕಿಂಗ್ ಗೆ ಹೊರಟವರು ಅಲ್ಲೇ ಹೆಣವಾದದ್ದು ,ಇದೆ ಹೀಗಾಗಿ ಸದ್ಯ ಮೌಂಟ್ ಎವರೆಸ್ಟ್ ನಲ್ಲಿ ಒಟ್ಟು 40 ರಿಂದ 50 ಟನ್ ಕಸದ ರಾಶಿ ಸೃಷ್ಟಿಯಾಗಿದೆ.
ಸದ್ಯ 11 ಟನ್ (11 ton) ಕಸವನ್ನು ಹೊರತೆಗೆಯಲಾಗಿದ್ದು, ಈ ಪೈಕಿ ನಾಲ್ಕು ಮೃತ ದೇಹ ಒಂದು ಅಸ್ತಿಪಂಜರ ಕೂಡ ಪತ್ತೆಯಾಗಿದೆ. ಎಷ್ಟೋ ವರ್ಷಗಳ ಹಿಂದೆ ಟ್ರಕ್ಕಿಂಗ್ ಗೆ ಹೊರಟವರು ಶವವಾಗಿದ್ದವರು ಈಗ ಮೃತ ದೇಹಗಳಾಗಿ ಪತ್ತೆಯಾಗಿದ್ದಾರೆ.
ಒಟ್ನಲ್ಲಿ ಮನುಷ್ಯ ತಾನು ಹೋದಲ್ಲ ಪ್ರಕೃತಿಯನ್ನು ಘಾಸಿಗೊಳಿಸಿ ಕಸದ ರಾಶಿ ಸೃಷ್ಟಿಸುವುದನ್ನ ಬಿಡಬೇಕಿದೆ ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಪ್ರಕೃತಿಯ ಮುನಿಸನ್ನು ಎದುರಿಸಲು ತಯಾರಾಗಬೇಕಿದೆ.