• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೂಜೆ ಸಲ್ಲಿಸಲು ಮಂತ್ರಾಲಯ ಮಠದ ಪರ ಹೈಕೋರ್ಟ್ ತೀರ್ಪು

ಪ್ರತಿಧ್ವನಿ by ಪ್ರತಿಧ್ವನಿ
July 9, 2024
in Top Story, ಅಂಕಣ, ಇದೀಗ, ಕರ್ನಾಟಕ, ವಿಶೇಷ
0
ಪೂಜೆ ಸಲ್ಲಿಸಲು ಮಂತ್ರಾಲಯ ಮಠದ ಪರ ಹೈಕೋರ್ಟ್ ತೀರ್ಪು
Share on WhatsAppShare on FacebookShare on Telegram

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ (Nava Brindavana pooja controversy) ಸಂಬಂಧಿಸಿದಂತೆ ಪೂಜಾ ಸಲ್ಲಿಸಲು ಮಂತ್ರಾಲಯ ಮಠದ ಪರ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ. ಆ ಮೂಲಕ ಸುಬುಧೇಂದ್ರ ತೀರ್ಥರು ನವವೃಂದಾವನಗಡ್ಡೆ ಪ್ರವೇಶ ಮಾಡಿದ್ದಾರೆ. ಹೀಗಾಗಿ ಮಂತ್ರಾಲಯದ ಮಠದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಪರಸ್ಪರ ಬಣ್ಣ ಎರಚಾಡಿ, ಪಟಾಕಿ ಸಿಡಿಸಿ, ನೃತ್ಯ ಮಾಡಿ ರಾಯರ ಮಠದ ಭಕ್ತರು ಸಂಭ್ರಮಿಸಿದ್ದಾರೆ. ಈ ವಿಜಯೋತ್ಸವದಲ್ಲಿ ನೂರಾರು ರಾಯರ ಮಠದ ಭಕ್ತರು ಭಾಗಿ ಆಗಿದ್ದರು.

ADVERTISEMENT

ಆನೆಗುಂದಿಯ ನವಬೃಂದಾವನದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದವರಿಗೆ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸುವಂತೆ ಉತ್ತಾರಾಧಿಮಠ ಧಾರವಾಡ ಹೈಕೋರ್ಟ್​ ಮೆಟ್ಟಿಲೇರಿತ್ತು. ಉತ್ತಾರಾಧಿಮಠ ಅರ್ಜಿ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ, ಉತ್ತಾರಾಧಿಮಠ ಅರ್ಜಿಯನ್ನು ಪುರಸ್ಕರಿಸಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಬಳಿಕ ಶ್ರೀ ರಾಘವೇಂದ್ರಸ್ವಾಮಿ ಮಠವು ಧಾರವಾಡ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಸತ್ಯಕ್ಕೆ ಜಯ ಸಿಕ್ಕಿದೆ ಎಂದ ಸುಬುಧೇಂದ್ರತೀರ್ಥ ಸ್ವಾಮೀಜಿ

ಮಂತ್ರಾಲಯ ರಾಯರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಮಠದ ಪರವಾಗಿ ಬಂದಿದೆ. ಮೂವರ ಯತಿಗಳ ಪೂಜೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಪೂರ್ವ ಪದ್ಮನಾಭ ತೀರ್ಥರು ಸೇರಿದಂತೆ ಮೂವರು ಯತಿವರ್ಯರಾದ ಕವೀಂದ್ರತೀರ್ಥ, ವಾಗೀಶತೀರ್ಥ, ಪದ್ಮನಾಭ ತೀರ್ಥರ ವೃಂದಾವನಗಳಿಗೆ ಇಂದು ಪೂಜೆ ನಡೆಯುತ್ತದೆ ಎಂದು ಹೇಳಿದ್ದಾರೆ.

ನವವೃಂದಾವನದಲ್ಲಿ ನಮ್ಮ ಪೂರ್ವರ ವೃಂದಾವನಗಳಿವೆ. ಆದರೆ ಇನ್ನೊಂದು ಮಠದವರು ವಿನಾಕಾರಣ ದೂರನ್ನು ನೀಡಿದ್ದರು. ಮಂತ್ರಾಲಯ ಮಠದವರಿಗೆ ಪೂಜೆಗೆ ಅವಕಾಶ ನೀಡಬಾರದು ಅಂತ ದಾವೆ ಸಲ್ಲಿಸಿದ್ದರು. ನವವೃಂದಾವನದಲ್ಲಿರುವ ಯತಿವರ್ಯರ ಪೂಜೆ ಮಾಡಬಾರದು ಅಂತ ದಾವೆ ಸಲ್ಲಿಸಿದ್ದರು. ಮಂತ್ರಾಲಯ ರಾಘವೇಂದ್ರ ಮಠ ಇನ್ನುಳಿದ ಮಠದ ಮೇಲೆ ಯಾವುದೇ ದ್ವೇಷ ಹೊಂದಿಲ್ಲ. ಇನ್ನೊಂದು ಮಠದವರು ನಮ್ಮ ಮೇಲೆ ಕೇಸ್ ಹಾಕಿದ್ದರು. ನಾವು ಯಾರ ಮೇಲೂ ಕೇಸ್ ಹಾಕಿರಲಿಲ್ಲ. ಇದೀಗ ನಮಗೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.

ನವವೃಂದಾವನ ಗಡ್ಡೆಯಲ್ಲಿ ನಾವು ಆರಾಧನೆ ಮಾಡಬಾರದು ಎಂದು ದಾವೆ ಹೂಡಿದ್ದರು. ಇದಕ್ಕೆ ಯಾವುದೇ ದಾಖಲಾತಿ ಒದಗಿಸಲಿಲ್ಲ. ಹೀಗಾಗಿ ದಾವೆಯಲ್ಲಿ ಅವರು ವಿಫಲವಾಗಿದ್ದಾರೆ. ಕೆಳಗಿನ ಕೋರ್ಟ್ ನಮ್ಮ ದಾಖಲಾತಿ ಒಪ್ಪಿ ನಮ್ಮ ಪರವಾಗಿ ತೀರ್ಪು ನೀಡಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಎರಡನೇ ಅಪೀಲಿನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ನಮ್ಮ ಮಠಕ್ಕೆ ಪೂಜೆ ಮಾಡುವ ಅವಕಾಶ ನೀಡಿದೆ. ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಯಾವುದೇ ವಿಚಾರಗಳಲ್ಲಿ ರಾಯರ ಮಠ ವಿವಾದ ಮಾಡಿಲ್ಲ

ಪದ್ಮನಾಭ, ಕವೀಂದ್ರ, ವಾಗೀಶ ತೀರ್ಥರ ಆರಾಧನೆಯ ಸುದೀರ್ಘ ವಿವಾದವನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಈ ವಿವಾದವನ್ನು ಮುಂದುವರೆಸುತ್ತಾರಾ ಎನ್ನುವುದಕ್ಕೆ ಇನ್ನೊಂದು ಮಠದವರು ಉತ್ತರ ನೀಡಬೇಕು. ನಮ್ಮ ಮಠ ಸೌಹಾರ್ದಕ್ಕೆ ತೆರೆದ ಬಾಗಿಲು. ಎಲ್ಲರೂ ಸೇರೋಣ ಸೌಹಾರ್ದಯುತವಾಗಿ ಪರಿಷ್ಕರಿಸೋಣ. ಇಬ್ಬರೂ ಸೇರಿ ಸಂತೋಷದಿಂದ ಪೂಜೆ ಮಾಡೋಣ. ಸಂಧಾನದ ಹಸ್ತ ನಮ್ಮ ಕೈ ಯಾವಾಗಲೂ ಚಾಚಿರುತ್ತೇವೆ. ಯಾವುದೇ ವಿಚಾರಗಳಲ್ಲಿ ರಾಯರ ಮಠ ವಿವಾದ ಮಾಡಿಲ್ಲ. ಇನ್ನೊಂದು ಮಠದವರು ನಮ್ಮ ಮಠದ ಮೇಲೆ‌ ಕೇಸ್ ಹಾಕಿದ್ದರು ಎಂದು ಹೇಳಿದ್ದಾರೆ.

Tags: gangavathihigh courtKoppalMantralayaraghavendraswamySubudhendra Swamiji
Previous Post

ಮೌಂಟ್ ಎವರೆಸ್ಟ್ ನಲ್ಲಿ ರಾಶಿ ರಾಶಿ ಕಸ ! ಹಿಮದಲ್ಲಿ ಹುದುಗಿಹೋದ ಚಾರಣಿಗರು ! 

Next Post

ಅನಂತ್‌ ಅಂಬಾನಿ ವಿವಾಹ ; ಮುಂಬೈನ ಬಾಂದ್ರಾದಲ್ಲಿ ಹೋಟೆಲ್‌ ರೂಂ ಸೋಲ್ಡ್‌ ಔಟ್‌

Related Posts

ನಾಯಿಯ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ: ಕಾರಣವೇನು
Top Story

ನಾಯಿಯ ಮುಖವಾಡ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ: ಕಾರಣವೇನು

by ಪ್ರತಿಧ್ವನಿ
August 19, 2026
0

ವಿರುದ್ಧ ಸಾಮಾನ್ಯವಾಗಿ ಪ್ರತಿಭಟನೆ, ಧರಣಿ, ರಸ್ತೆ ತಡೆ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸುವುದನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶಿಷ್ಟ ಪ್ರತಿಭಟನೆಯೊಂದು...

Read moreDetails
ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡ ಮೊದಲ ಪತಿ ಸಂಜಯ್ ಸಿಂಗ್ ನಿಧನ

ರೇಣುಕಾಸ್ವಾಮಿ ಪ್ರಕರಣದ ಆರೋಪಿ ಪವಿತ್ರಾ ಗೌಡ ಮೊದಲ ಪತಿ ಸಂಜಯ್ ಸಿಂಗ್ ನಿಧನ

August 19, 2026
ಮಕ್ಕಳು, ಪ್ರವಾಸಿಗರಿಗೆ ಗುಡ್‌ನ್ಯೂಸ್‌ ಕೊಟ್ಟ ಕೆ.ಜೆ.ಜಾರ್ಜ್; ಹೇಳಿದ್ದೇನು?

ಮಕ್ಕಳು, ಪ್ರವಾಸಿಗರಿಗೆ ಗುಡ್‌ನ್ಯೂಸ್‌ ಕೊಟ್ಟ ಕೆ.ಜೆ.ಜಾರ್ಜ್; ಹೇಳಿದ್ದೇನು?

August 19, 2026
ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ ಏನು?

ಕೃಷಿ ಸಚಿವ ನರೇಂದ್ರಸ್ವಾಮಿ ಮನವಿಗೆ ಕೇಂದ್ರ ಸ್ಪಂದನೆ ಏನು?

August 19, 2026
ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

August 19, 2026
Next Post
ಅನಂತ್‌ ಅಂಬಾನಿ ವಿವಾಹ ; ಮುಂಬೈನ ಬಾಂದ್ರಾದಲ್ಲಿ ಹೋಟೆಲ್‌ ರೂಂ ಸೋಲ್ಡ್‌ ಔಟ್‌

ಅನಂತ್‌ ಅಂಬಾನಿ ವಿವಾಹ ; ಮುಂಬೈನ ಬಾಂದ್ರಾದಲ್ಲಿ ಹೋಟೆಲ್‌ ರೂಂ ಸೋಲ್ಡ್‌ ಔಟ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada