ರಾಜ್ಯದಾದ್ಯಂತ ಈಗಾಗಲೇ ಮುಂಗಾರು (Mansoon) ಚುರುಕು ಪಡೆದುಕೊಂಡಿದ್ದು ಕೆಲವು ಜಿಲ್ಲೆಗಳಲ್ಲಿ ರೆಡ್ ಲೈಟ್ (Red alert) ಇನ್ನೂ ಕೆಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange alert) ಘೋಷಿಸಲಾಗಿದೆ .ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲೂ (Bangalore) ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಹೀಗಾಗಿ ಇಂದು ಸಂಜೆ ನಂತರದಲ್ಲಿ ರಾಜಧಾನಿಯ ಬಹುತೇಕ ಏರಿಯಾಗಳಲ್ಲಿ ವ್ಯಾಪಕ ಮಳೆಯಾಗಿದೆ ಎಂದಿನಂತೆ ಮಳೆಯ ಹಿನ್ನೆಲೆ ವಾಹನ ಸವಾರರು ಟ್ರಾಫಿಕ್ (Traffic) ನಲ್ಲಿ ಸಿಲುಕಿ ಕಿರಿಕಿರಿ ಅನುಭವಿಸುವಂತೆ ಆಯ್ತು.
ಇನ್ನು ಮುಂದಿನ ಮೂರ್ನಾಲ್ಕು ದಿನ ಬೆಂಗಳೂರಿನಲ್ಲಿ ಉತ್ತಮ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು , ಬೆಂಗಳೂರಿಗರು ನಿದ್ದೆಗೆಡುವ ಪರಿಸ್ಥಿತಿಗೆ ಸಿದ್ಧವಾಗಬೇಕಿದೆ.






